GDP Growth:ಭಾರತದ ಜಿಡಿಪಿ ವೃದ್ಧಿ ; 2021-22ನೇ ಸಾಲಿನಲ್ಲಿ ಶೇ. 8.7ಕ್ಕೆ ಹೆಚ್ಚಳ; ವಾರ್ಷಿಕ ತಲಾ ಆದಾಯ ಇಳಿಕೆ

Published : Jun 01, 2022, 09:37 PM IST
GDP Growth:ಭಾರತದ ಜಿಡಿಪಿ ವೃದ್ಧಿ ; 2021-22ನೇ ಸಾಲಿನಲ್ಲಿ  ಶೇ. 8.7ಕ್ಕೆ ಹೆಚ್ಚಳ; ವಾರ್ಷಿಕ ತಲಾ ಆದಾಯ ಇಳಿಕೆ

ಸಾರಾಂಶ

*2020-2021ನೇ ಹಣಕಾಸು ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.6 *2021-2022ನೇ ಹಣಕಾಸು ಸಾಲಿನ ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರ ಹಿಂದಿನ ಸಾಲಿನ ಇದೇ ತ್ರೈಮಾಸಿಕಕ್ಕಿಂತ ಶೇ.2.5ರಷ್ಟು ಹೆಚ್ಚು *ಭಾರತದ ವಾರ್ಷಿಕ ತಲಾ ಆದಾಯ ಕೋವಿಡ್ ಪೂರ್ವ ಮಟ್ಟಕ್ಕಿಂತ ಕೆಳಗೆ  

ನವದೆಹಲಿ (ಜೂ.1): ಭಾರತದ ಒಟ್ಟು ದೇಶೀಯ ಉತ್ಪನ್ನ (GDP) 2021-2022ನೇ ಹಣಕಾಸು ಸಾಲಿನ (Financial Year) ನಾಲ್ಕನೇ ತ್ರೈಮಾಸಿಕದಲ್ಲಿ (Quater) ಶೇ.4.1ರಷ್ಟು ಹೆಚ್ಚಳ ದಾಖಲಿಸಿದೆ. ಇನ್ನು 2021-22ನೇ ಇಡೀ ಹಣಕಾಸು ಸಾಲಿನಲ್ಲಿ ಜಿಡಿಪಿಯು (GDP)  ಶೇ.8.7ರಷ್ಟು ಬೆಳವಣಿಗೆ ಕಂಡಿದೆ. 2020-2021ನೇ ಹಣಕಾಸು ಸಾಲಿನಲ್ಲಿ ಜಿಡಿಪಿ ಬೆಳವಣಿಗೆ  ದರ ಶೇ.6.6ರಷ್ಟಿತ್ತು.

2021-2022ನೇ ಹಣಕಾಸು ಸಾಲಿನ ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರ 2020-21ನೇ ಸಾಲಿನ ಇದೇ ತ್ರೈಮಾಸಿಕಕ್ಕಿಂತ ಶೇ.2.5ರಷ್ಟು ಹೆಚ್ಚಿದೆ. ಕೇಂದ್ರ ಸರ್ಕಾರ (Central Government) ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ 2021-2022ನೇ ಹಣಕಾಸಿನ ಸಾಲಿನಲ್ಲಿ ಜಿಡಿಪಿ (GDP) ಉತ್ತಮ ಪ್ರಗತಿ ದಾಖಲಿಸಿದ್ದು, 22 ವರ್ಷಗಳಲ್ಲೇ ಅತ್ಯಧಿಕ ಬೆಳವಣಿಗೆ ದರವಾಗಿದೆ. ಆದರೆ, ಜನವರಿ- ಮಾರ್ಚ್ ತ್ರೈಮಾಸಿಕದ ಆರ್ಥಿಕ ಬೆಳವಣಿಗೆಯು ಹಿಂದಿನ ತ್ರೈಮಾಸಿಕ ಅಂದ್ರೆ ಅಕ್ಟೋಬರ್ -ಡಿಸೆಂಬರ್ ಬೆಳವಣಿಗೆ ದರಕ್ಕಿಂತ ಕಡಿಮೆ ಇದೆ. 

