ಕರ್ನಾಟಕ & ಮಹಾರಾಷ್ಟ್ರದ ಈ ಬ್ಯಾಂಕ್‌ಗಳ ವಿಲೀನಕ್ಕೆ ಒಪ್ಪಿಗೆ ನೀಡಿದ ಆರ್‌ಬಿಐ

Published : Jan 04, 2025, 08:45 AM IST
ಕರ್ನಾಟಕ & ಮಹಾರಾಷ್ಟ್ರದ ಈ ಬ್ಯಾಂಕ್‌ಗಳ ವಿಲೀನಕ್ಕೆ ಒಪ್ಪಿಗೆ ನೀಡಿದ ಆರ್‌ಬಿಐ

ಸಾರಾಂಶ

ಈ ಎರಡು ಬ್ಯಾಂಕ್‌ಗಳು  ಜನವರಿ 6, 2025 ರಿಂದ ವಿಲೀನಗೊಳ್ಳಲಿವೆ. ವಿಲೀನದ ನಂತರ, ಕರ್ನಾಟಕದ ಬ್ಯಾಂಕ್‌ನ ಶಾಖೆಗಳು ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್‌ನ ಶಾಖೆಗಳಾಗಿ ಕಾರ್ಯನಿರ್ವಹಿಸುತ್ತವೆ.

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎರಡು ಬ್ಯಾಂಕ್‌ಗಳ ವಿಲೀನಕ್ಕೆ ಒಪ್ಪಿಗೆ ನೀಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಬ್ಯಾಂಕ್‌ಗಳು ಒಂದಾಗಲಿದ್ದು, ಜನವರಿ 6,2025ರಿಂದಲೇ ಜಾರಿಗೆ ಬರಲಿದೆ ಎಂದು ಆರ್‌ಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.  ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 56 ರೊಂದಿಗೆ, ಸೆಕ್ಷನ್ 44 ಎ ಉಪ-ವಿಭಾಗ (4) ರ ಅಡಿಯಲ್ಲಿ ಈ ಎರಡು ಬ್ಯಾಂಕ್‌ಗಳ ಮಿಲನಕ್ಕೆ ಅನುಮೋದಿಸಲಾಗಿದೆ" ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನ  ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (National Co-operative Bank Ltd) ಮತ್ತು ಮಹಾರಾಷ್ಟ್ರದ ಕಾಸ್ಮೋಸ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Cosmos Cooperative Bank Limited) ಒಂದಾಗಲಿವೆ. 

ಜನವರಿ 06 ರಿಂದಲೇ ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು (ಕರ್ನಾಟಕ) ಶಾಖೆಗಳು ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಮಹಾರಾಷ್ಟ್ರ) ಶಾಖೆಗಳಾಗಿ ಕಾರ್ಯನಿರ್ವಹಿಸುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಸೆಂಬರ್ 31, 2024 ರ ಆದೇಶದ ಮೂಲಕ, ಕಾಸ್ಮೊಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಬ್ಯಾಂಕ್) ಅಲ್ಲದವರಿಗೆ ₹8.30 ಲಕ್ಷ ವಿತ್ತೀಯ ದಂಡವನ್ನು ವಿಧಿಸಿದೆ. ಈ ಎರಡು ಬ್ಯಾಂಕ್‌ಗಳ ವಿಲೀನದಿಂದಾಗಿ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರಲ್ಲ.

ಇದನ್ನೂ ಓದಿ: ಆನ್​ಲೈನ್​ ವಹಿವಾಟಿನಿಂದ ಬಯಲಾಗೋಯ್ತು ಪಾನೀಪುರಿ ಮಾರಾಟಗಾರನ ಗುಟ್ಟು! ಕೇಳಿದ್ರೆ ನೀವೂ ಸುಸ್ತು!

ಮಾರ್ಚ್ 31, 2023 ರಂತೆ ಆರ್‌ಬಿಐ,  ನಿರ್ದೇಶನಗಳನ್ನು ಪಾಲನೆ ಮಾಡದ ಹಿನ್ನೆಲೆ ಮೇಲ್ವಿಚಾರಣಾ ಸಂಶೋಧನೆ ವರದಿ ಆಧರಿಸಿ ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ ಕಾರಣ ಕೇಳಿ ನೋಟಿಸ್ ನೀಡಿತ್ತು. ನೋಟಿಸ್‌ಗೆ ಬ್ಯಾಂಕ್‌ನ ಉತ್ತರವನ್ನು ಪರಿಗಣಿಸಿದ ನಂತರ ಸೂಚಿಸಿದ ರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕೆ ದಂಡವನ್ನು ಏಕೆ ವಿಧಿಸಬಾರದು ಎಂದು ಪ್ರಶ್ನೆ ಮಾಡಿತ್ತು. ನಂತರ  ವೈಯಕ್ತಿಕ ವಿಚಾರಣೆ ಮತ್ತು ಹೆಚ್ಚುವರಿ ಸಲ್ಲಿಕೆಗಳ ಪರಿಶೀಲನೆಯಲ್ಲಿಯೂ ಬ್ಯಾಂಕ್ ಸೂಕ್ತ ಕಾರಣ ನೀಡುವಲ್ಲಿ ವಿಫಲವಾಗಿತ್ತು. ಆದ್ದರಿಂದ  ₹8.30 ಲಕ್ಷ ವಿತ್ತೀಯ ದಂಡವನ್ನು ವಿಧಿಸಲಾಗಿತ್ತು.

ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯಲು ಆರ್‌ಬಿಐ ಹೊಸ ನಿಯಮ,ಬದಲಾವಣೆ ಏನು?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!