ತನ್ನ ಹೊಸ ಮಾರ್ಗಸೂಚಿಗಳಲ್ಲಿ, ಆರ್‌ಬಿಐ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಕರಿಗೆ ಮಾರ್ಗಸೂಚಿಗಳು, ನಿಯಮಗಳು ಮತ್ತು ದಂಡಗಳ ದೀರ್ಘ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನವದೆಹಲಿ (ಏ. 23): ಭಾರತದಲ್ಲಿ ಹೆಚ್ಚುತ್ತಿರುವ ಕ್ರೆಡಿಟ್ ಕಾರ್ಡ್‌ಗಳ ಅಳವಡಿಕೆಯೊಂದಿಗೆ, ಭಾರತದ ಕೇಂದ್ರ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರನ್ನು ವಂಚನೆಗಳು ಮತ್ತು ಗುಪ್ತ ಶುಲ್ಕಗಳಿಂದ ರಕ್ಷಿಸಲು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ತನ್ನ ಹೊಸ ಮಾರ್ಗಸೂಚಿಗಳಲ್ಲಿ, ಆರ್‌ಬಿಐ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಕರಿಗೆ ಮಾರ್ಗಸೂಚಿಗಳು, ನಿಯಮಗಳು ಮತ್ತು ದಂಡಗಳ ದೀರ್ಘ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ವಂಚನೆಗಳು, ಕಳ್ಳತನ, ಅನಧಿಕೃತ ಬಳಕೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಗ್ರಾಹಕರ ರಕ್ಷಣೆಯನ್ನು ಇನ್ನಷ್ಟು ಹೆಚ್ಚಿಸುವುದು ಆರ್‌ಬಿಐ ಮಾರ್ಗಸೂಚಿಗಳ ಗುರಿಯಾಗಿದೆ.
ಪ್ರಮುಖವಾಗಿ ಕ್ರೆಡಿಟ್ ಕಾರ್ಡ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರ;ಲ್ಲಿ ಡೆಬಿಟ್ ಕಾರ್ಡ್‌ಗಳಿ ಸಂಬಂಧಪಟ್ಟಂತೆ ಕೂಡ ಕೆಲವು ಮಾಹಿತಿ ನೀಡಲಾಗಿದೆ. ಕೋವಿಡ್ -19 ಸಾಂಕ್ರಾಮಿಕದ ನಂತರ ಕ್ರೆಡಿಟ್ ಕಾರ್ಡ್‌ಗಳು ಜನಪ್ರಿಯತೆಯನ್ನು ಹೆಚ್ಚಿದ್ದು ಡಿಸೆಂಬರ್ 2019 ರಲ್ಲಿ ಒಟ್ಟು ಬಾಕಿ ಉಳಿದಿರುವ ಕ್ರೆಡಿಟ್ ಕಾರ್ಡ್‌ಗಳು 55 ಮಿಲಿಯನ್ ಆಗಿದ್ದರೆ, ಅದು ಈಗ ಫೆಬ್ರವರಿ 2022 ರ ಅಂತ್ಯದ ವೇಳೆಗೆ ಸುಮಾರು 72 ಮಿಲಿಯನ್‌ಗೆ ಏರಿದೆ. ಹೀಗಾಗಿ ಸುಮಾರು 30% ರಷ್ಟು ಬೆಳವಣಿಗೆಯಾಗಿದೆ. ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಪಟ್ಟಂತೆ ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿಯ ಪ್ರತಿ ಇಲ್ಲಿದೆ - RBI New guidelines For Credit and Debit Cards
ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ
ಉಚಿತವಾಗಿ ನೀಡಲಾದ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಯಾವುದೇ ಗುಪ್ತ ಶುಲ್ಕ (Hidden Cost) ವಿಧಿಸುವಂತಿಲ್ಲ
ಕಾರ್ಡ್ ವಿತರಕರು ಈಗ ಕಳೆದುಹೋದ ಕ್ರೆಡಿಟ್ ಕಾರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್ ವಂಚನೆಗಳಿಂದ ಉಂಟಾಗುವ ನಷ್ಟಗಳಿಗೆ ವಿಮಾ ರಕ್ಷಣೆಯನ್ನು ನೀಡಬಹುದು. ಇದಕ್ಕಾಗಿ, ವಿತರಕರು ಕಾರ್ಡ್ ಹೊಂದಿರುವವರಿಂದ ಸ್ಪಷ್ಟ ಅನುಮತಿಯನ್ನು ಪಡೆಯಬೇಕಾಗುತ್ತದೆ.
ವಿತರಿಸಿದ ದಿನಾಂಕದಿಂದ 30 ದಿನಗಳಲ್ಲಿ ಸಕ್ರಿಯಗೊಳಿಸದ ಕ್ರೆಡಿಟ್ ಕಾರ್ಡನ್ನು ಸಕ್ರಿಯಗೊಳಿಸಲು ಒಂದು-ಬಾರಿಯ ಪಾಸ್‌ವರ್ಡ್ ಅಗತ್ಯವಿರುತ್ತದೆ (One Time Password). ಗ್ರಾಹಕರಿಗೆ ಕೈ ತಲುಪುವ ಮೊದಲು ಕಾರ್ಡ್ ಅನಧಿಕೃತ ವ್ಯಕ್ತಿಯು ಕೈ ಸೇರುವಂತಹ ಸನ್ನಿವೇಶಗಳನ್ನು ತಡೆಯಲು ಮಾಡಲು ಸಹಾಯ ಮಾಡುತ್ತದೆ.
