Trending News : 50 ಸಾವಿರಕ್ಕೆ ಮಾರಾಟವಾಗ್ತಿರೋ ಈ ಮೊಟ್ಟೆ ವಿಶೇಷವೇನು ಗೊತ್ತಾ?

By Suvarna NewsFirst Published Aug 11, 2022, 5:27 PM IST
Highlights

ಮೊಟ್ಟೆ ಬೆಲೆ ಏರ್ತಿದೆ. 10 – 15 ರೂಪಾಯಿ ಕೊಟ್ಟು ಜನರು ಮೊಟ್ಟೆ ಖರೀದಿ ಮಾಡ್ತಿದ್ದಾರೆ. ಆದ್ರೆ ಇಲ್ಲೊಂದು ಮೊಟ್ಟೆ ಬೆಲೆ ಗಗನದಲ್ಲಿದೆ. ಹಾಗೆ  ಈ ಮೊಟ್ಟೆ ಆಕಾರ ಕೂಡ ಎಲ್ಲರ ಗಮನ ಸೆಳೆದಿದೆ.
 

ಮೊಟ್ಟೆಗೆ ನೀವು ಎಷ್ಟು ಹಣ ನೀಡ್ತೀರಿ? ಒಂದು ಮೊಟ್ಟೆಗೆ 10 ರೂಪಾಯಿ, ಇಲ್ಲ 15 ರೂಪಾಯಿ. ಹೋಗ್ಲಿ ಕ್ವಾಲಿಟಿ ತುಂಬಾ ಚೆನ್ನಾಗಿದ್ರೆ 20 ರೂಪಾಯಿ ನೀಡ್ಬಹುದು. ಆದ್ರೆ ಒಂದು ಮೊಟ್ಟೆ ಬೆಲೆ 50 ಸಾವಿರ ರೂಪಾಯಿ ಅಂದ್ರೆ ನಂಬ್ತೀರಾ? ನಂಬ್ಲೇಬೇಕು ಸ್ವಾಮಿ. ವೆಸ್ಟ್ ಆಕ್ಸ್ ಫರ್ಡ್‌ಶೈರ್‌ ನಲ್ಲಿ ಒಂದು ಮೊಟ್ಟೆ ಬೆಲೆ ಬರೋಬ್ಬರಿ 50 ಸಾವಿರ ರೂಪಾಯಿ.

ಯಸ್, ನೀವು ಓದುತ್ತಿರೋದು ಸತ್ಯ. ಆನ್ಲೈನ್ (Online) ಮಾರಾಟ ಕಂಪನಿ ಇಬೇ (Ebay) ಯೆಯಲ್ಲಿ ಇದನ್ನು ಮಾರಾಟಕ್ಕಿಡಲಾಗಿದೆ. ಅದ್ರ ಬೆಲೆಯನ್ನು 500 ಪೌಂಡ್ (Pound) ಅಂದ್ರೆ ಭಾರತದ ರೂಪಾಯಿಯಲ್ಲಿ 48 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. 50 ಸಾವಿರಕ್ಕೆ ಈ ಒಂದು ಮೊಟ್ಟೆ ಮಾರಾಟವಾಗ್ಬಹುದು ಎಂದು ಅಂದಾಜಿಸಲಾಗ್ತಿದೆ. ಅಷ್ಟಕ್ಕೂ ಈ ಮೊಟ್ಟೆಯಲ್ಲಿರುವ ವಿಶೇಷವೇನು ಅನ್ನೋದನ್ನು ನಾವು ಹೇಳ್ತೇವೆ.

ಗೋಲಾಕಾರ (Round) ದ ಮೊಟ್ಟೆ (Egg) : ಆನ್ಲೈನ್ ನಲ್ಲಿ 50 ಸಾವಿರಕ್ಕೆ ಮಾರಾಟವಾಗ್ತಿರುವ ಈ ಮೊಟ್ಟೆ ವಿಶೇಷ ಇದು. ಇದ್ರ ಆಕಾರ ಗೋಲವಾಗಿದೆ. ಹಾಗಾಗಿಯೇ ಇದಕ್ಕೆ ಇಷ್ಟು ಬೆಲೆ ನಿಗದಿಪಡಿಸಲಾಗಿದೆ. ಅಪರೂಪದಲ್ಲಿ ಅಪರೂಪದ ಮೊಟ್ಟೆ ಇದಾಗಿದೆ.