Economic Crisis ಲಂಕಾ ಹಾದಿಯಲ್ಲಿ ಪಾಕಿಸ್ತಾನ, ಆರ್ಥಿಕ ಬಿಕ್ಕಟ್ಟಿನಿಂದ ತುಪ್ಪ, ಖಾದ್ಯ ತೈಲ ಬೆಲೆ ದಾಖಲೆಯ ಗರಿಷ್ಠ ಮಟ್ಟ!

ಇನ್ನು 2022ನೇ ಹಣಕಾಸು ಸಾಲಿನ ಜಿವಿಎ (GVA) ಶೇ.8.1ರಷ್ಟಿತ್ತು. ಇದು ಹಿಂದಿನ ಸಾಲಿಗಿಂತ ಶೇ.4.8ರಷ್ಟು ಕಡಿಮೆ. ಇನ್ನು ವ್ಯಾಪಾರ (Trade), ಹೋಟೆಲ್ ಗಳು (Hotels) ಹಾಗೂ ಸಾರಿಗೆ (Transport) ವಲಯಗಳಲ್ಲಿ ಶೇ.11.1ರಷ್ಟು ಬೆಳವಣಿಗೆ ಕಂಡುಬಂದಿದೆ. ಕೊರೋನಾ (Corona) ಸಂಬಂಧಿ ನಿರ್ಬಂಧಗಳ ಹಿನ್ನೆಲೆಯಲ್ಲಿ ಕಳೆದ ಆರ್ಥಿಕ ಸಾಲಿನಲ್ಲಿ ಸೇವಾ ವಲಯದ ಪ್ರಗತಿಯಲ್ಲಿ ಇಳಿಕೆ ಕಂಡುಬಂದಿತ್ತು. ಇನ್ನು ಉತ್ಪಾದನಾ ವಲಯ ಶೇ.9.9ರಷ್ಟು ಬೆಳವಣಿಗೆ ದಾಖಲಿಸಿತ್ತು. 2021-22ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಉತ್ಪಾದನೆ ಕುಸಿತ ಕಂಡು, ಶೇ.0.20ರಷ್ಟು ಸಂಕುಚಿತಗೊಂಡಿದೆ. ಇದು ಇಡೀ ಆರ್ಥಿಕ ಸಾಲಿನ ಜಿಡಿಪಿ ಬೆಳವಣಿಗೆ ದರವನ್ನು ತಗ್ಗಿಸಿದೆ. ಇನ್ನು ಕೃಷಿ (Agriculture) ಬೆಳವಣಿಗೆ ದರ ಶೇ.3ರಷ್ಟು ತಗ್ಗಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಇದು ಶೇ.3.3ರಷ್ಟಿತ್ತು. 

ಜಿಡಿಪಿ ದರದಲ್ಲಿ ಏರಿಳಿತ ಕಾಣಿಸಿಕೊಳ್ಳಲು ಒಮಿಕ್ರಾನ್ (Omicron) ಅಲೆಗೆ ಸಂಬಂಧಿಸಿ ಸ್ಥಳೀಯವಾಗಿ ನಿರ್ಬಂಧಗಳ ಹೇರಿಕೆ, ಅಧಿಕ ಹಣದುಬ್ಬರದ (Inflation) ಜೊತೆಗೆ ರಷ್ಯಾ-ಉಕ್ರೇನ್ (Russia-Ukraine) ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಪೂರೈಕೆ ವ್ಯತ್ಯಯ ಕೂಡ ಕಾರಣವಾಗಿವೆ. 
2020-21ರ ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ.6.71ರಷ್ಟಿದೆ. ಬಜೆಟ್ ಅಂದಾಜಿನಲ್ಲಿ ವಿತ್ತೀಯ ಕೊರತೆಯನ್ನು ಶೇ.6.9ಕ್ಕೆ ಅಂದಾಜಿಸಲಾಗಿತ್ತು. ಆದರೆ, ಈ ಮೊದಲು ಅಂದಾಜಿಸಿದ್ದಕ್ಕಿಂತ ವಿತ್ತೀಯ ಕೊರತೆ ಕಡಿಮೆಯಿದೆ. 2021ರ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಸರ್ಕಾರ ವಿತ್ತೀಯ ಕೊರತೆಯನ್ನು ಜಿಡಿಪಿಯಶೇ.6.8ಕ್ಕೆ ನಿಗದಿಪಡಿಸಿತ್ತು. 2021-22 ರ ಅಂತ್ಯಕ್ಕೆ ಇದು ಶೇ.4.37 ಇತ್ತು.ಭಾರತೀಯ ರಿಸರ್ವ್ ಬ್ಯಾಂಕ್ (RBI) 2021-22ನೇ ಹಣಕಾಸು ಸಾಲಿನಲ್ಲಿ ಶೇ.9.5 ಜಿಡಿಪಿ ಬೆಳವಣಿಗೆ ದರ ಅಂದಾಜಿಸಿತ್ತು. ಆದ್ರೆ ಸರ್ಕಾರದ ಅಂಕಿಅಂಶಗಳ ಪ್ರಕಾರ ಇದು ಕಡಿಮೆ ಇದೆ. 

2022ನೇ ಇಸವಿಯಲ್ಲಿ ಭಾರತ ಶೇ.8.2ರ ಪ್ರಗತಿ ದರ ಕಾಣಲಿದೆ. ತನ್ಮೂಲಕ ಇದು ಜಗತ್ತಿನಲ್ಲೇ ಅತಿ ವೇಗದ ಅಭಿವೃದ್ಧಿ ಹೊಂದಲಿರುವ ಆರ್ಥಿಕತೆ ಎನ್ನಿಸಿಕೊಳ್ಳಲಿದೆ. ಚೀನಾದ ಶೇ.4.4ರ ಪ್ರಗತಿ ದರಕ್ಕಿಂತ ಭಾರತ ದುಪ್ಪಟ್ಟು ವೇಗದಲ್ಲಿ ಪ್ರಗತಿ ಕಾಣಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಇತ್ತೀಚೆಗೆ ಹೇಳಿತ್ತು. ಭಾರತ 2022ರಲ್ಲಿ ಶೇ.9.1ರ ಪ್ರಗತಿ ದರ ಕಾಣಲಿದೆ ಎಂದು ಕೆಲ ತಿಂಗಳ ಹಿಂದೆ ಐಎಂಎಫ್‌ ಕೂಡ ಹೇಳಿತ್ತು. ಆದರೆ ಈ ಅಂದಾಜನ್ನು ಶೇ.0.8ರಷ್ಟುಕಡಿಮೆ ಮಾಡಿ ಈಗ ಪರಿಷ್ಕರಿಸಿದೆ. ಇದೇ ವೇಳೆ 2023ರಲ್ಲಿ ಆರ್ಥಿಕ ಪ್ರಗತಿ ಶೇ.6.9ರಷ್ಟುಇರಲಿದೆ ಎಂದು ಹೇಳಿದೆ. 

India GDP ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ!

ವಾರ್ಷಿಕ ತಲಾ ಆದಾಯ ಇಳಿಕೆ 
ಭಾರತದ ವಾರ್ಷಿಕ ತಲಾ ಆದಾಯ (annual per capital income) ಕೋವಿಡ್ ಪೂರ್ವ ಮಟ್ಟಕ್ಕಿಂತ ಕೆಳಗಿಳಿದಿದ್ದು, 2021-22 ಸಾಲಿನಲ್ಲಿ 91,481ರೂ. ಇದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಆದರೆ, ನಿವ್ವಳ ರಾಷ್ಟ್ರೀಯ ಆದಾಯ (NNI) ಆಧರಿತ ತಲಾ ಆದಾಯದಲ್ಲಿ 2021-22 ಸಾಲಿನಲ್ಲಿ ಕಳೆದ ಸಾಲಿಗಿಂತ ಶೇ. 7.5ರಷ್ಟು ಪ್ರಗತಿಯಾಗಿದೆ. 2019-20 ನೇ ಸಾಲಿನಲ್ಲಿ ತಲಾ ಆದಾಯ 94,270ರೂ. ಇತ್ತು. 2020-21ನೇ ಸಾಲಿನಲ್ಲಿ ಇದು 85,110 ರೂ.ಗೆ ಇಳಿಕೆಯಾಗಿತ್ತು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!