
ಮಾರುಕಟ್ಟೆಯಲ್ಲಿ ಈಗ ರಾಖಿ (Rakhi) ಹೊಳಪು. ಕ್ರಿಸ್ಟಲ್ ರಾಖಿ, ಕಸ್ಟಮೈಸ್ ರಾಖಿ, ರುದ್ರಾಕ್ಷಿ ರಾಖಿ ಅಂತ ಬಣ್ಣ ಬಣ್ಣದ ರಾಖಿಗಳ ಮೆರಗು. ಅಣ್ಣ– ತಮ್ಮನಿಗೆ ಸೂಕ್ತವಾದ ರಾಖಿ ಖರೀದಿಯಲ್ಲಿ ಹುಡುಗಿಯರು ಬ್ಯುಸಿ ಇದ್ದಾರೆ. ಈಗಿನ ಟ್ರೆಂಡ್ ಗೆ ತಕ್ಕಂತೆ ರಾಖಿ ಡಿಸೈನ್ ಕೂಡ ಬದಲಾಗ್ತಾ ಇರುತ್ತೆ. ಈ ಬಾರಿ ರಾಖಿ ಮಾರುಕಟ್ಟೆಯಲ್ಲಿ ಜೋರು ಶಬ್ಧ ಮಾಡ್ತಿರೋದು ಯಾವ್ದು ಗೊತ್ತಾ?
ದೇಶದಲ್ಲಿ ಅದ್ರಲ್ಲೂ ವಿಶೇಷವಾಗಿ ದೆಹಲಿಯಲ್ಲಿ ಈ ಬಾರಿ ಲಬುಬು ಗೊಂಬೆ ರಾಖಿ (Labubu Doll Rakhi) ಸದ್ದು ಮಾಡ್ತಿದೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಲಬುಬು ಗೊಂಬೆ ಟ್ರೆಂಡಿಂಗ್ನಲ್ಲಿದೆ. ಅಂತರರಾಷ್ಟ್ರೀಯ ಸಿಂಗರ್ ರೆಹಾನಾದಿಂದ ಬಾಲಿವುಡ್ ನಟಿ ಅನನ್ಯ ಪಾಂಡೆಯವರೆಗೆ, ಶಾರ್ವರಿ ವಾಘ್ ಲಬುಬು ಗೊಂಬೆಯೊಂದಿಗೆ ಕಾಣಿಸಿಕೊಂಡಿದ್ದರು. ಸೆಲೆಬ್ರಿಟಿಗಳ ಕೈನಲ್ಲಿ ಲಬುಬು ಗೊಂಬೆ ನೋಡ್ತಿದ್ದಂತೆ ಜನರು ಅದ್ರ ಖರೀದಿಗೆ ಮುಗಿ ಬಿದ್ದಿದ್ದರು. ಈಗ ಅದು ರಾಖಿ ಮಾರ್ಕೆಟ್ ಗೆ ಲಗ್ಗೆ ಇಟ್ಟಿದೆ. ಅಂಗಡಿಯಲ್ಲಿ ಲಬುಬು ರಾಖಿ ಜನರ ಗಮನ ಸೆಳೆಯುತ್ತಿದೆ. 15 ರಿಂದ 18 ವರ್ಷ ವಯಸ್ಸಿನ ಹುಡುಗಿಯರು ಲಬುಬು ಗೊಂಬೆಯ ರಾಖಿಯನ್ನು ಇಷ್ಟಪಡುತ್ತಿದ್ದಾರೆ.
