
ನವದೆಹಲಿ(ನ.10): ಆರ್ಬಿಐ ಇತ್ತೀಚಿಗೆ ನಾನ್ ಬ್ಯಾಂಕಿಂಗ್ ಆರ್ಥಿಕ ಸಂಸ್ಥೆಗಳ (ಎನ್ಬಿಎಫ್ಸಿ) ಮತ್ತು ಗೃಹ ಹಣಕಾಸು ಕಂಪನಿಗಳ(ಎಚ್ಎಫ್ಸಿ) ಬಡ್ಡಿದರ ಹೆಚ್ಚಿಸಿತ್ತು. ಇದರಿಂದ ಗೃಹ ಹಣಕಾಸು ಮಾರುಕಟ್ಟೆಯ ಹೌಸಿಂಗ್ ಫೈನಾನ್ಸ್ ಕಂಪನಿಗಳಲ್ಲಿ ಹಣಕಾಸಿನ ಸಮಸ್ಯೆ ತಲೆದೂರಿದೆ. ಗೃಹ ಖರೀದಿ ಮತ್ತು ರಿಯಲ್ ಎಸ್ಟೆಟ್ ಉದ್ಯಮಗಳು ಬಂಡವಾಳದ ಬಿಕ್ಕಟ್ಟು ಎದುರಿಸುತ್ತಿವೆ.
ಈ ಬೆಳವಣಿಗೆಯಿಂದ ಬ್ಯಾಂಕ್‌ಗಳಿಗೆ ಅನುಮೋದಿತ ಮನೆ ಸಾಲಗಳು ವಿತರಿಸಲು ಆಗುತ್ತಿಲ್ಲ. ಹಣದ ಬಿಕ್ಕಟ್ಟಿನಿಂದ ಗೃಹ ಸಾಲದ ಬಡ್ಡಿ ದರವು 50-75 ಬೇಸಿಸ್ ಪಾಯಿಂಟ್ಗಳ ಏರಿಕೆ ಆಗಿದೆ. ಎನ್ಬಿಎಫ್ಸಿಗಳು ತಮ್ಮ ಗೃಹ ಸಾಲದ ಖಾತೆಗಳ ಪೂರ್ವ ಪಾವತಿಗೆ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಉತ್ಸುಕರಾಗಿದ್ದಾರೆ.
ಎನ್ಬಿಎಫ್ಸಿಗಳು ₹ 30-40 ಕೋಟಿಯ ದೊಡ್ಡ ಮೊತ್ತದ ಚೆಕ್ ವಿತರಿಸಲು ಸಿದ್ಧವಾಗಿಲ್ಲ. ಸಂಸ್ಥೆಗಳಿಗೆ ನೀಡಿದ ಕ್ರೆಡಿಟ್ ಮಿತಿಗಳನ್ನು ಕಡಿಮೆ ಮಾಡಲಾಗಿದೆ. ಅಲ್ಪ ಪ್ರಮಾಣದ ಚಿಲ್ಲರೆ ಸಾಲ, ಹೊಸ ಸಾಲಗಗಳನ್ನು ಸಹ ನೀಡುತ್ತಿಲ್ಲ.
ಇದರ ಪರಿಣಾಮ ಎನ್ಬಿಎಫ್ಸಿಗೆ ಹಣ ಹರಿದುಬರುವ ವಾಣಿಜ್ಯ ಪೇಪರ್ (ಸಿಪಿ) ಮಾರುಕಟ್ಟೆಯ ಮ್ಯೂಚುವಲ್ ಫಂಡ್ ಮತ್ತು ಇತರೆ ಹಣಕಾಸುದಾರರ ಹೂಡಿಕೆ ಕರಗಿಸಿತು. ಈ ಎಲ್ಲ ಬೆಳವಣಿಗೆಯಿಂದ ಹೌಸಿಂಗ್ ಫೈನಾನ್ಶಗಳು ಗ್ರಾಹಕರಿಗೆ ನೀಡುವ ಬಡ್ಡಿದರ ಹೆಚ್ಚಳವಾಗುವ ಲಕ್ಷಣಗಳಿವೆ ಎಂಬುದು ಆರ್ಥಿಕ ತಜ್ಞರ ಅಭಿಮತ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.