* ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಟಾಟಾ ಪಾಲು
* ಜನವರಿ 27 ರಂದು, ಟಾಟಾ ಗ್ರೂಪ್ ಸರ್ಕಾರದಿಂದ ಏರ್ ಇಂಡಿಯಾ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡಿದೆ
* ಪ್ರಯಾಣಿಕರನ್ನುದ್ದೇಶಿಸಿ ರತನ್ ಟಾಟಾ ಅವರ 18 ಸೆಕೆಂಡುಗಳ ಆಡಿಯೊ ಕ್ಲಿಪ್
ನವದೆಹಲಿ(ಫೆ.02): ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಈಗ ಟಾಟಾ ಸಮೂಹದ ಪಾಲಾಗಿದೆ. ಜನವರಿ 27 ರಂದು, ಟಾಟಾ ಗ್ರೂಪ್ ಸರ್ಕಾರದಿಂದ ಏರ್ ಇಂಡಿಯಾದ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ರತನ್ ಟಾಟಾ ಅವರ 18 ಸೆಕೆಂಡುಗಳ ಆಡಿಯೊ ಕ್ಲಿಪ್ ಅನ್ನು ಇಂದು ಏರ್ ಇಂಡಿಯಾದ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಅವರು ಏರ್ ಇಂಡಿಯಾದ ಪ್ರಯಾಣಿಕರೊಂದಿಗೆ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ಈ ಸಂದೇಶ ರತನ್ ಟಾಟಾ ಅವರ ಧ್ವನಿಯಲ್ಲಿ ಒಂದು ರೀತಿಯ ಸ್ವಾಗತ ಸಂದೇಶವಾಗಿದೆ. ಇದರಲ್ಲಿ ಅವರು ಎಲ್ಲಾ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ. ಈ ಕೆಲವು ಸೆಕೆಂಡುಗಳ ಸಂದೇಶದಲ್ಲಿ ಅವರು ಏರ್ ಇಂಡಿಯಾದ ಪ್ರಯಾಣಿಕರಿಗೆ ಏನು ಹೇಳಿದ್ದಾರೆ? ಇಲ್ಲಿದದೆ ವಿವರ
ಆಡಿಯೋ ಕ್ಲಿಪ್‌ನಲ್ಲಿ ಏನು ಹೇಳಿದ್ದಾರೆ?
ಅವರು ತಮ್ಮ 18 ಸೆಕೆಂಡ್ ಆಡಿಯೋ ಕ್ಲಿಪ್‌ನಲ್ಲಿ ಏರ್ ಇಂಡಿಯಾದ ಪ್ರಯಾಣಿಕರನ್ನು ಸ್ವಾಗತಿಸಿದರು. ಏರ್ ಇಂಡಿಯಾದಲ್ಲಿ ಎಲ್ಲಾ ಪ್ರಯಾಣಿಕರಿಗೆ ಸ್ವಾಗತ ಎಂದು ಹೇಳಿದರು. ಪ್ರಯಾಣಿಕರ ಎಲ್ಲಾ ಅನುಕೂಲತೆಗಳು ಮತ್ತು ಸೇವೆಗಳನ್ನು ನೋಡಿಕೊಳ್ಳಲು ಏರ್ ಇಂಡಿಯಾ ಉದ್ಯೋಗಿಗಳೊಂದಿಗೆ ಕೆಲಸ ಮಾಡಲು ಟಾಟಾ ಗ್ರೂಪ್ ತುಂಬಾ ಉತ್ಸುಕವಾಗಿದೆ ಮತ್ತು ದೇಶದ ಎಲ್ಲಾ ವಿಮಾನ ಪ್ರಯಾಣಿಕರಿಗೆ ವಿಮಾನಯಾನವನ್ನು ನೆಚ್ಚಿನ ಯಾನವನ್ನಾಗಿಸುತ್ತದೆ. ಟಾಟಾ ಸಮೂಹದ ಪ್ರಮುಖ ಕಂಪನಿಯಾದ ಟಾಟಾ ಸನ್ಸ್‌ನ ಘಟಕವಾದ ಟೇಲ್ಸ್ ಪ್ರೈವೇಟ್ ಲಿಮಿಟೆಡ್ ಈಗ ಏರ್ ಇಂಡಿಯಾವನ್ನು ನಿರ್ವಹಿಸಲಿದೆ.
ಟಾಟಾ ಸನ್ಸ್ ಏರ್ ಇಂಡಿಯಾ ಉದ್ಯೋಗಿಗಳಿಗೆ ಪತ್ರ
ಏರ್ ಇಂಡಿಯಾ ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಸೇರ್ಪಡೆಗೊಂಡ ನಂತರ, ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಏರ್ ಇಂಡಿಯಾ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ. ಈಗ ಇಡೀ ದೇಶದ ಕಣ್ಣು ಏರ್ ಇಂಡಿಯಾ ಮತ್ತು ಟಾಟಾ ಗ್ರೂಪ್ ಮೇಲೆ ನೆಟ್ಟಿದೆ ಎಂದು ಹೇಳಿದರು. ಅಷ್ಟಕ್ಕೂ ಟಾಟಾ ಗ್ರೂಪ್ ಮತ್ತು ಏರ್ ಇಂಡಿಯಾ ಯಾವ ರೀತಿಯಲ್ಲಿ ದೇಶದ ಜನತೆಗೆ ಸೇವೆ ಸಲ್ಲಿಸಲು ಹೊರಟಿವೆ ಎಂಬುದು ದೇಶದ ಜನರ ನಡುವೆಯೇ ನಡೆಯುತ್ತಿದೆ. ಏರ್ ಇಂಡಿಯಾವನ್ನು ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆಯನ್ನಾಗಿ ಮಾಡಲು ಟಾಟಾ ಗ್ರೂಪ್ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಮತ್ತು ಅದನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು. ಏರ್ ಇಂಡಿಯಾದ ಚಿನ್ನದ ಅವಧಿ ಆರಂಭವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ವಿಮಾನಯಾನ ಸಂಸ್ಥೆಯ ಉದ್ಯೋಗಿಗಳನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
69 ವರ್ಷಗಳ ನಂತರ ಹಿಂತಿರುಗಿದರು
ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಸೇರಿಸುವ ವಹಿವಾಟು ಡಿಸೆಂಬರ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು, ಆದರೆ ಕಾರ್ಯವಿಧಾನದ ಕೆಲಸವನ್ನು ಪೂರ್ಣಗೊಳಿಸಲು ತೆಗೆದುಕೊಂಡ ಸಮಯದಿಂದಾಗಿ ನಂತರ ಜನವರಿ 2022 ಕ್ಕೆ ವಿಸ್ತರಿಸಲಾಯಿತು. ಈ ಒಪ್ಪಂದದ ನಂತರ, ಸುಮಾರು 69 ವರ್ಷಗಳ ನಂತರ ಏರ್ ಇಂಡಿಯಾ ಟಾಟಾ ಸಮೂಹಕ್ಕೆ ಮರಳಲಿದೆ. ಟಾಟಾ ಸಮೂಹವು ಏರ್ ಇಂಡಿಯಾವನ್ನು ಅಕ್ಟೋಬರ್ 1932 ರಲ್ಲಿ ಟಾಟಾ ಏರ್ಲೈನ್ಸ್ ಎಂದು ಸ್ಥಾಪಿಸಿತು. ಸರ್ಕಾರವು 1953 ರಲ್ಲಿ ವಿಮಾನಯಾನ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿತು.