ರಿಲಯನ್ಸ್ ದೇಶದ ಅತಿದೊಡ್ಡ ಆಕ್ಸಿಜನ್ ತಯಾರಕ..ಒಂದೇ ಘಟಕ

By Suvarna NewsFirst Published May 2, 2021, 3:04 PM IST
Highlights

ರಿಲಯನ್ಸ್ ನಿಂದ ವೈದ್ಯಕೀಯ ಆಮ್ಲಜನಕ ಉತ್ಪಾದನೆ/ ದೇಶದಲ್ಲಿಯೇ ಅತಿದೊಡ್ಡ ಘಟಕ/ ನಾಘರಿಕರ ಪ್ರಾಣ ಉಳಿಸುವುದು ನಮ್ಮ ಆದ್ಯತೆ/ ತನ್ನ ಸಿಬ್ಬಂದಿಗೆ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದ್ದ ಸಂಸ್ಥೆ

ಮುಂಬೈ (ಮೇ 2)  ಕೊರೋನಾ ಸಂಕಷ್ಟದ ಕಾಲ ಎದುರಿಸಲು ರಿಲಯನ್ಸ್ ಸಂಸ್ಥೆ ಆಕ್ಸಿಜನ್ ಪೂರೈಕೆ ಮಾಡುತ್ತೇನೆ ಎಂದು ತಿಳಿಸಿತ್ತು.  ಇದೀಗ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್  ದೇಶದಲ್ಲೇ ಅತಿದೊಡ್ಡ ಲಿಕ್ವಿಡ್ ಆಕ್ಸಿಜನ್ ಘಟಕ ನಿರ್ಮಾಣ ಮಾಡಿಕೊಂಡಿದೆ.,

ರಿಲಯನ್ಸ್ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್‌ ತಯಾರಿಕೆಗೆ ಹೆಜ್ಜೆ ಇಟ್ಟಿತ್ತು. ಜಾಮ್ ನಗರ ಮತ್ತು ಇತರೆ ಸ್ಥಳಗಳಲ್ಲಿನ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ಗಳಲ್ಲಿ ರಿಲಯನ್ಸ್ 1000  ಮೆಟ್ರಿಕ್ ಟನ್ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್‌ಗಳನ್ನು ಪ್ರತಿದಿನ ಉತ್ಪಾದಿಸುತ್ತಿದೆ. ಇದು ಭಾರತದ ಒಟ್ಟಾರೆ ಉತ್ಪಾದನೆಯ ಶೇ. 11ರಷ್ಟು. ಈ ಮೂಲಕ ದೇಶದ ಪ್ರತಿ ಹತ್ತು ರೋಗಿಗಳಲ್ಲಿ ಒಬ್ಬರ ಆಕ್ಸಿಜನ್ ಅಗತ್ಯ ರಿಲಯನ್ಸ್ ನಿಂದ ಪೂರೈಕೆಯಾಗುತ್ತಿದೆ.

ಅಂಬಾನಿ ಸಂಸ್ಥೆಯ ಸಿಬ್ಬಂದಿಗೆ  ರಿಲಯನ್ಸ್ ಲಸಿಕೆ

ರಿಲಯನ್ಸ್ ಮೂಲತಃ ಆಕ್ಸಿಜನ್ ಉತ್ಪಾದಕ ಸಂಸ್ಥೆ ಅಲ್ಲ.  ಕೊರೋನಾ  ಹೋರಾಟದ ಸಂದರ್ಭದಲ್ಲಿ ದೇಶದ ನಾಗರಿಕರ ಪ್ರಾಣ ಉಳಿಸುವುದು ನಮ್ಮ ಮುಂದಿನ ಆದ್ಯತೆಯಾಗಿತ್ತು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

ಜಾಮ್ನಗರದಲ್ಲಿರುವ ನಮ್ಮ ಇಂಜಿನಿಯರ್‌ಗಳು ಈ ಹೊಸ ಸವಾಲನ್ನು ಸ್ವೀಕರಿಸಿ ದಣಿವರಿಯದಂತೆ ಕೆಲಸ ಮಾಡುತ್ತಿದ್ದಾರೆ.  ಭಾರತಕ್ಕೆ ಹೆಚ್ಚಿನ ಅಗತ್ಯಬಿದ್ದ ಸಂದರ್ಭದಲ್ಲಿ ರಿಲಯನ್ಸ್ ಕುಟುಂಬದ ಯುವ ಸದಸ್ಯರು ಮತ್ತೆ ಸಕ್ರಿಯವಾಗಿ ಕೊಡುಗೆ ನೀಡುವ ನಂಬಿಕೆ ಇದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಜಾಮ್ನಗರದಲ್ಲಿರುವ ನಮ್ಮ ಸಂಸ್ಕರಣಾ ಘಟಕವನ್ನು ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆಗಾಗಿ ರಾತ್ರೋರಾತ್ರಿ ಪರಿವರ್ತಿಸಲಾಗಿದೆ. ಜನರು ಸಹಕಾರ ನೀಡಿದರೆ ಈ ಸನ್ನಿವೇಶವನ್ನು ದಿಟ್ಟವಾಗಿ ಎದುರಿಸಬಹುದು ಎಂದು  ಎಂದು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ-ಅಧ್ಯಕ್ಷೆ ನೀತಾ ಅಂಬಾನಿ ಹೇಳುತ್ತಾರೆ.

 ರಿಲಯನ್ಸ್  ದೇಶದ ವಿವಿಧ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುತ್ತಿದ್ದು, ಪ್ರತಿ ದಿನವೂ 1 ಲಕ್ಷಕ್ಕೂ ಅಧಿಕ ರೋಗಿಗಳು ಪಡೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾ ಅಲೆ ನಿಯಂತ್ರಣ ಮೀರಿ ಹೆಜ್ಜೆ ಇಟ್ಟಾಗ  ಅಂಬಾನಿ ಒಡೆತನದ ಸಂಸ್ಥೆ ಉಚಿತವಾಗಿ ಆಕ್ಸಿಜನ್ ನೀಡಿತ್ತು. 

 

"

click me!