
ಮುಂಬೈ(ಅ.5): ಸತತ ಮೂರನೇ ವರ್ಷ ಕೂಡ ಸಾರ್ವಜನಿಕ ವಲಯ ಬ್ಯಾಂಕ್ ಗಳು ಮರುಪಾವತಿಯಾಗದ ಸಾಲದಿಂದ ನಷ್ಟ ಅನುಭವಿಸಿವೆ ಎಂದು ರೇಟಿಂಗ್ ಗಳು, ಸಂಶೋಧನೆ ಮತ್ತು ನೀತಿ ಸಲಹಾ ಸೇವೆಗಳನ್ನು ಒದಗಿಸುವ ಜಾಗತಿಕ ವಿಶ್ಲೇಷಣಾತ್ಮಕ ಕಂಪನಿ ಸಿಆರ್ ಐಎಸ್ಐಎಲ್ ವರದಿ ಹೇಳಿದೆ.
ಆದರೆ ಒಂದು ಸಮಾಧಾನಕರ ಸಂಗತಿಯೆಂದರೆ ಕಳೆದ ವರ್ಷ 85 ಸಾವಿರ ಕೋಟಿ ರೂಪಾಯಿ ಅನುತ್ಪಾದಕ ಸಾಲಗಳಿಂದ ನಷ್ಟವಾಗಿದ್ದು, ಈ ವರ್ಷ ಅದರ ಮೊತ್ತ 50 ಸಾವಿರ ಕೋಟಿ ರೂ. ಗೆ ಇಳಿದಿದೆ.
ಬ್ಯಾಂಕಿಂಗ್ ವಲಯದಲ್ಲಿ ಅನುತ್ಪಾದಕ ಆಸ್ತಿಗಳ ಮೌಲ್ಯ 2019ರ ಹಣಕಾಸು ವರ್ಷದ ಕೊನೆಯ ವೇಳೆಗೆ ಶೇ. 60ರಷ್ಟಾಗುವ ಸಾಧ್ಯತೆಯಿದೆ. ಕಳೆದ ಹಣಕಾಸು ವರ್ಷದ ಕೊನೆಗೆ ಇದು ಶೇ.50 ರಷ್ಟಾಗಿತ್ತು, ಬ್ಯಾಂಕಿಂಗ್ ವಹಿವಾಟುಗಳು ಹೆಚ್ಚಾಗಲು ಖಾಸಗಿ ಬ್ಯಾಂಕುಗಳು ಸ್ವಲ್ಪ ಉತ್ತೇಜನ ನೀಡುತ್ತವೆ ಎಂದು ಸಿಆರ್ ಐಎಸ್ಐಎಲ್ ಹೇಳಿದೆ.
ಅನುತ್ಪಾದಕ ಆಸ್ತಿಗಳ ಕುಸಿತಗಳು ಕ್ರಮೇಣ ಕಡಿಮೆಯಾಗುತ್ತದೆಯಾದರೂ ನಮ್ಮ ನಿರೀಕ್ಷೆಯ ಹೊರತಾಗಿಯೂ ಈ ಹಣಕಾಸು ವರ್ಷಕ್ಕೆ ಸರಬರಾಜು ವೆಚ್ಚಗಳು 2.8 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ. ಶೇ. 100ರಷ್ಟು ಅನುತ್ಪಾದಕ ಸಾಲಗಳ ಮೊತ್ತದಲ್ಲಿ ಶೇ. 25ರಷ್ಟು ಇಂಧನ ವಲಯದ ಸಾಲಗಳಾಗಿವೆ ಎಂದು ಸಮೀಕ್ಷೆ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ಅವಧಿಯಲ್ಲಿ ಬ್ಯಾಂಕಿಂಗ್ ವಲಯಗಳ ಲಾಭಗಳು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಿಆರ್ ಐಎಸ್ ಐಎಲ್ ಹಿರಿಯ ನಿರ್ದೇಶಕ ಕೃಷ್ಣನ್ ಸೀತಾರಾಮ್ ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.