ಕಾರ್ಡನ್ನು ಸಕ್ರಿಯಗೊಳಿಸುವ ಮೊದಲು ಕಾರ್ಡ್ ಹೊಂದಿರುವವರ ಕ್ರೆಡಿಟ್ ಮಾಹಿತಿಯನ್ನು ಸಿಬಿಲ್, CRIF,ಎಕ್ಸ್‌ಪೀರಿಯನ್, ಇತ್ಯಾದಿಗಳಂತಹ ಯಾವುದೇ ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡಲಾಗುವುದಿಲ್ಲ.
ಅಸಲು, ಬಡ್ಡಿ, ರಿಯಾಯಿತಿ ಮತ್ತು ಶುಲ್ಕಗಳು ಯಾವುದಾದರೂ ಇದ್ದರೆ, ಅದನ್ನು ಸ್ಪಷ್ಟವಾಗಿ ನಮೂದಿಸುವ ಮೂಲಕ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಸಮಾನ ಮಾಸಿಕ ಕಂತುಗಳಾಗಿ (EMI) ಪರಿವರ್ತಿಸುವಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದು.
ಬಡ್ಡಿಯೊಂದಿಗಗಿನ ಇಎಮ್‌ಐ ಪರಿವರ್ತನೆಯನ್ನು ಯಾವುದೇ ವೆಚ್ಚ ಅಥವಾ ಶೂನ್ಯ-ಬಡ್ಡಿ (Zero-Interest) ಎಎಮ್‌ಐ ಎಂದು ಮರೆಮಾಚುವಂತಿಲ್ಲ
ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ತಿರಸ್ಕರಿಸಿದ ಸಂದರ್ಭದಲ್ಲಿ, ವಿತರಕರು ಅಂತಹ ನಿರಾಕರಣೆಯ ಕಾರಣವನ್ನು ಲಿಖಿತ ರೂಪದಲ್ಲಿ ತಿಳಿಸಬೇಕು
ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್‌ಗಾಗಿ ಸ್ಥಗಿತಗೊಳಿಸುವ ವಿನಂತಿಗಳನ್ನು ಏಳು ಕೆಲಸದ ದಿನಗಳಲ್ಲಿ ಕಾರ್ಯಗತಗೊಳಿಸಬೇಕು. ಹಾಗೆ ಮಾಡಲು ವಿಫಲವಾದರೆ ಗ್ರಾಹಕರಿಗೆ ವಿಳಂಬದ ಪ್ರತಿ ದಿನಕ್ಕೆ ₹500 ದಂಡವನ್ನು ಪಾವತಿಸಬೇಕು.
ಒಂದು ವರ್ಷದ ಅವಧಿಗೆ ಬಳಸದಿದ್ದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು, ಕಾರ್ಡ್ ಹೊಂದಿರುವವರಿಗೆ 30-ದಿನಗಳ ಸೂಚನೆಯೊಂದಿಗೆ ಸ್ಥಗಿತಗೊಳಿಸಬಹುದು.
ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಶುಲ್ಕಗಳಲ್ಲಿನ ಯಾವುದೇ ಬದಲಾವಣೆಗಳನ್ನು ಅವುಗಳ ಅನುಷ್ಠಾನಕ್ಕೆ 30 ದಿನಗಳ ಮೊದಲು ತಿಳಿಸಬೇಕು
ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
ಉಳಿತಾಯ ಬ್ಯಾಂಕ್ ಅಥವಾ ಚಾಲ್ತಿ ಖಾತೆ ಹೊಂದಿರುವ ಗ್ರಾಹಕರಿಗೆ ಮಾತ್ರ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುತ್ತದೆ
ನಗದು ಕ್ರೆಡಿಟ್ ಅಥವಾ ಸಾಲದ ಖಾತೆದಾರರಿಗೆ ಯಾವುದೇ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ
ಬ್ಯಾಂಕ್‌ಗಳು ಡೆಬಿಟ್ ಕಾರ್ಡ್ ಪಡೆಯಲು ಗ್ರಾಹಕರನ್ನು ಒತ್ತಾಯಿಸುವುದಿಲ್ಲ ಮತ್ತು ಬ್ಯಾಂಕ್ ಒದಗಿಸುವ ಯಾವುದೇ ಇತರ ಸೌಲಭ್ಯಗಳನ್ನು ಪಡೆಯಲು ಡೆಬಿಟ್ ಕಾರ್ಡ್ ಹೊಂದಿರಬೇಕು ಎಂದು ಹೇಳುವಂತಿಲ್ಲ.
ಡೆಬಿಟ್ ಕಾರ್ಡ್‌ಗಳ ಇತರ ರೂಪಗಳಾದ, ಧರಿಸಬಹುದಾದಂತಹ ಸಾಧನಗಳು ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ ನೀಡಲ್ಪಡುತ್ತವೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.