ಕೇಂದ್ರದ ವಿರುದ್ಧ ತಿರುಗಿಬಿದ್ದ ಬ್ಯಾಂಕ್ ನೌಕರರು, ಜನವರಿಯಲ್ಲಿ ಸಾರ್ವತ್ರಿಕ ಮುಷ್ಕರ!

By Suvarna News  |  First Published Dec 21, 2019, 2:51 PM IST

ಕೇಂದ್ರದ ವಿರುದ್ಧ ಬ್ಯಾಂಕುಗಳ ಸಾರ್ವತ್ರಿಕ ಮುಷ್ಕರ| ಹೊಸ ವರ್ಷದ ಆರಂಭದಲ್ಲಿ ಪ್ರತಿಭಟನೆಗೆ ನಿರ್ಧಾರ|


ನವದೆಹಲಿ[ಡಿ21]: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳು ಹಾಗೂ ಬ್ಯಾಂಕಿಂಗ್‌ ವಲಯದಲ್ಲಿನ ಸುಧಾರಣೆಗಳನ್ನು ಖಂಡಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರ ಐದು ಸಂಘಟನೆಗಳು ಜ.8ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಿವೆ.

ದೇಶದಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ, ಶಾಶ್ವತ ಉದ್ಯೋಗಗಳ ಹೊರಗುತ್ತಿಗೆ ತಡೆ, ಕಾರ್ಮಿಕರಿಗೆ 21 ಸಾವಿರ ರು. ಕನಿಷ್ಠ ವೇತನ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಹಲವು ಸಂಘಟನೆಗಳು ಈಗಾಗಲೇ ಜನವರಿಯಲ್ಲಿ ಮುಷ್ಕರಕ್ಕೆ ಕರೆ ಕೊಟ್ಟಿವೆ.

Tap to resize

Latest Videos

ಇದೀಗ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಲವರ್ಧನೆ, ಬ್ಯಾಂಕ್‌ಗಳ ಖಾಸಗೀಕರಣ ಮತ್ತು ಬ್ಯಾಂಕ್‌ ಶಾಖೆಗಳ ಬಂದ್‌ ಮಾಡದಂತೆ ಬ್ಯಾಂಕ್‌ ನೌಕರರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.

ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!