ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ: ರಿಲಯನ್ಸ್‌ ಕಂಪನಿ ವಿರುದ್ಧ ಬ್ಯಾಂಕ್ ಆಫ್ ಬರೋಡಾದಿಂದ ವಂಚನೆ ಆರೋಪ

Published : Sep 05, 2025, 11:42 AM IST
Anil Ambani

ಸಾರಾಂಶ

ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCom) ಮತ್ತು ಅದರ ಹಿಂದಿನ ನಿರ್ದೇಶಕ ಅನಿಲ್ ಅಂಬಾನಿ ಅವರ ಸಾಲದ ಖಾತೆಗಳನ್ನು ಬ್ಯಾಂಕ್ ಆಫ್ ಬರೋಡಾ ವಂಚನೆ ಎಂದು ಘೋಷಿಸಿದೆ.

ನವದೆಹಲಿ: ಮಹತ್ವದ ಘಟನೆಯೊಂದರಲ್ಲಿ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCom) ಮತ್ತು ಅದರ ಹಿಂದಿನ ನಿರ್ದೇಶಕ ಅನಿಲ್ ಅಂಬಾನಿ ಅವರ ಸಾಲದ ಖಾತೆಗಳನ್ನು ವಂಚನೆ ಎಂದು ಘೋಷಿಸಿದೆ ಎಂದು ಟಾಕ್ಸ್‌ ಎಕ್ಸ್‌ಚೇಂಜ್ ಫೈಲಿಂಗ್‌ ಸಂಸ್ಥೆಯೊಂದು ಹೇಳಿದೆ. (exchange filing ಎಂದರೆ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC) ಅಥವಾ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಂತಹ ನಿಯಂತ್ರಕ ಸಂಸ್ಥೆಗಳಿಗೆ ಪ್ರಮುಖ ಹಣಕಾಸು ಮತ್ತು ಕಾರ್ಪೊರೇಟ್ ಮಾಹಿತಿಯನ್ನು ಅಧಿಕೃತವಾಗಿ ಸಲ್ಲಿಸುವುದಾಗಿದೆ.)

ಆರ್‌ ಕಾಮ್ ವಿರುದ್ಧ ವಂಚನೆ ಆರೋಪ

ಇದು ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್, ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ (CIRP) ಪ್ರವೇಶಿಸುವ ಮೊದಲು ತೆಗೆದುಕೊಂಡ ಸಾಲಗಳಿಗೆ ಸಂಬಂಧಿಸಿದಾಗಿದೆ. ಈ ಬೆಳವಣಿಗೆಯೂ ಒಂದು ಕಾಲದಲ್ಲಿ ಪ್ರಮುಖವಾಗಿದ್ದ ಟೆಲಿಕಾಂ ಕಂಪನಿ ಮತ್ತು ಅದರ ಹಿಂದಿನ ನಿರ್ದೇಶಕರ ಸುತ್ತ ನಡೆಯುತ್ತಿರುವ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವಾಗಿದೆ.

ದಿವಾಳಿತನ ಮತ್ತು ದಿವಾಳಿತನ ಸಂಹಿತೆ (Insolvency and Bankruptcy Code-IBC) 2016 ರ ಅಡಿಯಲ್ಲಿ ಪ್ರಸ್ತುತ CIRPಗೆ ಒಳಗಾಗುತ್ತಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಈ ಪ್ರಶ್ನಾರ್ಹ ಸಾಲಗಳು ಹಾಗೂ ಅದರ ದಿವಾಳಿತನ ಪ್ರಕ್ರಿಯೆಗಳು ಪ್ರಾರಂಭವಾಗುವ ಮೊದಲಿನ ಅವಧಿಗೆ ಸಂಬಂಧಿಸಿದ್ದಾಗಿದೆ. ಈ ಸಾಲಗಳನ್ನು ಪರಿಹಾರ ಯೋಜನೆಯ ಭಾಗವಾಗಿ ಅಥವಾ IBC ಅಡಿಯಲ್ಲಿ ದಿವಾಳಿಯ ಮೂಲಕ ಪರಿಹರಿಸಬೇಕು ಎಂಬುದು ಕಂಪನಿಯ ಆಶಯವಾಗಿದೆ.

ಅನಿಲ್ ಅಂಬಾನಿ ಸಾಲದ ಖಾತೆಗಳೇ ಫ್ರಾಡ್ ಎಂದ ಬರೋಡಾ

ಆರ್‌ಕಾಮ್ ಪ್ರಸ್ತುತ ಅನೀಶ್ ನಿರಂಜನ್ ನಾನವತಿ ಎಂಬುವವರ ನಿಯಂತ್ರಣದಲ್ಲಿದ್ದು,. ಅನಿಲ್ ಅಂಬಾನಿ ಇನ್ನು ಮುಂದೆ ಈ ಕಂಪನಿಯ ನಿರ್ದೇಶಕರಾಗಿರುವುದಿಲ್ಲ. ಅನಿಲ್ ಅಂಬಾನಿ ಅವರ ವಕ್ತಾರರು ನೀಡಿರುವ ಹೇಳಿಕೆಯೊಂದರಲ್ಲಿ ಅವರು ಆರ್‌ಕಾಮ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ವ್ಯಕ್ತಿ ಅಲ್ಲ ಮತ್ತು ಕಂಪನಿಯ ದೈನಂದಿನ ಕಾರ್ಯಾಚರಣೆಗಳು ಅಥವಾ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಅವರು ಯಾವುದೇ ಪಾತ್ರವನ್ನು ಹೊಂದಿಲ್ಲ ಈ ವಿಚಾರವೂ 2013 ಕ್ಕೆ ಸಂಬಂಧಿಸಿದೆ ಎಂದು ಉಲ್ಲೇಖಿಸಲಾಗಿದೆ.

