ಬೆಂಗಳೂರು(ಜ.28): ಫ್ಲಿಪ್ ಕಾರ್ಟ್ ಸಮರ್ಥ್‌ನ ಮೊಟ್ಟ ಮೊದಲ `ಗಣರಾಜ್ಯೋತ್ಸವ ದಿನದ(Republic Day) `ಕ್ರಾಫ್ಟೆಡ್ ಬೈ ಭಾರತ್’ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮೂಲಕ MSME,ಕುಶಲಕರ್ಮಿಗಳು, ನೇಕಾರರು ಸೇರಿದಂತೆ ಸ್ಥಳೀಯ ವ್ಯವಹಾರಗಳನ್ನು ಸಬಲೀಕರಣಗೊಳಿಸುವಲ್ಲಿ ಇ-ಕಾಮರ್ಸ್(E commerce) ವಹಿಸುವ ಪಾತ್ರವನ್ನು ಪುನರುಚ್ಚರಿಸಿದೆ. ದೇಶಾದ್ಯಂತ ಇರುವ ಸಾಂಪ್ರದಾಯಿಕ ಕರಕುಶಲ ಮತ್ತು ಕೈಮಗ್ಗಗಳ ಉತ್ಪನ್ನಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವ ಗುರಿಯೊಂದಿಗೆ ಈ ಕಾರ್ಯಕ್ರಮವನ್ನು ಭಾರತದ ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಆಯೋಜಿಸಲಾಗಿತ್ತು.
ನಾನ್-ಸೇಲ್ ದಿನಗಳಿಗೆ ಹೋಲಿಸಿದರೆ ಈ ಜನವರಿ 26 ರ ವಿಶೇಷ ಸಂದರ್ಭದಲ್ಲಿ ಕರಕುಶಲಕರ್ಮಿಗಳು ಮತ್ತು ನೇಕಾರರಿಂದ(handicraft and handloom) 1.4 ಪಟ್ಟಿನಷ್ಟು ಹೆಚ್ಚು ಪಾಲ್ಗೊಳ್ಳುವಿಕೆ ಇತ್ತು. ಇದರಲ್ಲಿ 25+ ಸರ್ಕಾರಿ ಮತ್ತು ಎನ್ ಜಿಒಗಳ ಬ್ರ್ಯಾಂಡ್ ಗಳು ಕೈಜೋಡಿಸಿದ್ದವು. ಹೋಂ ಫರ್ನಿಶಿಂಗ್, ಹೋಂ ಡೆಕೋರ್ ಮತ್ತು ಗ್ರೂಮಿಂಗ್ ಉತ್ಪನ್ನಗಳು ಹೆಚ್ಚು ಮಾರಾಟವಾದವು. ಇದೇ ವೇಳೆ, ದೊಡ್ಡ ಫರ್ನಿಚರ್, ಹೋಂ ಫಿನಿಶಿಂಗ್ ಮತ್ತು ಹೋಂ ಡೆಕೋರ್ ಗಳಿಂದ ಹೆಚ್ಚಿನ ಆದಾಯ ಬಂದಿದೆ. ದೇಶಾದ್ಯಂತ ಗ್ರಾಹಕರು ಫ್ಲಿಪ್ ಕಾರ್ಟ್ ಸಮರ್ಥ್ ನಲ್ಲಿನ ಉತ್ಪನ್ನಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿದರು. ವಿಶೇಷವಾಗಿ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ, ಹೊಸದೆಹಲಿ, ಪಾಟ್ನಾ ಮತ್ತು ಪುಣೆ ಈ `ಕ್ರಾಫ್ಟೆಡ್ ಬೈ ಭಾರತ್’ ಉತ್ಪನ್ನಗಳ ಮಾರಾಟಮೇಳವನ್ನು ಆಯೋಜಿಸಲಾಗಿತ್ತು. ಈ ಪೈಕಿ ಶೇ.60 ರಷ್ಟು ಉತ್ಪನ್ನಗಳಿಗೆ ಶ್ರೇಣಿ 2 ಮತ್ತು 3 ನಗರಗಳಲ್ಲಿ ಬೇಡಿಕೆ ಬಂದಿತ್ತು.
undefined
Flipkart Grand Gadget Days Sale: ಸ್ಮಾರ್ಟ್‌ವಾಚ್, ಇಯರ್‌ಫೋನ್, ಕ್ಯಾಮೆರಾಗಳ ಮೇಲೆ 80%ವರೆಗೆ ರಿಯಾಯಿತಿ!
ಇದಲ್ಲದೇ, ಮಾರಾಟ ಮೇಳದ ಪ್ರಮುಖಾಂಶಗಳು ಇಲ್ಲಿವೆ:
· ಒಟ್ಟಾರೆ ಗ್ರಾಹಕರಲ್ಲಿ ಶೇ.49 ರಷ್ಟು ಮಂದಿ ಫ್ಲಿಪ್ ಕಾರ್ಟ್ ಪ್ಲಸ್ ಬಳಕೆದಾರರು; ಈ ಫ್ಲಿಪ್ ಕಾರ್ಟ್ ಪ್ಲಸ್ ಫ್ಲಿಪ್ ಕಾರ್ಟ್ ನ ಲಾಯಲ್ಟಿ ಕಾರ್ಯಕ್ರಮವಾಗಿದ್ದು, ಇದರ ಸದಸ್ಯರು ಪ್ರತಿಯೊಂದು ಖರೀದಿ ಮೇಲೆ ರಿವಾರ್ಡ್ ಗಳು ಮತ್ತು ಇತರೆ ಪ್ರಯೋಜನಗಳನ್ನು ಪಡೆಯುತ್ತಾರೆ.
