ಪೆಟ್ರೋಲ್‌ ತೆರಿಗೆ ಇಳಿಕೆ: ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಕೇಂದ್ರದಿಂದ ಶೀಘ್ರ ರಿಲೀಫ್‌

By Kannadaprabha NewsFirst Published Aug 18, 2023, 9:46 AM IST
Highlights

ಹೆಚ್ಚುತ್ತಿರುವ ಹಣದುಬ್ಬರದಿಂದ ಹೈರಾಣಾಗಿರುವ ಜನಸಾಮಾನ್ಯರನ್ನು ಬೆಲೆ ಏರಿಕೆಯ ಬಿಸಿಯಿಂದ ತಡೆಗಟ್ಟಲು ಕೇಂದ್ರ ಸರ್ಕಾರ ಶೀಘ್ರ ಪೆಟ್ರೋಲ್‌ ಮೇಲಿನ ತೆರಿಗೆ ಪ್ರಮಾಣ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರದಿಂದ ಹೈರಾಣಾಗಿರುವ ಜನಸಾಮಾನ್ಯರನ್ನು ಬೆಲೆ ಏರಿಕೆಯ ಬಿಸಿಯಿಂದ ತಡೆಗಟ್ಟಲು ಕೇಂದ್ರ ಸರ್ಕಾರ ಶೀಘ್ರ ಪೆಟ್ರೋಲ್‌ ಮೇಲಿನ ತೆರಿಗೆ ಪ್ರಮಾಣ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಗೋಧಿ ಮತ್ತು ಖಾದ್ಯ ತೈಲದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಅವು ಹೇಳಿವೆ.

ದುಬಾರಿ ಪೆಟ್ರೋಲ್‌ ದರ, ಇತ್ತೀಚಿನ ದಿನಗಳಲ್ಲಿ ಟೊಮೆಟೋ, ತರಕಾರಿ, ಹಣ್ಣು ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಕುಳಿತಿದೆ. ಪರಿಣಾಮ ಕಳೆದ ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ (Inflation) ಪ್ರಮಾಣ ಶೇ.7.44ಕ್ಕೆ ತಲುಪಿತ್ತು. ಇದು ಕಳೆದ 15 ತಿಂಗಳಲ್ಲೇ ಗರಿಷ್ಠ ಪ್ರಮಾಣವಾಗಿತ್ತು. ಜೊತೆಗೆ ಹಿಂದಿನ ಜೂನ್‌ ತಿಂಗಳಿಗೆ ಹೋಲಿಸಿದರೆ ಶೇ.2.63ರಷ್ಟು ಭಾರೀ ಏರಿಕೆಯಾಗಿತ್ತು.

ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ವಂಚನೆ; ಎಚ್ಚರ ವಹಿಸುವಂತೆ ತೆರಿಗೆದಾರರಿಗೆ ಸರ್ಕಾರದ ಸಲಹೆ

ಹಣದುಬ್ಬರ ಇಳಿಕೆಗೆ ಸಾಲದ ಮೇಲಿನ ಬಡ್ಡಿದ ಇಳಿಕೆ ಸೇರಿದಂತೆ ಹಲವು ವಿತ್ತೀಯ ಕ್ರಮಗಳನ್ನು ಕಳೆದ ಒಂದು ವರ್ಷದಿಂದ ಚಾಲ್ತಿಯಲ್ಲಿಟ್ಟಿದ್ದ ಸರ್ಕಾರಕ್ಕೆ, ಈ ದಿಢೀರ್‌ ಏರಿಕೆ ಸಾಕಷ್ಟುಕಳವಳ ಮೂಡಿಸಿತ್ತು. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಬೆನ್ನಿಗಿರುವಾಗಲೇ ಈ ಹಣದುಬ್ಬರ ಸರ್ಕಾರಕ್ಕೆ ಮುಳುವಾಗಬಹುದು ಎಂಬ ಆತಂಕವೂ ಕೇಂದ್ರವನ್ನು ಕಾಡಿತ್ತು.

ಹೀಗೆಂದೇ ಆ.15ರಂದು ಕೆಂಪುಕೋಟೆಯಿಂದ ಮಾಡಿದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಣದುಬ್ಬರ ಇಳಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಮತ್ತು ಈ ಪ್ರಕ್ರಿಯೆ ಮುಂದುವರೆಸಲಿದೆ ಎಂದು ಭರವಸೆ ನೀಡಿದ್ದರು. ಅದರ ಬೆನ್ನಲ್ಲೇ ಇದೀಗ ಪೆಟ್ರೋಲ್‌ ಮತ್ತು ಆಹಾರ ವಸ್ತುಗಳನ್ನು ಅಗ್ಗ ಮಾಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಮೂನ್‌ಲೈಟಿಂಗ್ ಮಾಡೋರಿಗೆ ಶಾಕಿಂಗ್ ನ್ಯೂಸ್‌: ಹೆಚ್ಚುವರಿ ಆದಾಯ ಘೋಷಿಸದ ಸಾವಿರಾರು ಜನರಿಗೆ ಐಟಿ ನೋಟಿಸ್‌

ಇದರ ಜೊತೆಗೆ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ನಿಗದಿ ಮಾಡಿದ್ದ ಸುಮಾರು 1 ಲಕ್ಷ ಕೋಟಿ ರು.ನಷ್ಟು ಹಣವನ್ನು ಹಣದುಬ್ಬರ ನಿಯಂತ್ರಣ ಕ್ರಮಗಳಿಗೆ ವಿನಿಯೋಗಿಸುವ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

click me!