ಬೆಳಗ್ಗೆ ಕೆಲಸ ರಾತ್ರಿ ಅವಲಕ್ಕಿ ವ್ಯಾಪಾರ ಮಾಡ್ತಾ ಸಕ್ಸಸ್ ಆದ ಸ್ನೇಹಿತರು

Published : Feb 21, 2024, 05:25 PM IST
ಬೆಳಗ್ಗೆ ಕೆಲಸ ರಾತ್ರಿ ಅವಲಕ್ಕಿ ವ್ಯಾಪಾರ ಮಾಡ್ತಾ ಸಕ್ಸಸ್ ಆದ ಸ್ನೇಹಿತರು

ಸಾರಾಂಶ

ತಿಂಗಳಿಗೆ ಸರಿಯಾಗಿ ಸಂಬಳ ಸಿಗುತ್ತೆ ಎನ್ನುವ ಕಾರಣಕ್ಕೆ ಅನೇಕರು ಜಾಬ್ ಇಷ್ಟಪಡ್ತಾರೆ. ಆದ್ರೆ ತಿಂಗಳು ತಿಂಗಳು ಸಂಬಳ ಸಿಗದೆ ಹೋದಾಗ ಪರಿಸ್ಥಿತಿ ಹದಗೆಡುತ್ತದೆ. ಇಂಥ ಸ್ಥಿತಿಯಲ್ಲೇ ಇಬ್ಬರು ಸ್ನೇಹಿತರು ಧೈರ್ಯಮಾಡಿ ಶುರು ಮಾಡಿದ ವ್ಯಾಪಾರ ಈಗ ದೇಶದಾದ್ಯಂತ ಹರಡುತ್ತಿದೆ.   

ಪೊಹೆವಾಲಾ (Pohewala) ವನ್ನು ಇಬ್ಬರು ಸ್ನೇಹಿತರು ಶುರು ಮಾಡಿದ್ದಾರೆ. ಚಾಹುಲ್ (Chahul)  ಬಲ್ಪಾಂಡೆ ಮತ್ತು ಪವನ್ ವಾದಿಭಾಸ್ಮೆ ಇದರ ಸಂಸ್ಥಾಪಕರು. ಚಾಹುಲ್ ಇಂಜಿನಿಯರ್ ಮುಗಿಸಿದ್ರೆ ಪವನ್ ಎಂಬಿಎ ಪದವಿ ಪಡೆದಿದ್ದಾರೆ. ಇಬ್ಬರು ಆರಂಭದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದರು. ಆದ್ರೆ ಆ ಕಂಪನಿಯಲ್ಲಿ ಕೆಲಸಕ್ಕೆ ತಕ್ಕಂತೆ ಸಂಬಳ ಸಿಗ್ತಿರಲಿಲ್ಲ. ಪ್ರತಿ ತಿಂಗಳ ಸಂಬಳ ಸಿಗಲು ಲೇಟ್ ಆಗ್ತಿತ್ತು. ಇದ್ರಿಂದ ಇಬ್ಬರೂ ಸಾಕಷ್ಟು ಸಮಸ್ಯೆ ಎದುರಿಸಬೇಕಾಯ್ತು. ಈ ಸಂದರ್ಭದಲ್ಲಿ ತಮ್ಮದೆ ವ್ಯಾಪಾರ ಶುರು ಮಾಡುವ ಬಗ್ಗೆ ಅವರು ಆಲೋಚನೆ ಮಾಡಿದ್ರು. ಬರೀ ಆಲೋಚನೆ ಮಾಡ್ತಾ ಕಾಲಹರಣ ಮಾಡಲಿಲ್ಲ. ಫೀಲ್ಡಿಗೆ ಇಳಿದ್ರು. ಅವರು ಬೆಳಿಗ್ಗೆ ಕಚೇರಿಯಲ್ಲಿ ಕೆಲಸ ಮಾಡಿದ್ರೆ ಸಂಜೆ ಅವಲಕ್ಕಿ ಮಾರಾಟ ಶುರು ಮಾಡಿದ್ರು. 

ಇಬ್ಬರೂ ಮಹಾರಾಷ್ಟ್ರದ ನಾಗ್ಪುರದಲ್ಲಿ ಸಣ್ಣ ಅಂಗಡಿಯಲ್ಲಿ ಅವಲಕ್ಕಿ ಮಾರಾಟ ಶುರು ಮಾಡಿದ್ರು. ಪಾರ್ಕಿಂಗ್ ಮತ್ತು ಫುಡ್ ಸ್ಟಾರ್ಟ್‌ಅಪ್ ಆರಂಭಿಸುವ ಬಗ್ಗೆ ಪವನ್ ಹಾಗೂ ಚಾಹುಲ್ ಆಲೋಚನೆ ಮಾಡಿದ್ದರು. ಆದ್ರೆ ಇದ್ರ ಬಗ್ಗೆ ಸಂಶೋಧನೆ ಮಾಡಿದಾಗ ಆಹಾರ ಉದ್ಯಮಕ್ಕೆ ಉಜ್ವಲ ಭವಿಷ್ಯವಿದೆ ಎಂಬುದು ಅವರ ಅರಿವಿಗೆ ಬಂದಿತ್ತು. ಇದೇ ಕಾರಣಕ್ಕೆ ಮೊದಲು ಪ್ರಯೋಗ ಶುರು ಮಾಡಿದ್ದರು. ಸಣ್ಣದಾಗಿ ಶುರುವಾದ ಅವರ ಅಂಗಡಿಯಲ್ಲಿ ಅವರು ಅನೇಕ ರೀತಿಯ ಪೋಹ ಮಾರಾಟ ಮಾಡ್ತಿದ್ದರು. ಅದ್ರ ಜೊತೆಗೆ ಜನರು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಯತ್ನ ಮಾಡಿದ್ದರು. 

