Latest Videos

PM Kisan Scheme: ಫಲಾನುಭವಿ ರೈತರಲ್ಲಿ ನೀವೂ ಇದ್ದೀರಾ? ಹೀಗ್ ಚೆಕ್ ಮಾಡ್ಬಹುದು!

By Roopa HegdeFirst Published Jun 15, 2024, 12:56 PM IST
Highlights

ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳಿಗೆ ಖುಷಿ ಸುದ್ದಿ. ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ವರ್ಗಾವಣೆಯಾಗುವ ದಿನಾಂಕ ನಿಗದಿಯಾಗಿದೆ. 
 

ದೇಶದ ಕೋಟ್ಯಂತರ ರೈತರ ಕಾಯುವಿಕೆ ಕೊನೆಗೊಂಡಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತು ಜೂನ್ 18, 2024 ರಂದು  ಬಿಡುಗಡೆಯಾಗಲಿದೆ. ನೀವು ಯೋಜನೆಯ ಪ್ರಯೋಜನೆ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. 

ಪ್ರಧಾನಮಂತ್ರಿ (Prime Minister)  ಕಿಸಾನ್ ಯೋಜನೆಯಡಿ ರೈತರಿಗೆ ಮೂರು ಕಂತುಗಳಲ್ಲಿ ತಲಾ 2,000 ರೂಪಾಯಿ ಸಿಗುತ್ತದೆ. ಯೋಜನೆಯಡಿಯಲ್ಲಿ  ಸರ್ಕಾರ (Govt) ಮೊದಲ ಕಂತಿನ ಹಣವನ್ನು ಏಪ್ರಿಲ್‌ನಿಂದ ಜುಲೈ ನಡುವೆ ನೀಡುತ್ತದೆ. ಎರಡನೇ ಕಂತಿನ ಹಣ ಆಗಸ್ಟ್‌ನಿಂದ ನವೆಂಬರ್ ನಡುವೆ ನಿಮ್ಮ ಖಾತೆ ಸೇರುತ್ತದೆ. ಮೂರನೇ ಕಂತು ಡಿಸೆಂಬರ್ ಮತ್ತು ಮಾರ್ಚ್ ನಡುವೆ ಬಿಡುಗಡೆ ಮಾಡುತ್ತದೆ. ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಿದ್ದು, ರೈತರಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆ ಉದ್ದೇಶ. ಈ ಯೋಜನೆ ಲಾಭ ಪಡೆಯಲು ರೈತರು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ವಿರಾಟ್ ಕೊಹ್ಲಿಯ 112 ಕೋಟಿ ಬಿಸ್ನೆಸ್ ಸಾಮ್ರಾಜ್ಯದ ಒಡೆಯ ಈ ವಿಕಾಸ್

ಆರಂಭದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (Kisan Scheme) ಪ್ರಯೋಜನಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಲಭ್ಯವಿದ್ದವು. ಇದರಲ್ಲಿ ಎರಡು ಹೆಕ್ಟೇರ್‌ವರೆಗೆ ಜಂಟಿ ಜಮೀನು ಹೊಂದಿರುವ ರೈತರೂ ಸೇರಿದ್ದಾರೆ. ಯೋಜನೆಯನ್ನು ಜೂನ್ 2019 ರಲ್ಲಿ ಪರಿಷ್ಕರಿಸಲಾಯಿತು. ಈಗ ಎಲ್ಲ ರೈತರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ನಿಮ್ಮ ಖಾತೆಗೆ ಹಣ ಬರುತ್ತಾ, ಇಲ್ವಾ ಹೀಗೆ ಪತ್ತೆ ಮಾಡಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪಟ್ಟಿಯನ್ನು ನೋಡಲು pmkisan.gov.in ಗೆ ಹೋಗಬೇಕು. ವೆಬ್ಸೈಟ್ ಓಪನ್ ಆದ್ಮೇಲೆ ಫಲಾನುಭವಿಗಳ ಪಟ್ಟಿಯ ಲಿಂಕ್ ಅನ್ನು ಕ್ಲಿಕ್ ಮಾಡಿ. ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿ ನಮೂದಿಸಿ. ಇದರ ನಂತರ ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ. ಅದರ ನಂತರ ಮಾಹಿತಿ ಲಭ್ಯವಾಗಲಿದೆ. ಅಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಹಣ ಬರಲಿದೆ ಎಂದರ್ಥ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನಿಮಗೆ ಹಣ ಬಾರದಿರಲು ಕಾರಣ : ಬ್ಯಾಂಕ್ ಮಾಹಿತಿಯನ್ನು ತಪ್ಪಾಗಿ ನೀಡಿದ್ದರೆ, ಯೋಜನೆಯ ಬಹಿಷ್ಕೃತ ಶ್ರೇಣಿಯಲ್ಲಿ ನೀವಿದ್ದರೆ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲವೆಂದಾದ್ರೆ ಅಲ್ಲದೆ ಯೋಜನೆಗೆ ಅರ್ಜಿ ಸಲ್ಲಿಸಿದ ವ್ಯಕ್ತಿ ವಯಸ್ಸು 18 ವರ್ಷಕ್ಕಿಂತ ಕೆಳಗಿದ್ದರೆ, ಕೆವೈಸಿ ಮಾಡಿರದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಸಿಗೋದಿಲ್ಲ. 

ಹಣ ಪಡೆಯಲು ಏನು ಮಾಡ್ಬೇಕು? : ಮೇಲಿನ ಎಲ್ಲ ನಿಯಮಗಳನ್ನು ನೀವು ಪಾಲಿಸಿದ್ದರೂ ನಿಮ್ಮ ಖಾತೆಗೆ ಹಣ ಬರ್ತಿಲ್ಲ ಎಂದಾದ್ರೆ ನೀವು ಸಹಾಯವಾಣಿಯ ಸಹಾಯ ಪಡೆಯಬಹುದು. 155261/001/24300606 ಅಥವಾ pmkisan ict@gov.in ಅಥವಾ ಕಿಸಾನ್ ಇ ಮಿತ್ರ ಸಂಪರ್ಕಿಸಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು. 

ಕಿಸಾನ್ ಸಮ್ಮಾನ್ ಇ- ಕೆವೈಸಿ ಮಾಡಿಸೋದು ಹೇಗೆ? : ಜೂನ್ 18ರೊಳಗೆ ನೀವು ಇ-ಕೆವೈಸಿ ಮಾಡಿಸದಿದ್ದರೆ ನಿಮಗೆ ಯೋಜನೆ ಲಾಭ ಸಿಗೋದಿಲ್ಲ. ಇ- ಕೆವೈಸಿ ಮಾಡೋದು ಸುಲಭ. ನೀವು ಫೋನ್ ನಲ್ಲಿ, ಪಿಎಂ ಕಿಸಾನ್ ಮೊಬೈಲ್ ಆಪ್ ಡೌನ್ಲೋಡ್ ಮಾಡಿ ಅದ್ರಲ್ಲಿ ಅಗತ್ಯವಿರುವ ಮಾಹಿತಿ ಭರ್ತಿ ಮಾಡಿ ಈ ಕೆವೈಸಿ ಮಾಡಬೇಕು. 

ಕೋಟಿ ಬೆಲೆ ಒಡವೆ ತೊಟ್ಟರೂ ಕೈಗೆ ಕಪ್ಪು ದಾರ ಕಟ್ಟಿದ್ದೇಕೆ ಅಂಬಾನಿ ಭಾವೀ ಸೊಸೆ!

ಪ್ರಧಾನಿ ಮೋದಿ ಅವರು ತಮ್ಮ ಮೂರನೇ ಅವಧಿಯ ಮೊದಲ ದಿನವೇ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತಿನ ಕಡತಕ್ಕೆ ಸಹಿ ಹಾಕಿದ್ದರು. ಕಡತಕ್ಕೆ ಸಹಿ ಹಾಕಿದ ಬಳಿಕ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶಾದ್ಯಂತ ಇರುವ ರೈತ ಸಹೋದರ ಸಹೋದರಿಯರ ಬದುಕನ್ನು ಸುಗಮಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದರೊಂದಿಗೆ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರೈತರಿಗಾಗಿ ಮೊದಲು ಕೆಲಸ ಮಾಡಿರುವುದು ನನ್ನ ಅದೃಷ್ಟ ಎಂದು ಬರೆದುಕೊಂಡಿದ್ದರು.

click me!