· ಸಾಮಾನ್ಯ ಮಾರಾಟಕ್ಕೆ ಹೋಲಿಸಿದರೆ ಯೂನಿಟ್ ಗಳು ಮತ್ತು ಆದಾಯದ ಲೆಕ್ಕದಲ್ಲಿ 2 ಪಟ್ಟು ಹೆಚ್ಚಳವಾಗಿದೆ.
· ಈ ಮಾರಾಟದ ಸಂದರ್ಭದಲ್ಲಿ ಪ್ರತಿ ನಿಮಿಷಕ್ಕೆ 8 ಆರ್ಡರ್ ಗಳು ಬಂದಿವೆ. ವಿಶೇಷವಾಗಿ ರಾಜಸ್ಥಾನದ ಖಾದಿ ತಯಾರಕರು, ಕರಕುಶಲ ಉತ್ಪನ್ನಗಳು, ಪಶ್ಚಿಮ ಬಂಗಾಳದ ಜಾಮ್ದಾನಿ ಸೀರೆಗಳು ಮತ್ತು ಜೈಪುರದ ಕಾಟನ್ ಕುರ್ತಾಸ್ ಪ್ರಮುಖವಾಗಿ ಮಾರಾಟವಾದ ಉತ್ಪನ್ನಗಳಾಗಿವೆ.
· ಭಾರತದ ಪೀಠೋಪಕರಣಗಳ ಕ್ಲಸ್ಟರ್ ನ ಉತ್ಪನ್ನಗಳು ಅತಿ ಹೆಚ್ಚು ಮಾರಾಟವಾಗಿವೆ. ಇವುಗಳಲ್ಲಿ ಹೆಚ್ಚಿನವು ರಾಜಸ್ಥಾನದ ಉತ್ಪನ್ನಗಳಾಗಿವೆ. ಪಿಯೂಷ್ ಹ್ಯಾಂಡಿಕ್ರಾಫ್ಟ್ ಮತ್ತು ಕೆಂಡಲ್ ವುಡ್ ಫರ್ನಿಚರ್ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದಲ್ಲದೇ, ವುಡ್ ಸೋಫಾ/ಬೆಡ್ ಮತ್ತು ಡೈನಿಂಗ್ ಟೇಬಲ್ ಸೆಟ್ ಗಳಿಗೆ ಬೇಡಿಕೆ ಹೆಚ್ಚಾಗಿತ್ತು.
· ಈ ಒಂದು ದಿನದ ಕಾರ್ಯಕ್ರಮದಲ್ಲಿ ಫ್ಲಿಪ್ ಕಾರ್ಟ್ ಸಮರ್ಥ್ ನ ಶೇ.11 ರಷ್ಟು ಮಾರಾಟಗಾರರು ಲಕ್ಷಾಧಿಪತಿಗಳಾಗಿರುವುದು ವಿಶೇಷವಾಗಿದೆ.
ಕ್ಯಾಮೆರಾ ಕೇಂದ್ರಿತ Oppo Reno 7 Pro, Reno 7 ಭಾರತದಲ್ಲಿ ಫೆ.4 ರಂದು ಬಿಡುಗಡೆ ಸಾಧ್ಯತೆ!
ಗಣರಾಜ್ಯೋತ್ಸವ ದಿನದ `ಕ್ರಾಫ್ಟೆಡ್ ಬೈ ಭಾರತ್’ ಕಾರ್ಯಕ್ರಮವು ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲಕರ್ಮಿಗಳಿಗೆ ದೇಶಾದ್ಯಂತ 400 ಮಿಲಿಯನ್ ಗ್ರಾಹಕರನ್ನು ಒದಗಿಸಿಕೊಟ್ಟಿದೆ. ಇದರ ಮೂಲಕ ಶ್ರೀಮಂತ ಸಂಸ್ಕೃತಿ ಪರಂಪರೆಯನ್ನು ಉತ್ತೇಜಿಸಲು ಮತ್ತು ಅವರ ಜೀವನೋಪಾಯವನ್ನು ಬೆಂಬಲಿಸಲು ಸಾಧ್ಯವಾಯಿತು.
