ದೀಪಾವಳಿಗೆ ದಾಖಲೆಯ ₹6.05 ಲಕ್ಷ ಕೋಟಿ ವಸ್ತು ಸೇಲ್‌!

Kannadaprabha News   | Kannada Prabha
Published : Oct 22, 2025, 03:17 AM IST
Online shopping

ಸಾರಾಂಶ

ಕೇಂದ್ರ ಸರ್ಕಾರದ ಜಿಎಸ್ಟಿ ಸುಧಾರಣೆಯಿಂದಾಗಿ ಈ ಬಾರಿ ಹಬ್ಬದ ಖರೀದಿ ಭರಾಟೆ ಜೋರಾಗಿಯೇ ನಡೆದಿದೆ. ನವರಾತ್ರಿಯಿಂದ ದೀಪಾವಳಿತನಕದ ಹಬ್ಬದ ಸೀಸನ್‌ನಲ್ಲಿ ದೇಶದಲ್ಲಿ ಸುಮಾರು 5.40 ಲಕ್ಷ ಕೋಟಿ ಮೌಲ್ಯದ ವಸ್ತುಗಳು ಮಾರಾಟವಾಗಿವೆ.

ನವದೆಹಲಿ: ಕೇಂದ್ರ ಸರ್ಕಾರದ ಜಿಎಸ್ಟಿ ಸುಧಾರಣೆಯಿಂದಾಗಿ ಈ ಬಾರಿ ಹಬ್ಬದ ಖರೀದಿ ಭರಾಟೆ ಜೋರಾಗಿಯೇ ನಡೆದಿದೆ. ನವರಾತ್ರಿಯಿಂದ ದೀಪಾವಳಿತನಕದ ಹಬ್ಬದ ಸೀಸನ್‌ನಲ್ಲಿ ದೇಶದಲ್ಲಿ ಸುಮಾರು 5.40 ಲಕ್ಷ ಕೋಟಿ ಮೌಲ್ಯದ ವಸ್ತುಗಳು ಮಾರಾಟವಾಗಿವೆ. ಅದೇ ರೀತಿ, 65 ಸಾವಿರ ಕೋಟಿ ಮೌಲ್ಯದ ರು. ಸೇವೆಗಳನ್ನೂ ಈ ಅವಧಿಯಲ್ಲಿ ಗ್ರಾಹಕರು ಪಡೆದಿದ್ದಾರೆ. ಇದರೊಂದಿಗೆ ಸರಕು ಹಾಗೂ ಸೇವೆ ಎರಡನ್ನೂ ಸೇರಿಸಿ ದಾಖಲೆಯ 6.05 ಲಕ್ಷ ಕೋಟಿ ರು. ವಹಿವಾಟು ನಡೆದಿದೆ.

ದೇಶದ ರಿಟೇಲ್‌ ಮತ್ತು ಟ್ರೇಡಿಂಗ್‌ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ವಸ್ತುಗಳ ಮಾರಾಟ ಆಗಿರುವುದು ಇದೇ ಮೊದಲು. ಇದು ದೇಶದ ರಿಟೇಲ್‌ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿದ ‘ಹಬ್ಬದ ಸೀಸನ್‌’ ಎಂದು ಹೇಳಲಾಗುತ್ತಿದೆ.

2024ರ ನವರಾತ್ರಿಯಿಂದ ದೀಪಾವಳಿವರೆಗೆ 4.24 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳು ಮಾರಾಟ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ.25ರಷ್ಟು ಹೆಚ್ಚು ವಸ್ತುಗಳ ಮಾರಾಟ ದಾಖಲಾಗಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಸಮೀಕ್ಷಾ ವಿಭಾಗವಾದ ‘ಸಿಐಎಟಿ ರೀಸರ್ಚ್‌ ಮತ್ತು ಟ್ರೇಡ್‌ ಡೆವಲಪ್‌ಮೆಂಟ್‌ ಸೊಸೈಟಿ’ ಹೇಳಿದೆ.