ಸಾಲದ ಸೀರೆಯುಟ್ಟ ಬೆಗ್ಗರ್‌ಸ್ತಾನ: ಪಾಕಿಸ್ತಾನದಲ್ಲಿ ಆರ್ಥಿಕತೆಯ ಅಂತಿಮ ಯಾತ್ರೆ..!

ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಪೋಹ ಮಾರಾಟ ಮಾಡ್ತಿದ್ದರು ಪವನ್ ಹಾಗೂ ಚಾಹುಲ್. ಕೆಲವೇ ದಿನಗಳಲ್ಲಿ ಗ್ರಾಹಕರಿಂದ ಅವರಿಗೆ ಉತ್ತಮ ಪ್ರತಿಕ್ರಿಯೆ ಸಿಗಲು ಶುರುವಾಯ್ತು. ಆಗ ಪವನ್ ಹಾಗೂ ಚಾಹುಲ್ ದೊಡ್ಡದಾಗಿ ಏನಾದ್ರೂ ಮಾಡಬೇಕೆಂಬ ಆಲೋಚನೆ ಮಾಡಿದ್ರು. 2018ರಲ್ಲಿ ಕೆಲಸ ಬಿಟ್ಟ ಇಬ್ಬರು ಸಂಪೂರ್ಣ ಪೋಹಾ ಮಾರಾಟಕ್ಕೆ ಇಳಿದ್ರು. ತಮ್ಮ ಬ್ರ್ಯಾಂಡ್ ಗೆ ಪೊಹೆವಾಲಾ ಎಂದು ನಾಮಕರಣ ಮಾಡಿದರು.

ನಾಗಪುರದಲ್ಲಿ ಅವರ ಮೊದಲ ಪೊಹೆವಾಲಾ ಶುರುವಾಯ್ತು. ಪೋಹಾದಲ್ಲಿ ಹೊಸ ಹೊಸ ರುಚಿಯನ್ನು ಗ್ರಾಹಕರಿಗೆ ಪರಿಚಯ ಮಾಡಿದವರು ಇವರು. ಇವರ ಪೊಹೆವಾಲಾದಲ್ಲಿ 13 ವಿಧದ ಪೋಹಾ ಸಿಗುತ್ತದೆ. ಪನೀರ್ ಪೋಹಾ, ಇಂದೋರಿ ಪೋಹಾ, ನಾಗ್ಪುರ ಸ್ಪೆಷಲ್ ತಾರಿ ಪೋಹಾ, ಚಿವ್ಡಾ ಪೋಹಾ, ಮಿಶ್ರ ಪೋಹಾ ಸೇರಿದಂತೆ ಅನೇಕ ವಿಧದ ಪೋಹಾ ಇಲ್ಲಿ ಸಿಗ್ತಿದೆ. 

ಪೊಹೆವಾಲಾ ಶುರುವಾಗಿ ಆರು ವರ್ಷ ಕಳೆದಿದೆ. ಈಗಾಗಲೇ ಇದು ದೇಶದ ಅನೇಕ ಕಡೆ ಪ್ರಸಿದ್ಧಿ ಪಡೆದಿದೆ. ಚಾಹುಲ್ ಮತ್ತು ಪವನ್, 15 ನಗರಗಳಲ್ಲಿ ಮಳಿಗೆಗಳನ್ನು ಹೊಂದಿದ್ದಾರೆ. ಪೊಹೆವಾಲಾದಿಂದ ಇವರು ಪ್ರತಿ ತಿಂಗಳು 60 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ಏನಿದು ನಿರಾಮಯ ಆರೋಗ್ಯ ವಿಮಾ ಯೋಜನೆ? ಯಾರು ಇದರ ಪ್ರಯೋಜನ ಪಡೆಯಬಹುದು?

ಕೆಲಸದಲ್ಲಿ ಸಣ್ಣ ಕೆಲಸ, ದೊಡ್ಡ ಕೆಲಸ ಎನ್ನುವುದಿಲ್ಲ. ನವೀನ ಸೂತ್ರ, ಗುಣಮಟ್ಟ ಹಾಗೂ ಮಾರುಕಟ್ಟೆ ತಂತ್ರಗಳು ಇಲ್ಲಿ ಮುಖ್ಯ ಎನ್ನುತ್ತಾರೆ ಇವರು. ಆರಂಭದಲ್ಲಿಯೇ ವೆಬ್ಸೈಟ್ ತೆರೆದಿದ್ದ ಇವರು, ಈಗ ಆನ್ಲೈನ್ ಮೂಲಕವೂ ಪೋಹಾ ಮಾರಾಟ ಮಾಡುತ್ತಾರೆ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!