ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಪೈಕಿ ಒಂದಾದ ಬಜಾಜ್ ಆಟೋ ಕಂಪನಿಯ ಮುಖ್ಯಸ್ಥ ಹುದ್ದೆಗೆ ರಾಹುಲ್ ಬಜಾಜ್ ರಾಜೀನಾಮೆ ನೀಡಿದ್ದಾರೆ. ವಯಸ್ಸಿನ ಕಾರಣದಿಮದ ರಾಜೀನಾಮೆ ನಿಡಿದ್ದಾರೆ.
ನವದೆಹಲಿ (ಏ.30): ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಪೈಕಿ ಒಂದಾದ ಬಜಾಜ್ ಆಟೋ ಕಂಪನಿಯ ಮುಖ್ಯಸ್ಥ ಹುದ್ದೆಗೆ ರಾಹುಲ್ ಬಜಾಜ್ ರಾಜೀನಾಮೆ ನೀಡಿದ್ದಾರೆ.
82 ವರ್ಷದ ರಾಹುಲ್ ಬಜಾಜ್ ತಮ್ಮ ವಯಸ್ಸಿನ ಕಾರಣವನ್ನು ನೀಡಿ ಕಾರ್ಯನಿರ್ವಾಹಕೇತರ ಮುಖ್ಯಸ್ಥ ಹುದ್ದೆಯಿಂದ ನಿವೃತ್ತಿ ಘೋಷಿಸಿದ್ದಾರೆ.
ಟಾಟಾ ಕಂಪನಿ ತೊರೆದ ಟಿಯಾಗೋ, ನೆಕ್ಸಾನ್, ಹ್ಯಾರಿಯರ್ ವಿನ್ಯಾಸದ ರೂವಾರಿ ಪ್ರತಾಪ್ ಬೋಸ್ ...
ನೀರಜ್ ಬಜಾಜ್ ಈ ಹಿದ್ದೆಯನ್ನು ಅಲಂಕರಿಸಿದ್ದಾರೆ. ರಾಹುಲ್ ಬಜಾಜ್ ಅವರ ರಾಜೀನಾಮೆ ಏ.30ರಿಂದ ಅನ್ವಯ ಆಗಲಿದೆ ಎಂದು ಬಜಾಜ್ ಕಂಪನಿ ಷೇರುಪೇಟೆಗೆ ಗುರುವಾರ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ.
ರಾಹುಲ್ ಬಜಾಜ್ ಅವರು 1972ರಲ್ಲಿ ಕಂಪನಿಯ ಚುಕ್ಕಾಣಿಯನ್ನು ವಹಿಸಿಕೊಂಡಿದ್ದರು.