ಮೌಲ್ಯವನ್ನು ರಚನೆ ಮಾಡುವುದು ಮತ್ತು ನಮ್ಮ ಪಾಲುದಾರರನ್ನು ಬೆಂಬಲಿಸುವುದು, ವಿಶೇಷವಾಗಿ ಎಂಎಸ್ಎಂಇಗಳು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ನಾವು ಫ್ಲಿಪ್ ಕಾರ್ಟ್ ನಲ್ಲಿ ಏನು ಮಾಡುತ್ತೇವೆ ಎಂಬುದನ್ನು ಅರ್ಥೈಸುವುದು ಪ್ರಮುಖ ಅಂಶವಾಗಿದೆ. ದೇಶಾದ್ಯಂತ ಸ್ಥಳೀಯ ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲಕರ್ಮಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ `ಕ್ರಾಫ್ಟೆಡ್ ಬೈ ಭಾರತ್’ ಅನ್ನು ಆಯೋಜನೆ ಮಾಡಿರುವುದು ಮತ್ತೊಂದು ಹೆಜ್ಜೆಯಾಗಿದೆ. ದೇಶಾದ್ಯಂತ ಫ್ಲಿಪ್ ಕಾರ್ಟ್ ಸಮರ್ಥ್ ನ ಮಾರಾಟಗಾರರ ಪಾಲ್ಗೊಳ್ಳುವಿಕೆಯೊಂದಿಗೆ ಈ ಕಾರ್ಯಕ್ರಮಕ್ಕೆ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಈ ಮಾರಾಟದಲ್ಲಿನ ಗಮನಾರ್ಹವಾದ ಹೆಚ್ಚಳ ಮತ್ತು ಲಕ್ಷಾಂತರ ಗ್ರಾಹಕರಿಗೆ ಅವರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರಚುರಪಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ಅದರಲ್ಲಿ ಯಶಸ್ಸು ಸಾಧಿಸಿದ್ದೇವೆ. ನಮ್ಮ ಮಾರಾಟಗಾರರ ಬೆಳವಣಿಗೆಯನ್ನು ಉತ್ತೇಜಿಸುತ್ತಾ ಬಂದಿರುವ ನಮ್ಮ ಬದ್ಧತೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ಕುಶಲಕರ್ಮಿಗಳು, ನೇಕಾರರು ಮತ್ತು ಎಂಎಸ್ಎಂಇಗಳ ಪರಿಸರ ವ್ಯವಸ್ಥೆಗೆ ಮತ್ತಷ್ಟು ಅನುಕೂಲವಾಗುವಂತೆ ಮಾಡುವ ನಿಟ್ಟಿನಲ್ಲಿ ನಾವು ಇಂತಹ ಇನ್ನೂ ಅನೇಕ ಅವಕಾಶಗಳನ್ನು ಒದಗಿಸಲಿದ್ದೇವೆ ಎಂದು ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಹೇಳಿದ್ದಾರೆ.
ಫ್ಲಿಪ್ ಕಾರ್ಟ್ ಸಮರ್ಥ್ ಅನ್ನು 2019 ರಲ್ಲಿ ಆರಂಭಿಸಲಾಯಿತು. ತಂತ್ರಜ್ಞಾನದ ಮೂಲಕ ಇ-ಕಾಮರ್ಸ್ ಅನ್ನು ಪ್ರಜಾಪ್ರಭುತ್ವಗೊಳಿಸುವ ದಿಸೆಯಲ್ಲಿ ಮತ್ತು ಸೇವೆಗಳು ಕಡಿಮೆ ಇರುವ ದೇಶೀಯ ಸಮುದಾಯಗಳಿಗೆ ಸುಸ್ಥಿರವಾದ ಮತ್ತು ಅಂತರ್ಗತವಾದ ವೇದಿಕೆಯನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಈ ಫ್ಲಿಪ್ ಕಾರ್ಟ್ ಸಮರ್ಥ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮಹಿಳಾ ನೇತೃತ್ವದ ಉದ್ಯಮಗಳು ಮತ್ತು ವಿಕಲಾಂಗರ ಮೇಲೆ ವಿಶೇಷ ಗಮನವನ್ನು ನೀಡುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ ಫ್ಲಿಪ್ ಕಾರ್ಟ್ ಹಲವಾರು ಸರ್ಕಾರಿ ಸಂಸ್ಥೆಗಳು, ಜೀವನೋಪಾಯ ಮಿಷನ್ ಗಳು ಮತ್ತು ಎನ್ ಜಿಒ ಪಾಲುದಾರರೊಂದಿಗೆ ದೇಶಾದ್ಯಂತ ಇರುವ ಗ್ರಾಮೀಣ ಉದ್ಯಮಿಗಳನ್ನು ಆನ್ ಬೋರ್ಡ್ ಗೆ ತರುವ ಕೆಲಸ ಮಾಡುತ್ತಿದೆ. ಪ್ರಸ್ತುತ ಫ್ಲಿಪ್ ಕಾರ್ಟ್ ಸಮರ್ಥ್ ಡಿಜಿಟಲ್ ಕಾಮರ್ಸ್ ಅನ್ನು ಅನುಷ್ಠಾನಕ್ಕೆ ತರುವ ಮೂಲಕ ಮಿಲಿಯನ್ ಗಿಂತಲೂ ಹೆಚ್ಚು ಜೀವನೋಪಾಯಗಳ ಮೇಲೆ ಪರಿಣಾಮ ಬೀರುತ್ತದೆ.