ಹೋಗ್ಬನ್ನಿ ಒಳ್ಳೆದಾಗ್ಲಿ: ಮೋದಿ ಬಿಚ್ಚಿಟ್ಟ ಊರ್ಜಿತ್ ರಹಸ್ಯ!

By Web DeskFirst Published Dec 10, 2018, 7:30 PM IST
Highlights

ಆರ್‌ಬಿಐ ಗರ್ವನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ| ಊರ್ಜಿತ್ ಪಟೇಲ್ ರಾಜೀನಾಮೆ ಬಳಿಕ ಪ್ರಧಾನಿ ಮೋದಿ ಶುಭಾಶಯ| ಊರ್ಜಿತ್ ಓರ್ವ ಪ್ರಾಮಾಣಿಕ ಮತ್ತು ಅದ್ಭುತ ಅರ್ಥಶಾಸ್ತ್ರಜ್ಞ| ಟ್ವಿಟ್ಟರ್ ಮೂಲಕ ಊರ್ಜಿತ್ ಪಟೇಲ್ ಅವರಿಗೆ ಮೋದಿ ಶುಭಾಶಯ 

ನವದೆಹಲಿ(ಡಿ.10): ಆರ್‌ಬಿಐ ಗರ್ವನರ್ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿರುವ ಊರ್ಜಿತ್ ಪಟೇಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

Dr. Urjit Patel is a thorough professional with impeccable integrity. He has been in the Reserve Bank of India for about 6 years as Deputy Governor and Governor. He leaves behind a great legacy. We will miss him immensely.

— Narendra Modi (@narendramodi)

ಕೇಂದ್ರ ಸರ್ಕಾರ ದರಲ್ಲೂ ವಿಶೇಷವಾಗಿ ಕೇಂದ್ರ ಹಣಕಾಸು ಇಲಾಖೆ ಜೊತೆಗಿನ ಆರ್‌ಬಿಐ ತಿಕ್ಕಾಟ, ಆರ್ ಬಿಐ ಸ್ವಾಯತತ್ತೆ ಮೇಲೆ ಕೇಂದ್ರದ ಪ್ರಹಾರ ಇಂತಹ ಮಾತುಗಳೇ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಊರ್ಜಿತ್ ಪಟೇಲ್ ಅವರಿಗೆ ಪ್ರಧಾನಿ ಮೋದಿ ಶುಭಾಶಯ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.

Dr Urjit Patel is an economist of a very high calibre with a deep and insightful understanding of macro-economic issues. He steered the banking system from chaos to order and ensured discipline. Under his leadership, the RBI brought financial stability.

— Narendra Modi (@narendramodi)

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಊರ್ಜಿತ್ ಪಟೇಲ್ ಓರ್ವ ಪ್ರಾಮಾಣಿಕ ಮತ್ತು ಅದ್ಭುತ ಅರ್ಥಶಾಸ್ತ್ರಜ್ಞ ಎಂದು ಬಣ್ಣಿಸಿದ್ದಾರೆ. ಊರ್ಜಿತ್ ಪಟೇಲ್ ಅವಧಿಯಲ್ಲೇ ಆರ್‌ಬಿಐ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಶಿಸ್ತು ಕಾಣಿಸಿಕೊಂಡಿದ್ದು ಎಂದು ಮೋದಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

click me!