ಎಲ್ಲರೂ ದುಡ್ಡು ಕಳೆದುಕೊಂಡರೆ ಇವನು ಆಲ್‌ಲೈನ್ ಗೇಮಲ್ಲಿ 18 ಲಕ್ಷ ಗಳಿಸಿದ್ದಾನೆ!

By Suvarna News  |  First Published Jul 4, 2023, 2:45 PM IST

ಆನ್ಲೈನ್ ಗೇಮ್ ನಲ್ಲಿ ಇಂಗ್ಲೆಂಡ್ ಹುಡುಗನೊಬ್ಬ ಹಣ ಗಳಿಸಿದ್ದಾನೆ. ಇದು ಬರೀ ಸುದ್ದಿ ಮಾತ್ರ. ಆತನಂತೆ ನೀವಾಗ್ಬೇಕು ಎಂಬ ಹುಚ್ಚಿಗೆ ಇದ್ದ ಹಣವನ್ನೆಲ್ಲ ಗೇಮಿಗೆ ಸುರಿದು ಪ್ರಾಣಕ್ಕೆ ಕುತ್ತು ತಂದ್ಕೊಳ್ಬೇಡಿ. 
 


ಮೊಬೈಲ್ ಗೇಮ್ ಗಳಿಗೆ ದಾಸರಾಗದ ಮಕ್ಕಳಿಲ್ಲ. ಮೊದಲು ವಿಡಿಯೋ ಗೇಮ್ ಆಡ್ತಾ  ಕಾಲ ಕಳೆಯುತ್ತಿದ್ದ ಮಕ್ಕಳು ಈಗ ಜೂಜಾಟಕ್ಕೆ ಇಳಿದಿದ್ದಾರೆ. ಆನ್ಲೈನ್ ನಲ್ಲಿ ಹಣ ಹಾಕಿ ಆಡುವ ಆಟಗಳು ಸಾಕಷ್ಟು ಲಭ್ಯವಿದೆ. ಕೇವಲ ಮನರಂಜನೆಗೆ ಆಡುವ ಆಟಗಳು ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡ್ಬಹುದೇನೋ,  ಆದ್ರೆ ಹಣ ಹಾಕಿ ಆಡುವ ಆಟಗಳು ಒತ್ತಡ ಹೆಚ್ಚು ಮಾಡೋದಲ್ಲದೆ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕುವಂತೆ ಮಾಡುತ್ತದೆ. ಇತ್ತೀಚಿಗೆ ಶಿರಸಿಯಲ್ಲಿ ನಡೆದ ಯುವಕನ ಆತ್ಮಹತ್ಯೆ ಇದಕ್ಕೆ ಸೂಕ್ತ ಉದಾಹರಣೆ.

ಆನ್ಲೈನ್ (Online) ನಲ್ಲಿ ಹಣ ಹಾಕಿ ಗೇಮ್ ನಲ್ಲಿ ಬ್ಯುಸಿಯಾದ ಯುವಕ 65 ಲಕ್ಷ ಕಳೆದುಕೊಂಡಿದ್ದಾನೆ. ಸಾಲ ಹೆಚ್ಚಾದಂತೆ ಭಯ ಶುರುವಾಗಿ ಆತ್ಮಹತ್ಯೆ (Suicide) ಗೆ ಶರಣಾಗಿದ್ದಾನೆ. ಈ ಯುವಕನ ಕಥೆ ಎಲ್ಲರಿಗೂ ಪಾಠವಾಗಬೇಕಿದೆ. ಆನ್ಲೈನ್ ನಲ್ಲಿ ಯಾವುದೇ ಆಟ ಆಡುವ ಮೊದಲು ಅದು ನಮಗೆಷ್ಟು ಸೇಫ್ ಎಂಬುದನ್ನು ಅರಿಯಬೇಕು. ಪಾಲಕರು ಮಕ್ಕಳ ಕೈಗೆ ಮೊಬೈಲ್ (Mobile) ನೀಡಿ ತಮ್ಮ ಕೆಲಸದಲ್ಲಿ ಬ್ಯುಸಿಯಾಗ್ತಾರೆ. ಮಕ್ಕಳು ಏನೇನೋ ಡೌನ್ಲೋಡ್ ಮಾಡಿ, ಹಣ ಕಳೆಯುತ್ತಾರೆ. ಇಂಥ ಘಟನೆಗಳು ಕೂಡ ಸಾಕಷ್ಟು ಕೇಳಿ ಬಂದಿವೆ. ಮೊಬೈಲ್ ಗೇಮ್ ನಲ್ಲಿ ಹಣ ಮಾಡುವವರ ಸಂಖ್ಯೆಯೂ ಅಪರೂಪಕ್ಕೆ ಒಂದೆರಡು ಸಿಗುತ್ತದೆ. ಅದಕ್ಕೆ ಇಂಗ್ಲೆಂಡ್ ಹುಡುಗ ನಿದರ್ಶನ. ಆತ ಆನ್ಲೈನ್ ನಲ್ಲಿ ಗೇಮ್ ಆಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದಾನೆ. 