ಮೊಟ್ಟೆ ಸಿಕ್ಕಿದ್ದು ಎಲ್ಲಿ ? : ವೆಸ್ಟ್ ಆಕ್ಸ್ ಫರ್ಡ್‌ಶೈರ್‌ನ ಮನೆಯಲ್ಲಿ ಕೋಳಿಯೊಂದು ಈ ವಿಶೇಷ ಮೊಟ್ಟೆಯಿಟ್ಟಿದೆ. ಶನಿವಾರ ಬೆಳಿಗ್ಗೆ ವೆಸ್ಟ್ ಆಕ್ಸ್ ಫರ್ಡ್‌ಶೈರ್‌ನಲ್ಲಿರುವ ತನ್ನ ಮನೆಯಲ್ಲಿ ವಿಚಿತ್ರ ದುಂಡಗಿನ ಮೊಟ್ಟೆಯನ್ನು ಕಂಡು ಅನ್ನಾಬೆಲ್ ಮುಲ್ಕಾಹಿ ಆಘಾತಕ್ಕೊಳಗಾದ್ರು. ಅನ್ನಾಬೆಲ್ ಕಳೆದ 20 ವರ್ಷಗಳಿಂದ ಅನೇಕ ಕೋಳಿಗಳನ್ನು ಸಾಕುತ್ತಿದ್ದಾರೆ. ಆದ್ರೆ ಇದೇ ಮೊದಲ ಬಾರಿ ಅವರಿಗೆ ದುಂಡಗಿನ ಕೋಳಿ ಮೊಟ್ಟೆ  ಸಿಕ್ಕಿದೆ. 

ಕೋಳಿ ಹೆಸರೇನು ಗೊತ್ತಾ ? : ದುಂಡಗಿನ ಮೊಟ್ಟೆ ಇಟ್ಟು ಸುದ್ದಿ ಮಾಡಿದ ಈ ಕೋಳಿ ಹೆಸರು ಟ್ವಿನ್ಸ್ಕಿ. ಅನ್ನಾಬೆಲ್ ಮಕ್ಕಳಿಬ್ಬರು ಕೋಳಿಗೆ ಈ ಹೆಸರು ಇಟ್ಟಿದ್ದಾರಂತೆ. ಅನ್ನಾಬೆಲ್ ಮಕ್ಕಳಿಗೆ ಕೋಳಿ ಸಾಕಣೆಯಲ್ಲಿ ಹೆಚ್ಚು ಆಸಕ್ತಿಯಿದೆಯಂತೆ. ಇದೇ ಕಾರಣಕ್ಕೆ ಅನ್ನಾಬೆಲ್ ಮನೆಯಲ್ಲಿಯೇ ಸಾಕಷ್ಟು ಕೋಳಿಗಳನ್ನು ಸಾಕ್ತಿದ್ದಾರೆ. 