ಅನಿಲ್ ಡಿ. ಅಂಬಾನಿ ಅವರು 2006 ರಲ್ಲಿ ಸಂಸ್ಥೆ ಆರಂಭವಾದಾಗಿನಿಂದ 2019 ರಲ್ಲಿ ಮಂಡಳಿಗೆ ರಾಜೀನಾಮೆ ನೀಡುವವರೆಗೆ ಆರ್‌ಕಾಮ್ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮಾತ್ರ ಸೇವೆ ಸಲ್ಲಿಸಿದ್ದರು ಎಂಬುದನ್ನು ಗಮನಿಸುವುದು ಬಹಳ ಅಗತ್ಯ. 10 ವರ್ಷಗಳಿಗೂ ಹೆಚ್ಚು ಕಾಲದ ಅತಿಯಾದ ವಿಳಂಬದ ನಂತರ, ಆಯ್ದ ಸಾಲದಾತರು ಈಗ ಅಂಬಾನಿಯನ್ನು ಗುರಿಯಾಗಿಸಿಕೊಂಡು ಕ್ರಮಗಳನ್ನು ಪ್ರಾರಂಭಿಸಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಅನಿಲ್ ಡಿ. ಅಂಬಾನಿ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಾನೂನು ಸಲಹೆಯ ಪ್ರಕಾರ ಅವರಿಗೆ ಲಭ್ಯವಿರುವ ಪರಿಹಾರಗಳನ್ನು ಮಾಡುತ್ತಿದ್ದಾರೆ ಎಂದು ಅವರ ವಕ್ತಾರರು ಹೇಳಿದ್ದಾರೆ. ಆರ್‌ಕಾಮ್‌ಗಾಗಿ ಪರಿಹಾರ ಯೋಜನೆಯನ್ನು ಸಾಲಗಾರರ ಸಮಿತಿಯು ಅನುಮೋದಿಸಿದೆ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಿಂದ (ಎನ್‌ಸಿಎಲ್‌ಟಿ) ಅನುಮೋದನೆಗಾಗಿ ಕಾಯುತ್ತಿದೆ.

ಬ್ಯಾಂಕ್ ಆಫ್ ಬರೋಡಾದ ಕ್ರಮಕ್ಕೆ ಸಂಬಂಧಿಸಿದಂತೆ ಆರ್‌ಕಾಮ್ ಕಾನೂನು ಸಲಹೆ ಪಡೆಯುತ್ತಿದೆ. ಕಂಪನಿ ಸಿಐಆರ್‌ಪಿ ಸಮಯದಲ್ಲಿ, ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಮಧ್ಯಸ್ಥಿಕೆ ಸಮಿತಿಯಲ್ಲಿ ಯಾವುದೇ ತೀರ್ಪು ಅಥವಾ ಆದೇಶವನ್ನು ಕಾರ್ಯಗತಗೊಳಿಸುವುದು ಸೇರಿದಂತೆ, ಅದರ ವಿರುದ್ಧದ ಯಾವುದೇ ಮೊಕದ್ದಮೆಗಳು ಅಥವಾ ವಿಚಾರಣೆಗಳನ್ನು ಮುಂದುವರಿಸುವುದರಿಂದ ಕಂಪನಿಯು ರಕ್ಷಿಸಲ್ಪಟ್ಟಿದೆ ಎಂದು ಕಂಪನಿ ಹೇಳಿದೆ. ಅನಿಲ್ ಅಂಬಾನಿ ಅವರ ಸಮೂಹ ಸಂಸ್ಥೆಗಳಲ್ಲಿ ನಡೆದ ಸಾಲ ವಂಚನೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆಯ ಮಧ್ಯೆ ಈ ಬೆಳವಣಿಗೆ ನಡೆದಿದೆ.

ರಿಲಯನ್ಸ್ ಹೌಸಿಂಗ್ ಫೈನಾನ್ಸ್, ಆರ್‌ಕಾಮ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್‌ಗೆ ನೀಡಿದ ಸಾಲಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 12ರಿಂದ 13 ಬ್ಯಾಂಕ್‌ಗಳಿಂದ ವಿವರಗಳನ್ನು ಕೋರಿದೆ ಎಂದು ವರದಿಯಾಗಿದೆ. 17,000 ಕೋಟಿ ರೂಪಾಯಿಗಳ ವಂಚನೆ ಇದು ಎಂದು ಅಂದಾಜಿಸಲಾಗಿದೆ. ಈ ವಂಚನೆ ಪ್ರಕರಣವನ್ನು ಅಗತ್ಯವಿರುವ ವಿವಿಧ ಅಧಿಕಾರಿಗಳಿಗೆ ವರದಿ ಮಾಡುವುದಾಗಿ ಬ್ಯಾಂಕ್ ಆಫ್ ಬರೋಡಾ ಹೇಳಿದೆ. ಇದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೂಡ ಒಂದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!