Tap to resize

Latest Videos

ಆನ್‌ಲೈನ್‌ ಗೇಮ್ ಚಟಕ್ಕೆ 65 ಲಕ್ಷ ರೂ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿರಸಿ ಯುವಕ!

ಆನ್ಲೈನ್ ಗೇಮ್ ಮೂಲಕ ಲಕ್ಷಾಂತ ರೂಪಾಯಿ ಸಂಪಾದನೆ ಮಾಡಿದ ಹುಡುಗ ಯಾರು? : ಆನ್ಲೈನ್ ಆಟದ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ ಹುಡುಗ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ವಾಸವಾಗಿದ್ದಾನೆ. ಆತನ ಹೆಸರು ಮೇಸನ್ ಬ್ರಿಸ್ಟಾ. ವಯಸ್ಸು 17 ವರ್ಷ. ಮೇಸನ್ ಬ್ರಿಸ್ಟಾಗೆ ಆನ್ಲೈನ್ ಗೇಮಿಂಗ್ ಅಂದ್ರೆ ಇಷ್ಟವಂತೆ. ತನ್ನ ವೃತ್ತಿಯನ್ನೇ ಅವನು ಆನ್ಲೈನ್ ಗೇಮಿಂಗ್ ಮಾಡಿಕೊಳ್ಳುವ ಗುರಿ ಹೊಂದಿದ್ದಾನೆ. ಮೇಸನ್ ಬ್ರಿಸ್ಟಾಗೆ ಆತನ ತಂದೆ – ತಾಯಿಯ ಬೆಂಬಲ ಸಂಪೂರ್ಣವಾಗಿದೆ. ಬ್ರಿಸ್ಟಾ 63 ವರ್ಷದ ತಂದೆ ಅಲನ್ ಬ್ರಿಸ್ಟೋವ್, 50 ವರ್ಷದ ತಾಯಿ ನಟಾಲಿ ಬ್ರಿಸ್ಟೋವ್ ಮತ್ತು ನಾಲ್ಕು ಒಡಹುಟ್ಟಿದವರೊಂದಿಗೆ ವಾಸವಾಗಿದ್ದಾನೆ. 

ಮೇಸನ್ ಬ್ರಿಸ್ಟಾ ಆಡುವ ಆನ್ಲೈನ್ ಆಟ ಯಾವುದು? : ಮೇಸನ್ ಬ್ರಿಸ್ಟಾ, ರೆಕ್ ರೂಂ (Rec Room) ಹೆಸರಿನ ಆನ್ಲೈನ್ ಗೇಮ್ ಆಡ್ತಾನೆ. ಈ ಆಟದಲ್ಲಿ ನೀವು ವರ್ಚುವಲ್ ಕೊಠಡಿಗಳನ್ನು ರಚಿಸಬಹುದು. ಪ್ರಪಂಚದಾದ್ಯಂತದ ಆನ್‌ಲೈನ್ ಆಟಗಳನ್ನು ಆಡುವ ಜನರೊಂದಿಗೆ ಸಂಪರ್ಕ ಸಾಧಿಸಬಹುದು. 

