ಸಾಲದ ಪ್ರಮಾಣ ಹೆಚ್ಚಾಗಿ ಬ್ಯಾಂಕುಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಎದುರಾಗಬಹುದು. ಳೆದ ಐದು ವರ್ಷದಲ್ಲಿ ಮ್ಯೂಚುವಲ್ ಫಂಡ್ಸ್ ಶೇ.152ರಷ್ಟು ಹೆಚ್ಚಾಗಿದೆ.
ಮುಂಬೈ: ಇತ್ತೀಚಿನ ದಿನಗಳಲ್ಲಿ ಜನರು ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ (ಎಫ್‌ಡಿ) ಗಳನ್ನು ಬಿಟ್ಟು ಹೆಚ್ಚಿನ ಲಾಭ ಗಳಿಸಲು ಮ್ಯೂಚುವಲ್ ಫಂಡ್ಸ್ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಿಗೆ ನಗದು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದು ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಇಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಾಸ್,‘ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ಪ್ರಮಾಣ ಕಾರಣ ಜನರು ತಮ್ಮ ಚಿತ್ತವನ್ನು ಠೇವಣಿ ಇಡುವುದಕ್ಕಿಂತ ಮ್ಯೂಚುವಲ್ ಫಂಡ್ಸ್, ವಿಮಾ ಠೇವಣಿ ಹಾಗೂ ಪಿಂಚಣಿ ಠೇವಣಿಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಒಳಹರಿವು ಪ್ರಮಾಣ ಕಡಿಮೆಯಾಗಲಿದೆ.
ಇದರಿಂದಾಗಿ ಸಾಲದ ಪ್ರಮಾಣ ಹೆಚ್ಚಾಗಿ ಬ್ಯಾಂಕುಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಎದುರಾಗಬಹುದು ಎಂದು ಹೇಳಿದರು. ಕಳೆದ ಐದು ವರ್ಷದಲ್ಲಿ ಮ್ಯೂಚುವಲ್ ಫಂಡ್ಸ್ ಶೇ.152ರಷ್ಟು ಹೆಚ್ಚಾಗಿದ್ದು, ಆದರೆ ಬ್ಯಾಂಕ್ ಎಫ್‌ಡಿ ಕೇವಲ ಶೇ.70ರಷ್ಟು ಮಾತ್ರ ವೃದ್ಧಿಯಾಗಿದೆ.
ಆಷಾಢ ಆಫರ್ ಜೊತೆ ಸಂಡೇ ಧಮಾಕಾ; ಇಂದೇ ಖರೀದಿಸಿ ಚಿನ್ನ... ಇಲ್ಲಿದೆ ಇಂದಿನ ದರಗಳು
ಬಲ್ಕ್ ಎಫ್‌ಡಿ ವ್ಯಾಖ್ಯಾನ ಬದಲಿಸಿದ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್‌ಗಳ ‘ಬಲ್ಕ್ ಫಿಕ್ಸೆಡ್ ಡೆಪಾಸಿಟ್’ (ಬಲ್ಕ್ ಎಫ್‌ಡಿ/ ಬೃಹತ್ ನಿಶ್ಚಿತ ಠೇವಣಿ) ವ್ಯಾಖ್ಯಾನವನ್ನು ಬದಲಿಸಿದೆ. ಅದರ ಕನಿಷ್ಠ ಮಿತಿಯನ್ನು 2 ಕೋಟಿ ರು.ನಿಂದ 3 ಕೋಟಿ ರು.ಗೆ ಹೆಚ್ಚಿಸಿದೆ.
ಅಂದರೆ, ಈವರೆಗೆ 2 ಕೋಟಿ ರು.ಗಿಂತ ಹೆಚ್ಚಿದ್ದರೆ ಬಲ್ಕ್ ಎಫ್‌ಡಿ ಎಂದು ಪರಿಗಣಿಸಲಾಗುತ್ತಿತ್ತು ಹಾಗೂ ಮಾಮೂಲಿ ಎಫ್‌ಡಿಗಿಂತ ಹೆಚ್ಚು ಬಡ್ಡಿದರ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಒಂದೇ ಠೇವಣಿಯಲ್ಲಿ 3 ಕೋಟಿ ರು. ಅಥವಾ ಹೆಚ್ಚಿನ ಹಣ ಇರಿಸಿದರೆ ಅದನ್ನು ಬಲ್ಕ್ ಎಫ್‌ಡಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇನ್ನು 3 ಕೋಟಿ ರು.ಗಿಂತ ಕಡಿಮೆ ಎಫ್‌ಡಿಯನ್ನು ಬ್ಯಾಂಕ್‌ನಲ್ಲಿ ಇರಿಸಿದರೆ ಇತರ ಸಾಮಾನ್ಯ ಗ್ರಾಹರಿಕೆಗೆ ಅನ್ವಯವಾಗುವ ಬಡ್ಡಿ ಮಾತ್ರ ಸಿಗಲಿದೆ. ಬಲ್ಕ್ ಎಫ್‌ಡಿ ರೀತಿ ಹೆಚ್ಚು ಬಡ್ಡಿ ಸಿಗದು.
ನೀವು ಕನ್ನಡಿಗರಾಗಿದ್ರೆ ಫೋನ್‌ಪೇ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ; ಟ್ವಿಟರ್ ಟ್ರೆಂಡಿಂಗ್!