TRAI Order to Telecom Companies : 28 ದಿನವಲ್ಲ 30 ದಿನಗಳ ವ್ಯಾಲಿಡಿಟಿ ನೀಡಿ!

By Suvarna NewsFirst Published Jan 28, 2022, 9:10 PM IST
Highlights

ಪ್ರಿಪೇಡ್ ಮೊಬೈಲ್ ಗ್ರಾಹಕರ ಪರವಾಗಿ ದೊಡ್ಡ ನಿರ್ಧಾರ
28 ದಿನವಲ್ಲ 30 ದಿನಗಳ ವ್ಯಾಲಿಡಿಟಿ ನೀಡಿ
ಗ್ರಾಹಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ

ನವದೆಹಲಿ (ಜ. 28): ಮೊಬೈಲ್ ರಿಚಾರ್ಜ್ (Mobile recharge ), ಇಂಟರ್ ನೆಟ್ ರಿಚಾರ್ಜ್ ಗಳ ದರ ಹೆಚ್ಚಳದಿಂದ ಬೇಸತ್ತಿದ್ದ ದೇಶದ ಜನತೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಂತಸದ ಸುದ್ದಿ ನೀಡಿದೆ. ಪ್ರತಿ ತಿಂಗಳು ಅದೇ ದಿನಾಂಕದಂದು ನವೀಕರಿಸಬಹುದಾದ ಅಂದರೆ, ಪೂರ್ತಿ 30 ದಿನಗಳ ರಿಚಾರ್ಜ್ ವ್ಯಾಲಿಡಿಟಿ (Recharge Validity ) ಇರುವ ಕನಿಷ್ಠ ಒಂದು ಯೋಜನೆಯನ್ನು ಟೆಲಿಕಾಂ ಕಂಪನಿಗಳು ನೀಡಬೇಕು ಎಂದು ಆದೇಶ ನೀಡಿದೆ. ಈಗ ಇರುವ 28 ದಿನಗಳ ವ್ಯಾಲಿಡಿಟಿಯನ್ನು ಕಂಪನಿಗಳು 30 ದಿನಗಳಿಗೆ ಏರಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ.

ಈ ಕ್ರಮವು ಒಂದು ವರ್ಷದಲ್ಲಿ ಗ್ರಾಹಕರು ಮಾಡಿದ ರೀಚಾರ್ಜ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಟೆಲಿಕಾಂ (Telecom )ಆಪರೇಟರ್‌ಗಳು ಪ್ರಿ-ಪೇಯ್ಡ್ ವಿಭಾಗದಲ್ಲಿ 28 ದಿನಗಳ ಮಾನ್ಯತೆಯೊಂದಿಗೆ ರೀಚಾರ್ಜ್ ಯೋಜನೆಗಳನ್ನು ಒದಗಿಸುತ್ತಾರೆ, ಇದು ಮಾಸಿಕ ಆಧಾರದ ಮೇಲೆ ರೀಚಾರ್ಜ್ ಮಾಡಲು ಬಯಸುವ ಗ್ರಾಹಕರಿಗೆ ವರ್ಷದಲ್ಲಿ 13 ರೀಚಾರ್ಜ್‌ಗಳಿಗೆ ಕಾರಣವಾಗುತ್ತದೆ. "ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರು ಕನಿಷ್ಠ ಒಂದು ಪ್ಲಾನ್ ವೋಚರ್, ಒಂದು ವಿಶೇಷ ಸುಂಕದ ವೋಚರ್ ಮತ್ತು ಮೂವತ್ತು ದಿನಗಳ ಮಾನ್ಯತೆಯನ್ನು ಹೊಂದಿರುವ ಒಂದು ಕಾಂಬೊ ವೋಚರ್ ಅನ್ನು ನೀಡಬೇಕು" ಎಂದು ಟ್ರಾಯ್ (Telecom Regulatory Authority of India) ಅಧಿಸೂಚನೆಯಲ್ಲಿ ತಿಳಿಸಿದೆ.

ಅಧಿಸೂಚನೆಯು ಮೊಬೈಲ್ ಫೋನ್ ಸೇವಾ ಪೂರೈಕೆದಾರರು ಒಂದು ಪ್ಲಾನ್ ವೋಚರ್, ಒಂದು ವಿಶೇಷ ಸುಂಕದ ವೋಚರ್ ಮತ್ತು ಒಂದು ಕಾಂಬೊ ವೋಚರ್ ಅನ್ನು ಒದಗಿಸುವುದನ್ನು ಕಡ್ಡಾಯ ಮಾಡುವುದುಮಾತ್ರವಲ್ಲದೆ, ಅದು ಪ್ರತಿ ತಿಂಗಳ ಅದೇ ದಿನದಂದು ನವೀಕರಿಸಲ್ಪಡುತ್ತದೆ. ಅದಲ್ಲದೆ, ನಿಯಮಗಳ ಅಧಿಸೂಚನೆ (Notification)ಪ್ರಕಟವಾದ 60 ದಿನಗಳ ಒಳಗಾಗಿ ಕಡ್ಡಾಯವಾಗಿ ಈ ಆದೇಶವನ್ನು ದೇಶದ ಟೆಲಿಕಾಂ ಕಂಪನಿಗಳು ಪಾಲಿಸಬೇಕು ಎಂದು ತಿಳಿಸಲಾಗಿದೆ.
 