ಲಬುಬು ಗೊಂಬೆ ರಾಖಿ ಮೇಲೆ ಮಕ್ಕಳಿಗೆ ಕ್ರೇಜ್ ಇದ್ದೇ ಇದೆ. ಮಕ್ಕಳು ಇದನ್ನು ತಮ್ಮ ಕೈಗೆ ಕಟ್ಟಿಕೊಳ್ಳೋಕೆ ಉತ್ಸುಕರಾಗಿದ್ದಾರೆ. ಬರೀ ಮಕ್ಕಳು ಮಾತ್ರವಲ್ಲ ಅಣ್ಣ – ಅತ್ತಿಗೆ ಕೂಡ ಇದನ್ನು ಇಷ್ಟಪಡ್ತಿದ್ದಾರೆ. ಉತ್ತರ ಭಾರತದಲ್ಲಿ ರಾಖಿಯನ್ನು ಬರೀ ಸಹೋದರನಿಗೆ ಕಟ್ಟೋದಿಲ್ಲ. ಅತ್ತಿಗೆ, ಭಾವನಿಗೂ ರಾಖಿ ಕಟ್ಟಲಾಗುತ್ತೆ. ಇವರಿಗಾಗಿ ಸಿಂಪಲ್ ರಾಖಿಗಳು ಮಾರುಕಟ್ಟೆಗೆ ಬರುತ್ವೆ. ಆದ್ರೆ ಈ ಬಾರಿ ಲಬುಬು ಗೊಂಬೆ ರಾಖಿಯನ್ನು ಮಧ್ಯ ವಯಸ್ಸಿನವರು ಖರೀದಿ ಮಾಡ್ತಿದ್ದಾರೆ.
ಸಾಕಷ್ಟು ವೆರೈಟಿ ಬಣ್ಣದಲ್ಲಿ ಈ ಲಬುಬು ರಾಖಿ ಲಭ್ಯವಿದೆ. ಲಬುಬು ರಾಖಿಯಲ್ಲಿ ನೀಲಿ, ಕೆಂಪು, ನೇರಳೆ, ಗುಲಾಬಿ ಬಣ್ಣಗಳನ್ನು ಜನರು ಹೆಚ್ಚು ಇಷ್ಟಪಡ್ತಿದ್ದಾರೆ. ಈ ಲಬುಬು ರಾಖಿ ಇನ್ನೊಂದು ವಿಶೇಷ ಅಂದ್ರೆ ಎಲ್ಲ ಗೊಂಬೆ ಒಂದೇ ರೀತಿ ಇಲ್ಲ. ಪ್ರತಿ ಗೊಂಬೆ ಹಾವಭಾವ ಭಿನ್ನವಾಗಿದೆ. ಒಂದರ ಮುಖದ ಮೇಲೆ ಗೆರೆ ಇದ್ರೆ ಇನ್ನೊಂದು ಗೊಂಬೆ ಐಬ್ರೋ ಆಕರ್ಷಕವಾಗಿದೆ. ಭಿನ್ನವಾಗಿರುವ ಎಕ್ಸ್ಪ್ರೆಶನ್ ಜನರನ್ನು ಮತ್ತಷ್ಟು ಆಕರ್ಷಿಸಿದೆ.
ಲಬುಬು ರಾಖಿ ಬೆಲೆ ಎಷ್ಟು? : ಲಬುಬು ರಾಖಿಯ ಬೆಲೆ ಗಾತ್ರಕ್ಕೆ ತಕ್ಕಂತೆ ಭಿನ್ನವಾಗಿದೆ. ಸಣ್ಣ ಗಾತ್ರದ ರಾಖಿ ಬೆಲೆ 150 ರೂಪಾಯಿಯಿಂದ ಶುರುವಾಗುತ್ತದೆ. ದೊಡ್ಡ ಸೈಜ್ ರಾಖಿಗಳ ಬೆಲೆ 300 ರಿಂದ 700 ರೂಪಾಯಿವರೆಗೆ ಇದೆ.
ದೃಷ್ಟಿ ಕಣ್ಣಿನ ರಾಖಿ : ಹಿಂದಿನ ವರ್ಷ ಈ ದುಷ್ಟ ಕಣ್ಣಿನ ರಾಖಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಇದು ನೀಲಿ ಬಣ್ಣದಲ್ಲಿ ಲಭ್ಯವಿತ್ತು. ಆದ್ರೆ ಈ ಬಾರಿ ದೃಷ್ಟಿ ಕಣ್ಣಿನ ರಾಖಿಯಲ್ಲಿ ಸಾಕಷ್ಟು ವೆರೈಟಿ ಕಾಣ್ಬಹುದು. ಈ ಬಾರಿ ಲಬುಬು ರಾಖಿ ಜೊತೆ ಕರಿಮಣಿ ಡಿಸೈನ್ ಇರುವ ದೃಷ್ಟಿ ರಾಖಿ ಕೂಡ ಹೆಚ್ಚು ಮಾರಾಟ ಆಗ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.