ProWatch Xtreme Smartwatch: ಕೇವಲ 16 ರೂ.ಗೆ ಸಿಗ್ತಿದೆ 4,499 ಮೌಲ್ಯದ ಸ್ಮಾರ್ಟ್ ವಾಚ್; ಇದಕ್ಕಿಂತ ಸೂಪರ್ ಆಫರ್ ಮತ್ತೊಂದಿಲ್ಲ

Published : Jun 16, 2025, 11:51 AM ISTUpdated : Jun 16, 2025, 05:14 PM IST
Prowatch Xtreme Smartwatc

ಸಾರಾಂಶ

ಲಾವಾ ಪ್ರೊವಾಚ್ ಎಕ್ಸ್‌ಟ್ರೀಮ್ ಸ್ಮಾರ್ಟ್‌ವಾಚ್ ಕೇವಲ ₹16ಕ್ಕೆ ಲಭ್ಯ!  ₹4499 ಮೌಲ್ಯದ ಸ್ಮಾರ್ಟ್‌ವಾಚ್ ಅನ್ನು ಈಗಲೇ ಖರೀದಿಸಿ.

Prowatch Xtreme Smartwatch: ನಿಮಗೆ ಸ್ಮಾರ್ಟ್‌ವಾಚ್ ಧರಿಸುವ ಆಸೆ ಇದೆಯಾ? ಕೆಲವರಿಗೆ ವಾರದ ಏಳು ದಿನವೂ ಬೇರೆ ಬೇರೆ ಸ್ಟೈಲಿಶ್ ವಾಚ್ ಧರಿಸಬೇಕೆಂದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಬ್ರ್ಯಾಂಡೆಡ್ ವಾಚ್‌ಗಳ ಮೇಲೆ ವ್ಯಾಮೋಹವಿರುತ್ತದೆ. ಹಾಗಾದ್ರೆ ಈ ಸುದ್ದಿ ನಿಮಗೆ ನಿಜಕ್ಕೂ ಸಂತೋಷವನ್ನುಂಟು ಮಾಡಲಿದೆ. ಬ್ರ್ಯಾಂಡೆಡ್ ಮತ್ತು ಸ್ಟೈಲಿಶ್ ವಾಚ್‌ ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ ಬಂದಿದೆ. ಲಾವಾ ಕಂಪನಿಯು ತನ್ನ ಪ್ರೊವಾಚ್ ಎಕ್ಸ್‌ಟ್ರೀಮ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದ್ದು, ಇದರ ಬೆಲೆ 4,999 ರೂ.ಗಳಿಂದ ಪ್ರಾರಂಭವಾಗುತ್ತದೆ.

ಪ್ರೊವಾಚ್ ಎಕ್ಸ್‌ಟ್ರೀಮ್ ಸ್ಮಾರ್ಟ್‌ವಾಚ್‌ನ ಮಾರಾಟ ಇಂದಿನಿಂದ (ಜೂನ್ 16) ಆರಂಭವಾಗಲಿದೆ. ಈ ದುಬಾರಿ ಬೆಲೆಯ ವಾಚ್‌ನ್ನು ನೀವು ಕೇವಲ 16 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಕೇವಲ 16 ರೂ.ಗಳಿಗೆ ಸುಂದರವಾದ ವಾಚ್ ನಿಮ್ಮದಾಗಿ ಮಾಡಿಕೊಳ್ಳೋದು ಹೇಗೆ ಎಂದು ನೋಡೋಣ ಬನ್ನಿ.

ಪ್ರೊವಾಚ್ ಎಕ್ಸ್‌ಟ್ರೀಮ್ ಸ್ಮಾರ್ಟ್‌ವಾಚ್‌ ಅಮೆಜಾನ್‌ನಲ್ಲಿ ಜೂನ್‌ 16ರ ಮಧ್ಯಾಹ್ನದಿಂದ ಗ್ರಾಹಕರಿಗೆ ಸಿಗಲಿದೆ. ಪ್ರೊವಾಚ್ ಎಕ್ಸ್‌ಟ್ರೀಮ್ ಸ್ಮಾರ್ಟ್‌ವಾಚ್‌ ಮೇಲೆ ಕಂಪನಿ ವಿಶೇಷ ಆಫರ್ ಘೋಷಿಸಿದ್ದು, ಮೊದಲ 50 ಗ್ರಾಹಕರು 50 ಗ್ರಾಹಕರು ಪ್ರೊವಾಚ್ ಎಕ್ಸ್‌ಟ್ರೀಮ್‌ನ ಸಿಲಿಕಾನ್ ರೂಪಾಂತರವನ್ನು ಕೇವಲ 16 ರೂ.ಗೆ ಆರ್ಡರ್ ಮಾಡುವ ಅವಕಾಶ ನೀಡಲಾಗಿದೆ. ಆರ್ಡರ್ ಮಾಡುವ ಮೊದಲ 50 ಗ್ರಾಹಕರು ಈ ಗಡಿಯಾರವನ್ನು ಖರೀದಿಸಲು ಸಾಧ್ಯವಾಗುತ್ತದೆ. 16 ರೂಪಾಯಿಗೆ ವಾಚ್ ಪಡೆಯಲು ಇಚ್ಛಿಸುವ ಗ್ರಾಹಕರು ಚೆಕ್ಔಟ್ ಸಮಯದಲ್ಲಿ XTREME16 ಕೂಪನ್ ಕೋಡ್ ಬಳಸಬೇಕಾಗುತ್ತದೆ.

ಲಾವಾ ಕಂಪನಿ ಸಿಲಿಕೋನ್, ನೈಲಾನ್ ಮತ್ತು ಮೆಟಲ್ ಎಂಬ ಮೂರು ರೂಪಾಂತರಗಳಲ್ಲಿ ಪ್ರೊವಾಚ್ ಎಕ್ಸ್‌ಟ್ರೀಮ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಸಿಲಿಕೋನ್ ರೂಪಾಂತರದ ಬೆಲೆ ರೂ. 4,499 ಆಗಿದೆ. ಜೂನ್ 16ರಂದು ಗ್ರಾಹಕರು ಇದನ್ನು ಕೇವಲ 3,999 ರೂ.ಗೆ ಖರೀದಿಸಬಹುದು. ಅಂದ್ರೆ 1 ಸಾವಿರ ರೂ.ವರೆಗೆ ನಿಮಗೆ ಡಿಸ್ಕೌಂಟ್ ಸಿಗಲಿದೆ. ನೈಲಾನ್ ರೂಪಾಂತರದ ಮೇಲೆಯೂ ಡಿಸ್ಕೌಂಟ್ ನೀಡಲಾಗಿದೆ. 4,699 ರೂ.ಯ ನೈಲಾನ್ ಗ್ರಾಹಕರಿಗೆ 4,199 ರೂ.ಗೆ ಖರೀದಿಸಬಹುದು. ಮೆಟಲ್ ರೂಪಾಂತರದ ಬೆಲೆ ರೂ. 4,999 ಆಗಿದ್ದು, ಇದನ್ನು 4,499 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಇದಲ್ಲದೆ, ಗ್ರಾಹಕರು ಎಲ್ಲಾ ರೂಪಾಂತರಗಳ ಮೇಲೆ ರೂ. 1,000 ಬ್ಯಾಂಕ್ ಕೊಡುಗೆಯನ್ನು ಸಹ ಪಡೆಯುತ್ತಾರೆ.

 

 

 

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