Press Release No. 07/2022 regarding Telecom Tariff (66th Amendment) Order, 2022’https://t.co/M67neUCnkX

— TRAI (@TRAI)


ಇಲ್ಲಿಯವರೆಗೆ ಟೆಲಿಕಾಂ ಕಂಪನಿಗಳು 28 ಮತ್ತು 24 ದಿನಗಳ ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ. ಟೆಲಿಕಾಂ ಕಂಪನಿಗಳು ಒಂದು ತಿಂಗಳು ಪೂರ್ತಿ ರೀಚಾರ್ಜ್ ನೀಡುವುದಿಲ್ಲ ಎಂಬುದು ಬಳಕೆದಾರರ ದೂರಾಗಿತ್ತು. ಇದರಿಂದಾಗಿ ಬಳಕೆದಾರರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ. ಅಲ್ಲದೆ, ಹೆಚ್ಚು ಹಣವೂ ಖರ್ಚಾಗುತ್ತದೆ. ಮಾಸಿಕ ಯೋಜನೆಗಳಿಗಾಗಿ ಅವರು ವರ್ಷದಲ್ಲಿ 13 ಬಾರಿ ರಿಚಾರ್ಜ್ ಮಾಡುವುದು ಅನ್ಯಾಯ. ಇದರಿಂದ ತಾವು ಮೋಸಹೋಗುತ್ತಿರುವ ಭಾವನೆ ಉಂಟಾಗಿದೆ ಎಂದು ಗ್ರಾಹಕರು ಟ್ರಾಯ್ ಗೆ (TRAI) ನೀಡಿರುವ ದೂರಿನಲ್ಲಿ ತಿಳಿಸಿದ್ದರು.

5G Network ಅನುಕೂಲಕ್ಕಿಂತ ಅಪಾಯವೇ ಹೆಚ್ಚು, ಮನುಷ್ಯ ಸಂಕುಲಕ್ಕೆ ಕಂಟಕ!
ಟ್ರಾಯ್ ಪ್ರಕಾರ, ಹೊಸ ಬದಲಾವಣೆಗಳು ಬಳಕೆದಾರರಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ ಮತ್ತು ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಸರಿಯಾದ ಮಾನ್ಯತೆಯೊಂದಿಗೆ ಹೆಚ್ಚಿನ ಯೋಜನೆಗಳನ್ನು ಪಡೆಯಲಿದ್ದಾರೆ ಎಂದು ಹೇಳಿದೆ.

ಮತ್ತೊಂದು ಸುತ್ತಿನ ದರ ಹೆಚ್ಚಳದ ಸುಳಿವು ನೀಡಿದ Vodafone Idea CEO ರವೀಂದರ್ ಟಕ್ಕರ್!
ಟೆಲಿಕಾಂ ಕಂಪನಿಗಳ ವಿರೋಧ: ಮಾಸಿಕ ಯೋಜನೆಯ ಒಂದು ಪ್ಲ್ಯಾನ್ ಕನಿಷ್ಠ 30 ದಿನಗಳ ವ್ಯಾಲಿಡಿಟಿ ಇರಬೇಕು ಎನ್ನುವ ಟ್ರಾಯ್ ನಿಯಮಕ್ಕೆ ಟೆಲಿಕಾಂ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಇರುವ 28, 54 ಹಾಗೂ 84 ದಿನಗಳ ವ್ಯಾಲಿಡಿಟಿ ಪ್ಲ್ಯಾನ್ ಗಳಲ್ಲಿ ಬದಲಾವಣೆ ಮಾಡುವುದು ಬಿಲ್‌ ಸೈಕಲ್ ಅಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟು ಮಾಡಲಿದೆ ಎಂದು ಹೇಳಿದೆ. ಪೋಸ್ಟ್ ಪೇಯ್ಡ್ ಪ್ಲ್ಯಾನ್ ಗಳಲ್ಲಿ ಈಗಾಗಲೇ ಇಂಥದ್ದೊಂದು ಯೋಜನೆಗಳಿವೆ. ಆದರೆ, ಪ್ರಿಪೇಡ್ ನಲ್ಲಿ ಪ್ರತಿ ತಿಂಗಳು ಅದೇ ದಿನಕ್ಕೆ ನವೀಕರಣ ಮಾಡಬಹುದಾದ ಪ್ಲ್ಯಾನ್ ನೀಡುವುದು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಟೆಲಿಕಾಂ ಕಂಪನಿಗಳು ತಿಳಿಸಿವೆ.

click me!