ದುಬೈ ವಿಮಾನ ಟಿಕೆಟ್ ಗೆ ಭಾರೀ ಬೇಡಿಕೆ/ ಭಾರತದಿಂದ ದುಬೈ ಮಾರ್ಗತವಾಗಿ ಯುರೋಪ್ ಸೇರಿಕೊಳ್ಳುವ ತವಕ/ ಪ್ರಿಲ್ 24 ರಿಂದ ಯುಎಇ ಭಾರತದಿಂದ ಬರುವ ವಿಮಾನಗಳಿಗೆ ಪ್ರವೇಶ ಇಲ್ಲ ಎಂದು ಹೇಳಿದೆ/
ದುಬೈ(ಏ. 28) ಭಾರತ ಮತ್ತು ಯುಎಇ ನಡುವೆ ವಿಮಾನಯಾನ ಆರಂಭಕ್ಕೆ ದೊಡ್ಡ ಬೇಡಿಕೆ ಕೇಳಿಬಂದಿದೆ. ಹಾಗೆ ದರ ಸಹ ಗಗನಕ್ಕೇರಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಯುಎಇ ನಿರ್ಬಂಧ ತೆರವು ಮಾಡಲಿದೆ. ಏಪ್ರಿಲ್ 24 ರಿಂದ ಭಾರತದಿಂದ ಬರುವ ವಿಮಾನಗಳಿಗೆ 10 ದಿನಗಳವರೆಗೆ ಪ್ರವೇಶ ಇಲ್ಲ ಎಂದು ಯುಎಇ ಹೇಳಿತ್ತು.
undefined
ಈ ಅವಧಿ ಮುಗಿದ ನಂತರ ಎರಡು ರಾಷ್ಟ್ರಗಳ ನಡುವೆ ವಿಮಾನಯಾನ ಮೇ 5 ರಿಂದ ಆರಂಭವಾಗಲಿದೆ. ಬೆಂಗಳೂರಿನಿಂದ ಊರಿಗೆ ತೆರಳುವ ಜನರ ಬಳಿ ಖಾಸಗಿ ಬಸ್ ಗಳು ಹೇಗೆ ದೊಡ್ಡ ಮೊತ್ತವನ್ನು ವಸೂಲಿ ಮಾಡಿದ್ದವೋ ಇಲ್ಲಿಯೂ ಅಂಥದ್ದೇ ಸ್ಥಿತಿ ನಿರ್ಮಾಣವಾಗಿದೆ.
ಬಿಜಿನಸ್ ಕ್ಲಾಸ್ ದರ ಮುಂಬೈನಿಂದ ದುಬೈಗೆ 146,000 ರೂ. ಇದ್ದರೆ ಈಗಾಗಲೆ ಎಕಾನಮಿ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಒನ್ ವೇ ಗೆ 35,200 ರೂ. ನೀಡಬೇಕಿದೆ. ಮೇ 6ರಂದು ಪ್ರಯಾಣ ಮಾಡುವರಾದರೆ ಇದೇ ಜಾಗಕ್ಕೆ 57,907 ರೂ. ನೀಡಬೇಕಾಗುತ್ತದೆ. ಕೆಲವೇ ಕೆಲವು ಕಡಿಮೆ ದರದ ಸೀಟುಗಳು ಲಭ್ಯವಿದೆ.
ಯುರೋಪ್ ಮತ್ತು ಇತರ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳನ್ನು ಹಿಡಿಯಲು ಭಾರತದಿಂದ ದುಬೈ ಮಾರ್ಗವಾಗಿ ತೆರಳಲು ಜಾಸ್ತಿ ಜನ ಮುಂದಾಗಿರುವುದೇ ಈ ರೀತಿ ಏಕಾಏಕಿ ಬೇಡಿಕೆ ಮತ್ತು ದರ ಹೆಚ್ಚಳಕ್ಕೆ ಕಾರಣ.
ಐಸಿಸಿ ವಿಶ್ವಕಪ್ ಯುಎಇನಲ್ಲಿ ನಡೆಯಲಿದೆಯಾ?
ಬಹುತೇಕ ಜನರು ತಮ್ಮ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಭಾರತದಕ್ಕೆ ತೆರಳಿದ್ದು ಅಲ್ಲಿಂದ ವಾಪಾಸಾಗುವ ಅನಿವಾರ್ಯದಲ್ಲಿದ್ದಾರೆ ಎಂದು ವಿಮಾನಯಾನ ಸಂಸ್ಥೆಯ ಮ್ಯಾನೇಜರ್ ಒಬ್ಬರು ಹೇಳುತ್ತಾರೆ.
ಜನ ಯುಎಇಗೆ ವಾಪಸ್ ಬರುವ ತವಕದಲ್ಲಿ ಇದ್ದಾರೆ. ಒಂದು ವೇಳೆ ಮತ್ತೆ ಯಾವುದಾದರೂ ಹೊಸ ನಿಯಮ ಬಂದು ಸೇವೆ ಬಂದ್ ಆದರೆ ಕಷ್ಟ ಎನ್ನುವ ಆತಂಕ ಅವರನ್ನು ಕಾಡುತ್ತಿದೆ.
ಶೇ. 100 ಕ್ಕೂ ಅಧಿಕ ಹೆಚ್ಚಳವನ್ನು ಇಲ್ಲಿ ಕಂಡಿದ್ದೇವೆ. ಕಳೆದ ಹತ್ತು ದಿನದಲ್ಲಿ ಜನ ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಮೊದಲ ಕೆಲವು ದಿನ ಕೇವಲ ಒನ್ ವೇ ಸೇವೆ ಮಾತ್ರ ನೀಡಿಉವ ಆಲೋಚನೆ ಇದೆ ಎಂಬುದನ್ನು ತಿಳಿಸಿದ್ದಾರೆ. ದರ ಇನ್ನು ಹೆಚ್ಚಳವಾಗಬಹುದು ಎಂಬ ಲೆಕ್ಕಾಚಾರವೂ ಇದೆ.