ಇದನ್ನೂ ಓದಿ: Business Idea: ಬಹುಬೇಡಿಕೆಯ ಈ ಬ್ಯುಸಿನೆಸ್ ಮಾಡಿ, ತಿಂಗಳಿಗೆ 10 ಲಕ್ಷ ಗಳಿಸಿ

ಅಪರೂಪದಲ್ಲಿ ಅಪರೂಪ ಇದು : ದುಂಡಗಿನ ಮೊಟ್ಟೆ ಕಣ್ಣಿಗೆ ಬೀಳ್ತಿದ್ದಂತೆ ಅಚ್ಚರಿಗೊಂಡ ಅನ್ನಬೆಲ್ ಪಶ್ಚಿಮ ಆಕ್ಸ್ ಫರ್ಡ್‌ಶೈರ್‌ನಲ್ಲಿ ವಾಸಿಸುವ ತಮ್ಮ ಮಕ್ಕಳಿಗೆ ಈ ಮೊಟ್ಟೆಯನ್ನು ತೋರಿಸಿದ್ದಾರೆ. ಅನ್ನಾಬೆಲ್ ಈ ಮೊಟ್ಟೆಯ ಬಗ್ಗೆ ಗೂಗಲ್‌ನಲ್ಲಿ ಹುಡುಕಿದ್ದಾರೆ. ಆಗ  ಇದು ಅತ್ಯಂತ ಅಪರೂಪದ ಮೊಟ್ಟೆ ಎಂಬುದು ಕಂಡುಬಂದಿದೆ. ಏಕೆಂದರೆ ಅದರ ಆಕಾರವು ಅಂಡಾಕಾರವಾಗಿರದೆ ಸಂಪೂರ್ಣವಾಗಿ ದುಂಡಗಿದೆ ಎನ್ನುತ್ತಾರೆ ಅನ್ನಾಬೆಲ್.

ಗೂಗಲ್‌ನಲ್ಲಿ ಹುಡುಕಿದಾಗ ಅನ್ನಾಬೆಲ್‌ಗೆ ಮೊಟ್ಟೆ ಕೋಟಿಗಳಲ್ಲಿ ಒಂದು ಎಂದು ತಿಳಿದು ಬಂದಿದೆ. ಮೊಟ್ಟೆ ದುಂಡಗಿದೆ. ನಾನು ನಾಲ್ಕೈದು ಬಾರಿ ಅದನ್ನು ಪರೀಕ್ಷಿಸಿದ್ದೇನೆ ಎನ್ನುತ್ತಾರೆ ಅನ್ನಾಬೆಲ್. ಟೇಬಲ್ ಮೇಲಿಟ್ಟು ಅದರ ಫೋಟೋ ತೆಗೆದಿದ್ದಾರೆ ಅನ್ನಾಬೆಲ್. ಮೊಟ್ಟೆಯು ಪರಿಪೂರ್ಣವಾಗಿ ದುಂಡಾಗಿದೆ. ಅದನ್ನು ಮಾರ್ಬಲ್‌ನಂತೆ ಮೇಜಿನ ಮೇಲೆ ಉರುಳಿಸಬಹುದು ಎನ್ನುತ್ತಾರೆ ಅವರು.

ಇದನ್ನೂ ಓದಿ: ಲಕ್ ಬದಲಿಸುತ್ತೆ ಚಿನ್ನದಷ್ಟೆ ಬೆಲೆ ಬಾಳುವ ಈ ಮರ, Business Idea ಇಲ್ಲಿದೆ!

ಕೋಳಿಗಳು ಫ್ರೆಂಡ್ಲಿಯಾಗಿರುತ್ತವೆ ಎನ್ನುವ ಅನ್ನಬೆಲ್ ಟ್ವಿನ್ಸ್ಕಿಗೆ ಲ್ಯಾಬ್ರಡಾರ್ ಎಂದು ಅಡ್ಡ ಹೆಸರನ್ನು ಇಡಲಾಗಿದೆಯಂತೆ. ಅವಳು ನಮ್ಮನ್ನು ಹಿಂಬಾಲಿಸುತ್ತಾಳೆ. ಹಾಗಾಗಿ ಆಕೆಗೆ ಈ ಹೆಸರು ಎನ್ನುತ್ತಾಳೆ ಅನ್ನಾಬೆಲ್.

ಮೊಟ್ಟೆಯ ಬೆಲೆ ಎಷ್ಟು? : ಈಗಾಗಲೇ ಅನೇಕರು 480 ಪೌಂಡ್ ಗೆ ನೀಡುವಂತೆ ಕೇಳಿದ್ದಾರಂತೆ. ಆದ್ರೆ ಅನ್ನಾಬೆಲ್ 500 ಪೌಂಡ್ ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅನ್ನಾಬೆಲ್ ಮೊಟ್ಟೆ ತಿನ್ನುವುದಿಲ್ಲವಂತೆ. ಗೋಳಾಕಾರದ ಮೊಟ್ಟೆ 48 ಸಾವಿರಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾದ್ರೆ ಮತ್ತಷ್ಟು ಕೋಳಿ ಸಾಕ್ತೇನೆ ಎನ್ನುತ್ತಾರೆ ಅವರು.

click me!