
ನವದೆಹಲಿ(ನ.10): ನಿರಂತರ ತೈಲದರ ಇಳಿಕೆ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ್ದು, ಇಂದೂ ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ೧೮ ಪೈಸೆ ಇಳಿದಿರುವುದು ವಿಶೇಷ.
ಪೈಸೆಗಳ ಲೆಕ್ಕಾಚಾರದಲ್ಲಿ ತೈಲದರ ಇಳಿದಿದ್ದರೂ, ಹಬ್ಬದ ಸಂಭ್ರಮದಲ್ಲಿರುವ ಜನತೆಯಲ್ಲಿ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಅದರಂತೆ ದೇಶದ ಮಹಾನಗರಗಳಲ್ಲಿನ ತೈಲದರದತ್ತ ದೃಷ್ಟಿ ಹರಿಸುವುದಾದರೆ-
ರಾಷ್ಟ್ರ ರಾಜಧಾನಿ ನವದೆಹಲಿ-
ಪೆಟ್ರೋಲ್ ದರ: 77.89 ರೂ.
ಡೀಸೆಲ್ ದರ: 72.58 ರೂ.
ವಾಣಿಜ್ಯ ರಾಜಧಾನಿ ಮುಂಬೈ-
ಪೆಟ್ರೋಲ್ ದರ: 83.40 ರೂ.
ಡೀಸೆಲ್ ದರ: 76.05 ರೂ.
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್ ದರ: 79.81 ರೂ.
ಡೀಸೆಲ್ ದರ: 74.44 ರೂ.
ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್ ದರ: 80.90 ರೂ.
ಡೀಸೆಲ್ ದರ: 76.72 ರೂ.
ರಾಜ್ಯ ರಾಜಧಾನಿ ಬೆಂಗಳೂರು-
ಪೆಟ್ರೋಲ್ ದರ: 78.51 ರೂ.
ಡೀಸೆಲ್ ದರ: 72.97 ರೂ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಇಂದಿನ ಬೆಲೆ 70.18 ಯುಎಸ್ ಡಾಲರ್.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.