ಅಂಗಡಿ ಚಿನ್ನ ಮುಟ್ಟಕ್ಕಾಗ್ತಿಲ್ಲ: ಮನೆಯ 'ಚಿನ್ನಾ' ಮುತ್ತಿಡಕ್ಕೆ ಬಿಡ್ತಿಲ್ಲ!

Published : Oct 05, 2018, 10:40 AM IST
ಅಂಗಡಿ ಚಿನ್ನ ಮುಟ್ಟಕ್ಕಾಗ್ತಿಲ್ಲ: ಮನೆಯ 'ಚಿನ್ನಾ' ಮುತ್ತಿಡಕ್ಕೆ ಬಿಡ್ತಿಲ್ಲ!

ಸಾರಾಂಶ

ಗಗನಕ್ಕೇರಿದ ಬಂಗಾರದ ಬೆಲೆ! 10 ಗ್ರಾಂ ಶುದ್ಧ ಚಿನ್ನಕ್ಕೆ 555 ರೂ. ಏರಿಕೆ!  ರೂಪಾಯಿ ಮೌಲ್ಯ ಕುಸಿತವೇ ಬೆಲೆ ಏರಿಕೆಗೆ ಕಾರಣ! ಸ್ಥಳೀಯ ಆಭರಣ ತಯಾರಕರಿಂದ ಹೆಚ್ಚಿದ ಬೇಡಿಕೆ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ  

ನವದೆಹಲಿ(ಅ.5): ಕೆಲ ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಬಂಗಾರದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದೆ.  10 ಗ್ರಾಂ ಶುದ್ಧ ಚಿನ್ನಕ್ಕೆ 555 ರೂ ಏರಿಕೆ ಕಾಣುವ ಮೂಲಕ 32,030 ರೂ.ಗೆ ತಲುಪಿದೆ.

ಹಬ್ಬದ ಸಿರೀಸ್ ಆರಂಭವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಆಭರಣ ತಯಾರಕರಿಂದ ಹೆಚ್ಚಿದ ಬೇಡಿಕೆ ಹೆಚ್ಚಿದ್ದರಿಂದ  ಬಂಗಾರದ ಬೆಲೆಯಲ್ಲಿ  ಇವತ್ತು ಏರಿಕೆ ಕಂಡಿದೆ.  ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡು ಬಂದ ಪರಿಣಾಮ ಇದು ಸ್ಥಳೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.   

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ 73.41 ರೂ.ಗೆ ಕುಸಿತ ಕಂಡು ಬಂದಿದ್ದರಿಂದ ಚಿನ್ನದ ಬೆಲೆ ಏರಿಕೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.  

ರಾಷ್ಟ್ರೀಯ ಚೀನಿವಾರ ಪೇಟೆಯಲ್ಲಿ 99.9 ರಷ್ಟು  10 ಗ್ರಾಂ ಪರಿಶುದ್ಧ ಬಂಗಾರಕ್ಕೆ 32,030 ಹಾಗೂ 99.5 ರಷ್ಟು ಪ್ಯೂರಿಟಿಯ ಶುದ್ಧ ಬಂಗಾರಕ್ಕೆ 31880 ರೂ. ಕ್ಕೆ ಮಾರಾಟವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

12 ಸಾವಿರ ಕೋಟಿಯ IPO ಮೂಲಕ ಷೇರು ಮಾರುಕಟ್ಟೆಗೆ ಬರಲಿರುವ PhonePe, ಮೈಕ್ರೋಸಾಫ್ಟ್‌ನ ಎಲ್ಲಾ ಪಾಲು ಮಾರಾಟ!
ಡೀಸೆಲ್ ಕಾರಿಗೆ ಪೆಟ್ರೋಲ್ ಹಾಕಿದರೆ ತಕ್ಷಣ ಹೀಗೆ ಮಾಡಿ, ಲಕ್ಷಾಂತರ ರೂಪಾಯಿ ನಷ್ಟ ತಪ್ಪಿಸಬಹುದು..!