ಇನ್ಫೋಸಿಸ್ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಮಾಜಿ ಉದ್ಯೋಗಿ!

By Web DeskFirst Published Sep 19, 2018, 8:36 PM IST
Highlights

ಇನ್ಫೋಸಿಸ್ ಮಾಜಿ ಸಿಎಫ್ ಓ ರಾಜೀವ್ ಬನ್ಸಾಲ್! ಇನ್ಫೋಸಿಸ್ ವಿರುದ್ದ ಕೋಟರ್ಟ್ ಮೆಟ್ಟಿಲೇರಿದ ಬನ್ಸಾಲ್! ಇನ್ಫೋಸಿಸ್ ವಿರುದ್ಧ ಕೇವಿಯಟ್ ಅರ್ಜಿ ಸಲ್ಲಿಸಿದ ಬನ್ಸಾಲ್! ಇನ್ಫೋಸಿಸ್ ವಿರುದ್ದ ವೇತನ ಪಾವತಿ ಮಾಡದ ಆರೋಪ

ಬೆಂಗಳೂರು(ಸೆ.19): ಮಹತ್ವದ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಾಲ್ ಸಂಸ್ಥೆಯ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 

ಬೆಂಗಳೂರು ನಗರದ ನ್ಯಾಯಾಲಯವೊಂದರಲ್ಲಿ ಬನ್ಸಾಲ್ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ವಿರುದ್ಧ ಕೇವಿಯಟ್ ಸಲ್ಲಿಸಿದ್ದಾರೆ. 

ದೇಶದ ಎರಡನೆಯ ಅತಿ ದೊಡ್ಡ ಐಟಿ ಕಂಪೆನಿಯು ಟ್ರಿಬ್ಯೂನಲ್ ಆದೇಶದ ಮೇರೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ, ಕೇವಿಯಟ್ ಅರ್ಜಿ ಸಲ್ಲಿಕೆಯಾಗಿದೆ ಎಂದು ಬನ್ಸಾಲ್ ಅವರ ಇಂಡಸ್ ಲಾ ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ.

ಈ ಕೇವಿಯಟ್ ಅರ್ಜಿ ಬನ್ಸಾಲ್ ಹಿತಾಸಕ್ತಿಯನ್ನು ಕಾಪಾಡಲಿದ್ದು, ಇನ್ಫೋಸಿಸ್ ಪ್ರಾರಂಭಿಸಲಿದೆ ಎಂದು ನಂಬಲಾದ ಯಾವುದೇ ಮೊಕದ್ದಮೆಯನ್ನು ಬನ್ಸಾಲ್ ಅನುಮತಿ ಇಲ್ಲದೆ ಮುಂದುವರಿಸುವುದನ್ನು ತಡೆಯಲಿದೆ.

2015 ರಲ್ಲಿ ಬನ್ಸಾಲ್ ಕಂಪನಿಯನ್ನು ತೊರೆದಾಗ 17.38 ಕೋಟಿ ಅಥವಾ 24 ತಿಂಗಳುಗಳ ವೇತನವನ್ನು ಪಾವತಿಸಲು ಒಪ್ಪಿಕೊಳ್ಳಲಾಗಿತ್ತು. ಆದರೆ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಇತರರು ಈ ಪ್ಯಾಕೇಜ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 

ತದನಂತರ ಬನ್ಸಾಲ್ ತಾವು ಈ ಮುನ್ನ ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಮಧ್ಯಸ್ಥಿಕೆ ವ್ಯವಹಾರಕ್ಕೆ ಎಳೆದು ತಂದದ್ದಲ್ಲದೆ ಬಾಕಿ ಮೊತ್ತ ಕೊಡುವಂತೆ ಆಗ್ರಹಿಸಿದ್ದರು.

click me!
Last Updated Sep 19, 2018, 8:36 PM IST
click me!