ಆಕಾಶ್​ಗೆ ಗುರುವಾಗಿದ್ದ ರತನ್​ ಟಾಟಾ: ಅಗಲಿದ ಉದ್ಯಮಿ ಕುರಿತು ನೀತಾ ಅಂಬಾನಿ ಭಾವುಕ

By Suchethana DFirst Published Oct 16, 2024, 4:55 PM IST
Highlights

ಅಂಬಾನಿ ಕುಟುಂಬಕ್ಕೆ ರತನ್​ ಟಾಟಾ ಅವರು ಯಾವ ರೀತಿಯಲ್ಲಿ ಮಾರ್ಗದರ್ಶಕರಾಗಿದ್ದರು ಎನ್ನುವ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು? 
 

ಭಾರತದ ರತ್ನ, ಉದ್ಯಮ ಕ್ಷೇತ್ರದ ದಿಗ್ಗಜ ರತನ್​ ಟಾಟಾ ಅವರು ಅಗಲಿ ಒಂದು ವಾರವಾಗುತ್ತಾ ಬಂದಿದೆ. ಇದಾಗಲೇ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ತಮ್ಮದೇ ಆದ ರೀತಿಯಲ್ಲಿ ರತನ್​ ಟಾಟಾ ಅವರನ್ನು ಸ್ಮರಿಸಿದ್ದಾರೆ.  ಇದೀಗ, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ  ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ಕುಟುಂಬಕ್ಕೆ ರತನ್​ ಅವರು ನೀಡಿರುವ ಕೊಡುಗೆ ಏನು ಎಂಬ ಬಗ್ಗೆ ವಿವರಿಸಿದ್ದಾರೆ.    ರಿಲಯನ್ಸ್ ಇಂಡಸ್ಟ್ರೀಸ್ ವತಿಯಿಂದ ವಾರ್ಷಿಕ ದೀಪಾವಳಿ ಭೋಜನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನೀತಾ ಅವರು  ರತನ್ ಟಾಟಾ ಅವರನ್ನು ಸ್ಮರಿಸಿದ್ದಾರೆ.
 
ರತನ್​ ಟಾಟಾ ತಮ್ಮ ಪುತ್ರ ಆಕಾಶ್​ ಅಂಬಾನಿಗೆ ಗುರು. ಆಕಾಶ್​ಗೆ ಅವರು ಹಲವಾರು ರೀತಿಯಲ್ಲಿ ಮಾರ್ಗದರ್ಶನ ತೋರಿದ್ದಾರೆ.  ಇಂಥ  ಭಾರತದ ಮಹಾನ್ ಪುತ್ರನನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ ಎಂದರು.  ಇವರ ಸಾವು ನಮಗೆಲ್ಲರಿಗೂ ದೊಡ್ಡ ಆಘಾತ ತಂದಿದೆ.  ಈ ದುಃಖವನ್ನು ಅನುಭವಿಸುವುದು ಸುಲಭದ ಮಾತಲ್ಲ ಎಂದು ನೀತಾ ಸ್ಮರಿಸಿದರು.  ಅವರು ದೂರದೃಷ್ಟಿಯ ಕೈಗಾರಿಕೋದ್ಯಮಿಯಾಗಿದ್ದರು, ಅವರು ಯಾವಾಗಲೂ ಸಮಾಜದ ಒಳಿತಿಗಾಗಿ ಜನರನ್ನು ಚೆನ್ನಾಗಿಡಲು ಪ್ರಯತ್ನಿಸಿದರು ಎಂಬುದಾಗಿ ಟಾಟಾ ಅವರನ್ನು ಸ್ಮರಿಸಿದರು.

ರತನ್​ ಟಾಟಾ ಅಂತಿಮ ದರ್ಶನಕ್ಕೆ ಮಲತಾಯಿ ಸಿಮೋನ್: 94 ವಯಸ್ಸಿನ 70 ಸಾವಿರ ಕೋಟಿ ಉದ್ಯಮದ ಒಡತಿ!

