ನೋಟು ಗುರ್ತಿಸಲು ಅಂಧರಿಗಾಗಿ ಆರ್‌ಬಿಐಯಿಂದ 'ಮಣಿ' ಮೊಬೈಲ್ ಆ್ಯಪ್‌

By Kannadaprabha NewsFirst Published Jan 3, 2020, 12:42 PM IST
Highlights

ಅಂಧರು ಕರೆನ್ಸಿ ನೋಟುಗಳನ್ನು ಸುಲಭವಾಗಿ ಗುರುತಿಸುವಂತಾಗಲು ಭಾರತೀಯ ರಿಸವ್‌ರ್‍ ಬ್ಯಾಂಕ್‌ ‘ಮಣಿ’ (ಮೊಬೈಲ್‌ ಏಡೆಡ್‌ ನೋಟ್‌ ಐಡೆಂಟಿಫೈಯರ್‌) ಎಂಬ ಹೊಸ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. 

ಮುಂಬೈ (ಜ. 03): ಅಂಧರು ಕರೆನ್ಸಿ ನೋಟುಗಳನ್ನು ಸುಲಭವಾಗಿ ಗುರುತಿಸುವಂತಾಗಲು ಭಾರತೀಯ ರಿಸರ್ವ್ ಬ್ಯಾಂಕ್‌ ‘ಮಣಿ’ (ಮೊಬೈಲ್‌ ಏಡೆಡ್‌ ನೋಟ್‌ ಐಡೆಂಟಿಫೈಯರ್‌) ಎಂಬ ಹೊಸ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. ಬುಧವಾರ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಇದರ ಬಿಡುಗಡೆ ಮಾಡಿದರು.

 

RBI Governor today launched a mobile application MANI (Mobile Aided Note Identifier) to aid visually impaired persons in identifying denomination of currency notes. The app can be freely downloaded from Android Play Store and iOS App Store
pic.twitter.com/YXUzP3MBxt

— ReserveBankOfIndia (@RBI)

 

ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಐಒಎಸ್‌ ಆ್ಯಪ್‌ ಸ್ಟೋರ್‌ನಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್‌ ಬಳಕೆಗೆ ಇಂಟರ್ನೆಟ್‌ ಬೇಕೇಬೇಕು ಎಂದೇನಿಲ್ಲ. ಆಫ್‌ಲೈನ್‌ ವಿಧಾನದಲ್ಲೂ ಇದು ಕೆಲಸ ಮಾಡಲಿದೆ.

ಆರ್ಥಿಕ ಸಂಕಷ್ಟ:ಹಣಕಾಸು ಸಚಿವಾಲಯ ನಿರ್ಣಯವಾಗುವುದು ಇಷ್ಟ!

ಒಂದು ನೋಟಿನ ಮೌಲ್ಯವನ್ನು ಈ ಆ್ಯಪ್‌ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಆಡಿಯೋ ಮೂಲಕ ಹೇಳಲಿದೆ. ಶ್ರವಣದೋಷ ಇದ್ದರೆ ವೈಬ್ರೇಷನ್‌ ಮೂಲಕ ಇದು ನೋಟಿನ ಮೌಲ್ಯ ತಿಳಿಸುತ್ತದೆ. ಆದರೆ ಇದು ಖೋಟಾ ನೋಟಾ ಅಥವಾ ಅಸಲಿ ನೋಟಾ ಎಂಬುದನ್ನು ಆ್ಯಪ್‌ ಹೇಳುವುದಿಲ್ಲ.

click me!