ರೆಪೋ ದರ ಹೆಚ್ಚಿಸಿದ ಆರ್ ಬಿಐ: ಗೃಹ ಸಾಲ ಹೆಚ್ಚಳ?

By Web DeskFirst Published Aug 1, 2018, 5:03 PM IST
Highlights

ರೆಪೋ ದರ ಏರಿಸಿದ ಆರ್‌ಬಿಐ! 25 ಮೂಲಾಂಶಗಳಷ್ಟು ರೆಪೋ ದರ ಏರಿಕೆ! ಮಾರುಕಟ್ಟೆ ಸ್ಥಿರತೆಗಾಗಿ ರೆಪೋ ದರ ಏರಿಕೆ! ಅಸ್ಥಿರ ಜಾಗತಿಕ ಹಣಕಾಸು ಮಾರುಕಟ್ಟೆ! ಗೃಹ ಸಾಲ, ಇಎಂಐ ಪ್ರಮಾಣ ಹೆಚ್ಚಳ ಸಂಭವ!

ನವದೆಹಲಿ(ಆ.1):  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು 25 ಮೂಲಾಂಶಗಳಷ್ಟು ಏರಿಸಿದ್ದು, ರೆಪೋ ದರ ಶೇ.6.50 ಕ್ಕೆ ಏರಿಕೆ ಮಾಡಿದೆ. ಮಾರುಕಟ್ಟೆ ಸ್ಥಿರತೆಗಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.

ಬ್ಯಾಂಕ್  ಹಣಕಾಸು ನೀತಿ ಪರಾಮರ್ಶೆ ಸಮಿತಿಯು ರೆಪೋ ದರ ಹಾಗೂ ರಿವರ್ಸ್ ರೆಪೋ ದರ ಏರಿಕೆ ಪರವಾಗಿ ನಿರ್ಧಾರಕ್ಕೆ ಬಂದಿದೆ. ಆರ್‌ಬಿಐ ತನ್ನ ದ್ವೈಮಾಸಿಕ ವರದಿಯಲ್ಲಿ ತಟಸ್ಥ ನೀತಿಯನ್ನೇ ಉಳಿಸಿಕೊಂಡಿದೆ. ಜಾಗತಿಕ ಹಣಕಾಸಿನ ಮಾರುಕಟ್ಟೆಯಲ್ಲಿನ ಅಸ್ಥಿರ ಚಂಚಲತೆ ಹಣದುಬ್ಬರದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಆರ್‌ಬಿಐ ಎಪ್ರಿಲ್‌ - ಸೆಪ್ಟಂಬರ್‌ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.7.5 - ಶೇ.7.6 ಎಂದು ಅಂದಾಜಿಸಿದ್ದು ಹಣಕಾಸು ವರ್ಷ 2019ರಲ್ಲಿ ಜಿಡಿಪಿ ಶೇ.7.4ರಷ್ಟಕ್ಕೆ ಸ್ಥಿರವಾಗಿದೆ. ಇದಕ್ಕೂ ಮುನ್ನ ಜೂನ್ ನಲ್ಲಿ ಆರ್‌ಬಿಐ ನಾಲ್ಕು ವರ್ಷಗಳ ಬಳಿಕ ರೆಪೋ ದರವನ್ನು 25 ಮೂಲಾಂಶದಷ್ಟು ಏರಿಕೆ ಮಾಡಿತ್ತು. ರೆಪೋ ದರ ಏರಿಕೆ ಪರಿಣಾಮ ಗೃಹ ಸಾಲ, ಇಎಂಐ ಪ್ರಮಾಣ ಸಹ ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೇ ವಾಹನ ಸಾಲ ಕೂಡ ಏರಿಕೆಯಾಗುವ ಸಂಭವ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

click me!