
ನವದೆಹಲಿ[ಮಾ.05]: ಪಾಕಿಸ್ತಾನದಿಂದ ಬಿಡುಗಡೆಯಾಗಿ ಬಂದಿರುವ ವಾಯುಪಡೆಯ ಯೋಧ ಅಭಿನಂದನ್ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ಖಾದ್ಯ ಕಂಪನಿ ಪಿಜ್ಜಾ ಹಟ್ ಆಫರ್‌ವೊಂದರನ್ನು ಪ್ರಕಟಿಸಿದೆ.
ಅದೇನೆಂದರೆ, ಅಭಿನಂದನ್ ಎಂಬ ಹೆಸರು ಹೆಸರು ಇರುವವರಿಗೆಲ್ಲಾ ಉಚಿತ ಪಿಜ್ಜಾ ಹಂಚಿದೆ. ಸೋಮವಾರ ಒಂದು ದಿನದ ಮಟ್ಟಿಗೆ ಆಫರ್ ನೀಡಲಾಗಿತ್ತು. ಯೋಧನ ಬೆಂಬಲಿಸಿ ಈ ಆಫರ್ ನೀಡಿದ್ದಾಗಿ ಪಿಜ್ಜಾ ಹಟ್ ಕಂಪನಿ ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಹೇಳಿಕೊಂಡಿದೆ.
ಈಗಾಗಲೇ ಅಭಿನಂದನ್ ಇಟ್ಟುಕೊಂಡಿರುವ ಮೀಸೆ ಟ್ರೆಂಡ್ ಆಗಿದೆ. ಹೀಗಿರುವಾಗ ಪಿಜ್ಜಾ ಹಟ್ ನ ಈ ಆಫರ್ ನಿಂದ ಅಭಿನಂದನ್ ಹೆಸೆಉ ಕೂಡಾ ಟ್ರೆಂಡ್ ಆಗುವುದರಲ್ಲಿ ಅನುಮಾನವಿಲ್ಲ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.