Semicon India 2022: ಏ. 29ರಿಂದ ಬೆಂಗ್ಳೂರಲ್ಲಿ ಸೆಮಿಕಾನ್‌ ಇಂಡಿಯಾ: ಮೋದಿ ಉದ್ಘಾಟನೆ

Published : Apr 24, 2022, 07:47 AM IST
Semicon India 2022: ಏ. 29ರಿಂದ ಬೆಂಗ್ಳೂರಲ್ಲಿ ಸೆಮಿಕಾನ್‌ ಇಂಡಿಯಾ: ಮೋದಿ ಉದ್ಘಾಟನೆ

ಸಾರಾಂಶ

*   ಸೆಮಿಕಂಡರ್‌ ಕ್ಷೇತ್ರದ ಜಾಗತಿಕ ಕಂಪನಿಗಳು ಭಾಗಿ *  ಮುಂದಿನ 2 ದಶಕದಲ್ಲಿ ಸೆಮಿ ಕಂಡಕ್ಟರ್‌ ಉತ್ಪಾದನೆಗೆ ಒತ್ತು *  ಕರ್ನಾಟಕ ಸೇರಿದಂತೆ ಭಾರತದ ಅಭಿವೃದ್ಧಿಗೆ ಈ ಕಾರ್ಯಾಗಾರ ಸಹಾಯಕ  

ನವದೆಹಲಿ(ಏ.24):  ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಭವಿಷ್ಯದಲ್ಲಿ ಭಾರತ ವಿಶ್ವ ನಾಯಕನ ಪಟ್ಟ ಅಲಂಕರಿಸಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ದಶಕಗಳನ್ನು ದೂರದೃಷ್ಟಿಯಲ್ಲಿ ಇಟ್ಟುಕೊಂಡು ಸೆಮಿ ಕಂಡಕ್ಟರ್‌ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ತಿಳಿಸಿದ್ದಾರೆ.

ಶನಿವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಂದು ‘ವೈಟುಕೆ’ ಆರಂಭವಾಗಲಿದೆ ಅಂತಲೇ ಹೇಳಬಹುದು. ಸೆಮಿಕಂಡಕ್ಟರ್‌ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ (ಆರ್‌ ಅಂಡ್‌ ಡಿ) ದೇಶದಲ್ಲೇ ಆಗುವುದರಿಂದ ಭವಿಷ್ಯದ ಭಾರತ (India) ಬದಲಾಗಲು ಸಹಾಯಕವಾಗಲಿದೆ ಎಂದರು.

ನವ ಭಾರತದಲ್ಲಿ ಶ್ರಮಿಕರಿಗೆ ಹೆಚ್ಚು ಅವಕಾಶ: ಆರ್‌ಸಿ

ಇದೇ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ(Bengaluru)n ಸೆಮಿಕಾನ್‌ ಇಂಡಿಯಾ 2022(Semicon India 2022) ಆಯೋಜಿಸಲಾಗುತ್ತಿದೆ. ಏಪ್ರಿಲ್‌ 29ರಿಂದ ಮೂರು ದಿನಗಳ ಬೃಹತ್‌ ಕಾರ್ಯಾಗಾರದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಗ್ಲೋಬಲ್‌ ಲೀಡರ್‌ ಎನ್ನಿಸಿಕೊಂಡಿರುವ ವಿದೇಶಿ ಕಂಪನಿಗಳು, ಪರಿಣತರು, ತಜ್ಞರು, ಕೇಂದ್ರ ಸರ್ಕಾರ ಭಾಗವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರು(Narendra Modi) ಈ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavara Bommai), ಸಚಿವರಾದ ಡಾ.ಅಶ್ವತ್ಥ್‌ ನಾರಾಯಣ್‌, ಮುರುಗೇಶ್‌ ನಿರಾಣಿ, ಕೇಂದ್ರ ಸಚಿವ ಅಶ್ವಿನ್‌ ವೈಷ್ಣವ್‌ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ರಾಜಕೀಯ ದೂರದೃಷ್ಟಿ ಕೊರತೆಯಿಂದೆ ಈ ಕ್ಷೇತ್ರಕ್ಕೆ ಸರಿಯಾಗಿ ಆದ್ಯತೆ ಸಿಕ್ಕಿರಲಿಲ್ಲ. ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಡಿಜಿಟಲ್‌ ಇಂಡಿಯಾಕ್ಕೆ(Digital India) ಆದ್ಯತೆ ಹೆಚ್ಚಾಯಿತು. ಅದರಂತೆ ಸೆಮಿಕಂಡಕ್ಟರ್‌ ಉದ್ಯಮಕ್ಕೂ ಆದ್ಯತೆ ಸಿಕ್ಕಿತು. ಸೆಮಿಕಂಡಕ್ಟರ್‌ ಉದ್ಯಮ ಈ ಹಿಂದೆ .6 ಲಕ್ಷ ಕೋಟಿ ಮೊತ್ತದ ವ್ಯವಹಾರ ನಡೆಸುತ್ತಿತ್ತು. ಇಂದು ಈ ವ್ಯವಹಾರ .25 ಲಕ್ಷ ಕೋಟಿಗೆ ತಲುಪಿದೆ ಅಂದರೆ 300 ಬಿಲಿಯನ್‌ ಬಿಸಿನೆಸ್‌ ಆಗಿದೆ. ಐದು ಪಟ್ಟು ಹೆಚ್ಚಳವಾಗಿದೆ ಎಂದರ್ಥ ಎಂದರು.

ಭಾರತದಲ್ಲಿ 500 ಸೆಮಿಕಂಡಕ್ಟರ್‌ ಉದ್ಯಮಗಳು(Semiconductor Industries) ಸ್ಥಾಪನೆ ಮಾಡಬೇಕು ಎನ್ನುವುದು ಮೋದಿ ಸರ್ಕಾರದ ಉದ್ದೇಶ ಇದೆ. ಯುಎಸ್‌ಎ(USA), ತೈವಾನ್‌(Taiwan), ಕೊರಿಯಾ ರಾಷ್ಟ್ರಗಳು ಸೆಮಿಕಂಡಕ್ಟರ್‌ ಉದ್ಯಮವನ್ನು ಹೆಚ್ಚು ಆಳುತ್ತಿವೆ. ಆದರೆ ಅಲ್ಲಿ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲ ಕೊರತೆ ಇದೆ. ಭಾರತದಲ್ಲಿ ಯಥೇಚ್ಛವಾಗಿದ್ದು, ಅದನ್ನು ಬಳಸಬೇಕಿದೆ. ಅಂತಿಮವಾಗಿ ಕರ್ನಾಟಕ ಸೇರಿದಂತೆ ಭಾರತದ ಅಭಿವೃದ್ಧಿಗೆ ಈ ಕಾರ್ಯಾಗಾರ ಸಹಾಯಕವಾಗಲಿದೆ ಎಂದರು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