
ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಇದ್ರಲ್ಲಿ ಬಾಚಣಿಕೆ ಕೂಡ ಸೇರಿದೆ. ಪ್ರತಿ ದಿನ ಹುಡುಗಿಯರಿರಲಿ, ಮಹಿಳೆಯರಿರಲಿ, ಮಕ್ಕಳಿರಲಿ ಇಲ್ಲ ಪುರುಷರಿರಲಿ ಎಲ್ಲರೂ ಬಾಚಣಿಗೆ ಉಪಯೋಗ ಮಾಡ್ತಾರೆ.
ಉತ್ತಮ ಗುಣಮಟ್ಟದ ಬಾಚಣಿಗೆ (Combs) ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಅರಿತಿರುವ ಜನರು ಉತ್ತಮ ಬಾಚಣಿಕೆಯನ್ನು ಖರೀದಿ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಬಾಚಣಿಗೆಗಳು ಮಾರುಕಟ್ಟೆ (Market) ಗೆ ಬರುತ್ತಿವೆ. ನೀವು ಉತ್ತಮ ಗುಣಮಟ್ಟದ ವಿವಿಧ ಗಾತ್ರದ ಬಾಚಣಿಗೆಗಳನ್ನು ತಯಾರಿಸಿ, ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ನಾವಿಂದ ಬಾಚಣಿಕೆ ತಯಾರಿಕಾ ವ್ಯಾಪಾರ (business) ದ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಮನೇಲಿ ಕೂತ್ಕೊಂಡೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಗಳಿಸುವ 10 ಮಾರ್ಗ ಹೀಗಿದೆ..
ಈಗಿನ ದಿನಗಳಲ್ಲಿ ಪ್ಲಾಸ್ಟಿಕ್ ಅಲ್ಲದೆ ಮರದ ಬಾಚಣಿಕೆಗಳು ಕೂಡ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ನೀವು ಪ್ಲಾಸ್ಟಿಕ್ ಬಾಚಣಿಗೆ ತಯಾರಿಸುವ ಉದ್ಯೋಗ ಶುರು ಮಾಡ್ತಿದ್ದರೆ ಕಚ್ಚಾ ವಸ್ತುಗಳ ಅಗತ್ಯವಿರುತ್ತದೆ. ನೀವು ಪ್ಲಾಸ್ಟಿಕ್ ಕಣಗಳಾದ ಪಾಲಿಪ್ರೊಪಿಲೀನ್ ಅನ್ನು ಖರೀದಿ ಮಾಡ್ಬೇಕಾಗುತ್ತದೆ. ಅನೇಕ ಕಂಪನಿಗಳು ಪಾಲಿಪ್ರೊಪಿಲೀನನ್ನು ತಯಾರಿಸುತ್ತವೆ. ಇಂಡಿಯಾಮಾರ್ಟ್, ಪ್ಲಾಸ್ಟ್ ಮಾರ್ಟ್ ಅಥವಾ ಅಲಿಬಾಬಾದಂತಹ ವೆಬ್‌ಸೈಟ್ ಮೂಲಕ ನೀವು ಇದನ್ನು ಖರೀದಿ ಮಾಡ್ಬಹುದು. ಆನ್ಲೈನ್ ನಲ್ಲಿ ಇದು ಕೆಜಿಗೆ 50 ರಿಂದ 100 ರೂಪಾಯಿ ದರದಲ್ಲಿ ಸಿಗುತ್ತದೆ. ನೀವು ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡಿಯೂ ಬಾಚಣಿಕೆ ತಯಾರಿಸಬಹುದು. ಆಗ ನಿಮ್ಮ ಹಣ ಉಳಿಯುತ್ತದೆ.
ಬಾಚಣಿಕೆ ತಯಾರಿಸಲು ಯಂತ್ರದ ಅಗತ್ಯವಿರುತ್ತದೆ. ನೀವು ಅರೆ ಸ್ವಯಂಚಾಲಿತ ಅಥವಾ ಸ್ವಯಂಚಾಲಿತ ಹೈಡ್ರಾಲಿಕ್ ಇಂಜೆಕ್ಷನ್ ಮೋಲ್ಡಿಂಗ್ ಯಂತ್ರ ಖರೀದಿ ಮಾಡ್ಬೇಕಾಗುತ್ತದೆ. ಈ ಯಂತ್ರದ ಬೆಲೆ 2 ರಿಂದ 10 ಲಕ್ಷ ರೂಪಾಯಿ ಒಳಗಿದೆ. ಇದಲ್ಲದೆ ನೀವು ಸ್ಕ್ರ್ಯಾಪ್ ಗ್ರೈಂಡರ್ ಯಂತ್ರ ಖರೀದಿ ಮಾಡ್ಬೇಕಾಗುತ್ತದೆ. ಇದು 50,000 ರಿಂದ 2 ಲಕ್ಷ ರೂಪಾಯಿಯಲ್ಲಿ ನಿಮಗೆ ಸಿಗುತ್ತದೆ. ಇದಲ್ಲದೆ ಬಫಿಂಗ್, ಪಾಲಿಶಿಂಗ್ ಮತ್ತು ಹಾಟ್ ಸ್ಟಾಂಪಿಂಗ್ ಮೆಷಿನ್ ಬೇಕಾಗುತ್ತದೆ. ಇವುಗಳನ್ನು ನೀವು 10,000 ರಿಂದ 1 ಲಕ್ಷ ರೂಪಾಯಿ ಬೆಲೆಯೊಳಗೆ ಖರೀದಿ ಮಾಡ್ಬಹುದು.
