ಸಾಲಗಾರರಿಗೆ ಗುಡ್‌ ನ್ಯೂಸ್‌: ಸತತ 4ನೇ ಬಾರಿ ರೆಪೋ ದರ ಏರಿಸದ ಆರ್‌ಬಿಐ

By BK Ashwin  |  First Published Oct 6, 2023, 10:55 AM IST

ಸದ್ಯ ರೆಪೋ ದರ 6.5% ರಷ್ಟು ಇದ್ದು, ಇದನ್ನು ಬದಲಿಸದೆ ಇರಲು ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ನಿರ್ಧರಿಸಿದೆ. 


ಮುಂಬೈ (ಅಕ್ಟೋಬರ್ 6, 2023): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ರೆಪೋ ದರವನ್ನು  ಸತತ ನಾಲ್ಕನೇ ಬಾರಿಗೆ ಬದಲಾಯಿಸದೆ ಇರಲು ತೀರ್ಮಾನಿಸಿದೆ. ಸದ್ಯ ರೆಪೋ ದರ 6.5% ರಷ್ಟು ಇದ್ದು, ಇದನ್ನು ಬದಲಿಸದೆ ಇರಲು ನಿರ್ಧರಿಸಿದೆ. 

ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ರೆಪೋ ದರವು RBI ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವ ಬಡ್ಡಿ ದರವಾಗಿದೆ. ಇನ್ನು, "ಭಾರತವು ವಿಶ್ವದ ಹೊಸ ಬೆಳವಣಿಗೆಯ ಎಂಜಿನ್ ಆಗಲು ಸಜ್ಜಾಗಿದೆ" ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: 49,000 ಕೋಟಿ ರೂ. ಮೌಲ್ಯದ ಮಾರುಕಟ್ಟೆಗೆ ಲಗ್ಗೆ ಇಟ್ಟ ರಿಲಯನ್ಸ್‌: ಇನ್ಮೇಲೆ ಈ ಕ್ಷೇತ್ರದಲ್ಲೂ ಅಂಬಾನಿಯದ್ದೇ ದರ್ಬಾರ್‌!

ಇದರರ್ಥ ಸಾಲದ ಬಡ್ಡಿದರಗಳು ಸಹ ಬದಲಾಗದೆ ಉಳಿಯುವ ಸಾಧ್ಯತೆಯಿದೆ. ನಾವು ಹಣದುಬ್ಬರವನ್ನು ಸುಸ್ಥಿರ ಬೆಳವಣಿಗೆಗೆ ಪ್ರಮುಖ ಅಪಾಯವೆಂದು ಗುರುತಿಸಿದ್ದೇವೆ ಎಂದೂ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. "ಒಟ್ಟಾರೆ ಹಣದುಬ್ಬರ ಮುನ್ನೋಟವು ಕೆಲವು ಪ್ರಮುಖ ಬೆಳೆಗಳಾದ ಬೇಳೆಕಾಳುಗಳು ಮತ್ತು ಎಣ್ಣೆ ಬೀಜಗಳ ಖಾರಿಫ್ ಬಿತ್ತನೆಯ ಕುಸಿತದಿಂದ ಹಾಗೂ ಕಡಿಮೆ ಜಲಾಶಯದ ಮಟ್ಟಗಳು ಮತ್ತು ಜಾಗತಿಕ ಆಹಾರ ಹಾಗೂ ಇಂಧನ ಬೆಲೆಗಳಲ್ಲಿನ ಚಂಚಲತೆಯಿಂದ ಅನಿಶ್ಚಿತತೆ ಉಂಟಾಗಿದೆ ಎಂದೂ ಶಕ್ತಿಕಾಂತ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು, ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು 5.4% ಇರಲಿದೆ ಮತ್ತು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಪ್ರಮಾಣವು 5.2% ಕ್ಕೆ ಇಳಿಯಬಹುದು ಎಂದೂ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿರೀಕ್ಷಿಸುತ್ತದೆ. ತರಕಾರಿ ಬೆಲೆ ಇಳಿಕೆ ಮತ್ತು ಅಡುಗೆ ಅನಿಲ ಸಿಲಿಂಡರ್ ದರ ಕಡಿತದಿಂದ ಹಣದುಬ್ಬರ ತಗ್ಗಿಸಲಿದೆ ಎಂದೂ ಆರ್‌ಬಿಐ ಗವರ್ನರ್ ಹೇಳಿದ್ದಾರೆ. 

ಇದನ್ನೂ ಓದಿ: ಆ್ಯಪಲ್‌ ಷೇರು ಮಾರಾಟ ಮಾಡಿದ್ದಕ್ಕೇ ನೂರಾರು ಕೋಟಿ ರೂ. ಸಂಪಾದಿಸಿದ ಸಿಇಒ ಟಿಮ್ ಕುಕ್!

ಇದನ್ನೂ ಓದಿ: 50,000 ರೂ. ಗೂ ಕಡಿಮೆ ಬೆಲೆಗೆ ಸಿಗುತ್ತೆ ಐಫೋನ್‌ 14: ಇಲ್ಲಿದೆ ಸೂಪರ್ ಆಫರ್!

click me!