Latest Videos

 ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಿಸಿದ ರತನ್ ಟಾಟಾ ಅವರು ರತನ್ ಟಾಟಾ ಟ್ರಸ್ಟ್ ಮತ್ತು ದೊರಾಬ್ಜಿ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು, ಇದು ಭಾರತದ ಎರಡು ದೊಡ್ಡ ಖಾಸಗಿ ವಲಯದ ಲೋಕೋಪಕಾರಿ ಟ್ರಸ್ಟ್‌ಗಳಾಗಿವೆ. ಅವರು ಟಾಟಾ ಗ್ರೂಪ್‌ನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ 1991 ರಿಂದ 2012 ರಲ್ಲಿ ನಿವೃತ್ತರಾಗುವವರೆಗೆ ಸೇವೆ ಸಲ್ಲಿಸಿದರು ಮತ್ತು ನಂತರ ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷರಾಗಿ ನೇಮಕಗೊಂಡರು. 2008 ರಲ್ಲಿ, ಅವರು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ಪಡೆದರು. ಅವರ ಮರಣದ ನಂತರ, ಟಾಟಾ ಟ್ರಸ್ಟ್‌ಗಳು ಕಳೆದ ವಾರ ಹೊಸ ಅಧ್ಯಕ್ಷರಾಗಿ ನೋಯೆಲ್ ನೇವಲ್ ಟಾಟಾ ಅವರ ನೇಮಕಾತಿ ಮಾಡಲಾಗಿದೆ. 

ರತನ್ ಟಾಟಾ ಒಡೆತನದ ಟಾಟಾ ಗ್ರೂಪ್ (Tata Group)  ಹಾಗೂ ಮುಖೇಶ್ ಅಂಬಾನಿ ಒಡೆತನದ ರಿಯಲನ್ಸ್ ಗ್ರೂಪ್ ತಮ್ಮದೇ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಿದೆಯಾದ್ರೂ, ರಿಲಯನ್ಸ್ ಗ್ರೂಪ್ ಗಿಂತ ಟಾಟಾ ಗ್ರೂಪ್ ಒಂದು ಹೆಜ್ಜೆ ಮುಂದಿತ್ತು. ಟೆಲಿಕಾಂ ಕ್ಷೇತ್ರವಾಗಲಿ, ವೈದ್ಯಕೀಯ ಕ್ಷೇತ್ರವಾಗಲಿ ಅಥವಾ ಇನ್ನಾವುದೇ ಆಗಿರಲಿ, ಟಾಟಾ ಗ್ರೂಪ್ ಪ್ರಾಬಲ್ಯ ಹೊಂದಿದೆ. ಟಾಟಾ ಸಮೂಹದ ನಾಯಕ ರತನ್ ಟಾಟಾ ನಿರ್ಗಮನದ ನಂತರ ಟಾಟಾ ಉದ್ಯಮವನ್ನು ನಿಭಾಯಿಸಲು ಅವರಂತ ನಾಯಕ ಸಿಗೋದು ಕಷ್ಟ. ರತನ್ ಟಾಟಾ ನಿರ್ಧಾರಗಳು ಸ್ಪಷ್ಟ ಹಾಗೂ ದೃಢವಾಗಿರುತ್ತಿದ್ದವು. ಇದ್ರಿಂದಾಗಿ ಕಂಪನಿ ಲಾಭದಲ್ಲಿ ಸಾಗಿತ್ತು. ರತನ್ ಟಾಟಾ ಪ್ಲಾನ್ ಗಳಿಂದ ಮುಖೇಶ್ ಅಂಬಾನಿ ಸ್ವಲ್ಪ ಹಿನ್ನಡೆ ಅನುಭವಿಸುತ್ತಿದ್ದರು. ಈಗ ರತನ್ ಟಾಟಾ ನಿಧನದ ನಂತ್ರ ಮುಖೇಶ್ ಅಂಬಾನಿಗೆ ಟಕ್ಕರ್ ನೀಡಲು ಯಾರೂ ಇಲ್ಲದಂತಾಗಿದೆ. ಟಾಟಾ ಗ್ರೂಪ್‌ನ ದೇಶದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ (ಟಿಸಿಐ) ಈಗ ದೇಶದ ಅತಿದೊಡ್ಡ ಕಂಪನಿಯಾಗಿದೆ. ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಟಿಸಿಎಸ್ ಕಠಿಣ ಪೈಪೋಟಿ ನೀಡಿದೆ. ಬರೀ ಪೈಪೋಟಿಯಲ್ಲ ಈಗ ಎರಡೂ ಕಂಪನಿಗಳ ಮಾರುಕಟ್ಟೆ 14 ಲಕ್ಷ ಕೋಟಿ ದಾಟಿದೆ. ಷೇರುದಾರರು  ಖುಷಿಯಾಗಿದ್ದಾರೆ. ಎರಡೂ ಮಾರುಕಟ್ಟೆ ಮೌಲ್ಯಗಳು 32 ಸಾವಿರ ಕೋಟಿ ರೂಪಾಯಿಯಾಗಿದೆ. 

ಉದ್ಯಮ ಲೋಕದ ಅಮೂಲ್ಯ ರತ್ನ ರತನ್ ಟಾಟಾರಿ​ಗೆ 11 ಸಾವಿರ ವಜ್ರಗಳ ನಮನ: ವಿಡಿಯೋಗೆ ಆನಂದಬಾಷ್ಪ

click me!