ಸ್ಯಾನಿಟರಿ ಪ್ಯಾಡ್‌ಗೆ ಹೇಳಿ ಗುಡ್ ಬೈ: ದೇಶಿಯ ಕಾಂಫಿ ಕಫ್‌ಗೆ ಹೇಳಿ ಹಾಯ್.. ಹಾಯ್ !
ಗ್ರೀಸ್ ಮತ್ತು ಕೂಲಿಂಗ್ ಉಪಕರಣಗಳ ಖರೀದಿಗೆ 10,000 ರಿಂದ 30,000 ರೂಪಾಯಿ ನೀಡಬೇಕಾಗುತ್ತದೆ. ಇವೆಲ್ಲವುಗಳ ಹೊರತಾಗಿ, ಮೈಕ್ರೋಮೀಟರ್ ಬ್ಯಾಲೆನ್ಸ್ ನಂತಹ ಪರೀಕ್ಷಾ ಸಾಧನಗಳು ಸಹ ಅಗತ್ಯವಿದೆ. ಇದಕ್ಕೆ ನೀವು 10,000 ರಿಂದ 1 ಲಕ್ಷ ರೂಪಾಯಿ ವೆಚ್ಛ ಮಾಡ್ಬೇಕು. ಈ ಯಂತ್ರಗಳನ್ನು ನೀವು ಆನ್ಲೈನ್ ನಲ್ಲಿ ಖರೀದಿ ಮಾಡ್ಬಹುದು.
ವ್ಯವಹಾರವನ್ನು ಶುರು ಮಾಡುವ ಮೊದಲು ಉದ್ಯೋಗ್ ಆಧಾರ್‌ನಲ್ಲಿ ನಿಮ್ಮ ವ್ಯವಹಾರವನ್ನು ನೋಂದಾಯಿಸಿಕೊಳ್ಳಿ. ಆನ್ಲೈನ್ ನಲ್ಲಿಯೇ ನೀವು ನೋಂದಣಿ ಕೆಲಸ ಮಾಡ್ಬಹುದು. ಇದಲ್ಲದೆ ವ್ಯವಹಾರದ ಜಿಎಸ್ಟಿ ನೋಂದಣಿ ಪಡೆಯಬೇಕು. ಇದಕ್ಕಾಗಿ ನೀವು ಚಾರ್ಟರ್ಡ್ ಅಕೌಂಟೆಂಟ್ ಸಹಾಯ ಪಡೆಯಬಹುದು. ವ್ಯವಹಾರ ಶುರು ಮಾಡಲು ಹಾಗೂ ಯಂತ್ರವನ್ನು ಬಳಸಲು ನೀವು ಆಕ್ಷೇಪಣೆಯಿಲ್ಲದ ಪ್ರಮಾಣಪತ್ರವನ್ನು ಹೊಂದಿರಬೇಕು.
ಬಾಚಣಿಕೆ ತಯಾರಿಕಾ ಘಟಕ ಶುರು ಮಾಡಲು ಸ್ಥಳದ ಅಗತ್ಯವಿದೆ. ಕನಿಷ್ಠ 2000 ಚದರ ಅಡಿ ಜಾಗವನ್ನು ನೀವು ಹೊಂದಿರಬೇಕಾಗುತ್ತದೆ. ನೀವು ಯಾವ ಯಂತ್ರವನ್ನು ಖರೀದಿ ಮಾಡ್ತೀರಿ, ಎಲ್ಲಿ ವ್ಯವಹಾರ ಶುರು ಮಾಡ್ತಿರಿ ಎನ್ನುವುದ್ರ ಮೇಲೆ ಹೂಡಿಕೆ ನಿರ್ಧಾರವಾಗುತ್ತದೆ. ನೀವು ಆರಂಭದಲ್ಲಿ 10 ಲಕ್ಷ ರೂಪಾಯಿಗಳವರೆಗೆ ಖರ್ಚು ಬರುತ್ತದೆ.
ಬಾಚಣಿಕೆ ತಯಾರಿಕೆ ಬಗ್ಗೆ ನೀವು ಸರಿಯಾದ ತರಬೇತಿ ಪಡೆದು ಈ ವ್ಯವಹಾರ ಶುರುಮಾಡಬೇಕು. ಚಿಲ್ಲರ ವ್ಯಾಪಾರ, ಆನ್ಲೈನ್ ಸೇರಿದಂತೆ ಎಲ್ಲ ವಿಧಾನಗಳಲ್ಲಿ ನೀವು ತಯಾರಿಸಿದ ಬಾಚಣಿಕೆಯನ್ನು ಮಾರಾಟ ಮಾಡಬೇಕಾಗುತ್ತದೆ. ಇತರ ಸ್ಪರ್ಧಿಗಳು ಅದನ್ನು ಮಾರುಕಟ್ಟೆಯಲ್ಲಿ ಯಾವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ನೋಡಿ, ಅದಕ್ಕೆ ಅನುಗುಣವಾಗಿ ನಿಮ್ಮ ಉತ್ಪನ್ನದ ಬೆಲೆಯನ್ನು ಹೊಂದಿಸಿ. ಉತ್ತಮ ಗುಣಮಟ್ಟದ ಬಾಚಣಿಗೆಯನ್ನು ಪ್ರತಿ ಡಜನ್‌ಗೆ 70 ರಿಂದ 150 ರೂಪಾಯಿ ದರದಲ್ಲಿ ಸಗಟು ಮಾರಾಟ ಮಾಡಬಹುದು. ಇದರಲ್ಲಿ ನಿಮಗೆ ಶೇಕಡಾ 20 ರಿಂದ 50 ರಷ್ಟು ಲಾಭ ಸಿಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.