PubG ಆಡ್ತಾ ಯುಪಿ ಯುವಕನೊಂದಿಗೆ ಲವ್‌, ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ!

ಮೇಸನ್ ಬ್ರಿಸ್ಟಾ ಆನ್ಲೈನ್ ಆಟದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ? : ಮೇಸನ್ ಬ್ರಿಸ್ಟಾ, ರೆಕ್ ರೂಂ ಆಟದಲ್ಲಿ ಒಂದೋ ಎರಡೋ ಲಕ್ಷವಲ್ಲ ಬರೋಬ್ಬರಿ 18 ಲಕ್ಷ ರೂಪಾಯಿ ಗಳಿಸಿದ್ದಾನೆ. 17ನೇ ವಯಸ್ಸಿನಲ್ಲೇ ಇಷ್ಟು ದೊಡ್ಡ ಮಟ್ಟದ ಹಣ ಸಂಪಾದನೆ ಮಾಡಿರೋದು ಅವನ ಸಾಧನೆ. 

ಆನ್ಲೈನ್ ನಲ್ಲಿ ಗಳಿಸಿದ ಹಣದ ಬಳಕೆ ಹೇಗೆ?: ಮೇನಸ್ ಬ್ರಿಸ್ಟಾ ಆನ್ಲೈನ್ ಆಟದಲ್ಲಿ ಗಳಿಸಿದ ಹಣವನ್ನು ತನ್ನ ಓದಿಗೆ ಬಳಸಿಕೊಳ್ತಿದ್ದಾನೆ. ಅಲ್ಲದೆ ಸುತ್ತಾಟಕ್ಕೆ ಹಾಗೂ ಬಟ್ಟೆ, ಶೂ ಖರೀದಿಗೂ ಬಳಸುತ್ತಿದ್ದಾನೆ.

ಮೇನಸ್ ಬ್ರಿಸ್ಟಾಗಿದೆ ಈ ಖಾಯಿಲೆ : ಮೇಸನ್ ಬ್ರಿಸ್ಟೋವ್, 17, ಡಿಸ್ಲೆಕ್ಸಿಯಾ ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದಾನೆ. ಈ ಖಾಯಿಲೆಯಿಂದ ಬಳಲುವ ರೋಗಿಗಳಿಗೆ ಬರೆಯಲು, ಓದಲು ಸಮಸ್ಯೆಯಾಗುತ್ತದೆ. ಇದನ್ನು ಕಲಿಕೆಯ ಅಸಮರ್ಥತೆ ಎಂದು ಕರೆಯಬಹುದು. 

ಎಚ್ಚರಿಕೆ : ಮನೆಯಲ್ಲೇ ಕುಳಿತು ಆರಾಮವಾಗಿ ಆನ್ಲೈನ್ ನಲ್ಲಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಯಾವುದೇ ಮಾಹಿತಿಯಿಲ್ಲದೆ ನೀವೂ ಕೈ ಹಾಕ್ಬೇಡಿ. ಸೂಕ್ತ ಜ್ಞಾನವಿದ್ದಲ್ಲಿ ಹಾಗೂ ಸ್ವಲ್ಪ ಪ್ರಮಾಣದ ಹಣ ಕಳೆದುಕೊಂಡಾಗ ತಕ್ಷಣ ಆಟ ನಿಲ್ಲಿಸುವ ಮನಸ್ಥಿತಿಯಿದ್ದವರು ಮಾತ್ರ ಈ ಆಟಕ್ಕೆ ಮುಂದಾದ್ರೆ ಒಳ್ಳೆಯದು. 

click me!