ಗೃಹಬಳಕೆ ಉತ್ಪನ್ನ ಅಧಿಕ:

ಒಟ್ಟಾರೆ ಮಾರಾಟದಲ್ಲಿ ರೀಟೇಲ್‌ ಕ್ಷೇತ್ರದ ಪಾಲು ಶೇ.85ರಷ್ಟಿದೆ. ಈ ಮೂಲಕ ಗೃಹ ಬಳಕೆ ವಸ್ತುಗಳು, ಸಿದ್ಧಉಡುಪುಗಳು ಮತ್ತು ನಿತ್ಯ ಬಳಕೆ ವಸ್ತುಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ಸ್ಪಷ್ಟ.

ಈ ದೀಪಾವಳಿ ಖರೀದಿ ಕುರಿತು ಸಿಎಐಟಿ ನಡೆಸಿದ ಸರ್ವೆಯಲ್ಲಿ ಪಾಲ್ಗೊಂಡ ಶೇ.72ರಷ್ಟು ಮಾರಾಟಗಾರರು ಖರೀದಿ ಭರಾಟೆ ಜೋರಾಗಲು ಜಿಎಸ್ಟಿ ಕಡಿತವೇ ಮೂಲ ಕಾರಣ ಎಂದು ಹೇಳಿಕೊಂಡಿದ್ದಾರೆ.

ಈ ಬಾರಿಯ ಹಬ್ಬದ ಸೀಸನ್‌ನಲ್ಲಿ ಖರೀದಿ ಪ್ರಕ್ರಿಯೆ ಜೋರಾಗಲು ಗ್ರಾಮೀಣ ಮತ್ತು ಸೆಮಿ ಅರ್ಬನ್‌ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆಯೂ ಮತ್ತೊಂದು ಪ್ರಮುಖ ಕಾರಣವಾಗಿದೆ. ದೇಶಾದ್ಯಂತ ಆಗಿರುವ ಮಾರಾಟದಲ್ಲಿ ಶೇ.28ರಷ್ಟು ಪಾಲು ಈ ಮಾರುಕಟ್ಟೆಯದ್ದಾಗಿದೆ. ಈ ಮೂಲಕ ಈ ಪ್ರದೇಶದ ಜನರಲ್ಲಿ ಕೊಳ್ಳುವಿಕೆಯ ಶಕ್ತಿ ಹೆಚ್ಚಾಗಿರುವುದು ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ದೇಶದ ಆರ್ಥಿಕತೆಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆ ಇದೆ.

ಉದ್ಯೋಗ ಸೃಷ್ಟಿ:

ಈ ಬಾರಿಯ ದೀಪಾವಳಿಯು ಭರ್ಜರಿ ಮಾರಾಟಕ್ಕಷ್ಟೇ ಅಲ್ಲ, ಭಾರೀ ಪ್ರಮಾಣದ ತಾತ್ಕಾಲಿಕ ಉದ್ಯೋಗ ಸೃಷ್ಟಿಗೂ ಅವಕಾಶ ಮಾಡಿಕೊಟ್ಟಿದೆ.

ಲಾಜಿಸ್ಟಿಕ್‌, ಚಿಲ್ಲರೆ, ಪ್ಯಾಕೇಜಿಂಗ್‌ ಕ್ಷೇತ್ರದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿಗೆ ದೇಶಾದ್ಯಂತ ತಾತ್ಕಾಲಿಕ ಉದ್ಯೋಗ ದೊರೆತಿದೆ ಎಂದು ಅಂಕಿ-ಅಂಶಗಳು ಹೇಳಿವೆ.

- ಇದು ರಿಟೇಲ್‌, ಟ್ರೇಡಿಂಗ್‌ ಇತಿಹಾಸದಲ್ಲೇ ಮೊದಲು

- 5.40 ಲಕ್ಷ ಕೋಟಿ ರು. ಮೌಲ್ಯದ ವಸ್ತು ಮಾರಾಟ

- 65 ಸಾವಿರ ಕೋಟಿ ರು. ಮೌಲ್ಯದ ಸೇವೆ ಪಡೆದ ಜನರು

- ಕಳೆದ ವರ್ಷ 4.24 ಲಕ್ಷ ಕೋಟಿ ರು. ವಸ್ತು ಮಾರಾಟ

- ಈ ಸಲದ ಮಾರಾಟ ಕಳೆದ ಸಲಕ್ಕಿಂತ ಶೇ.25 ಅಧಿಕ

- ಜಿಎಸ್ಟಿ ಕಡಿತದ ಪ್ರಮಾಣ ಹೆಚ್ಚಾದ ಖರೀದಿ ಭರಾಟೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