
ನವದೆಹಲಿ(ಮಾ.03): ಹೇಳಿ ಕೇಳಿ ಇದು ಚುನಾವಣೆ ಸಮಯ. ಸರ್ಕಾರ ಒಂದು ಯೋಜನೆ ಜಾರಿಗೆ ತಂದರೆ ಪ್ರತಿಪಕ್ಷ ಇದು ಚುನಾವಣೆ ಗಿಮಿಕ್ ಅನ್ನುತ್ತದೆ. ಆದರೆ ಈ ಗೊಂದಲದಲ್ಲಿ ಬೀಳಲು ಇಷ್ಟಪಡದ ಜನಸಾಮಾನ್ಯ ಮಾತ್ರ ನಿರ್ದಿಷ್ಟ ಯೋಜನೆಯ ಫಲ ಏನು ಎಂದು ಯೋಚಿಸುತ್ತಾನೆ.
ಅದರಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಸರ್ಕಾರದ ಯೋಜನೆಗಳ ಫಲವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಯೋಜನೆ ಜಾರಿಯಾಗಿದೆ.
ಇದು ತಂತ್ರಜ್ಞಾನ ಆಧಾರಿತ ನೇರ ನಗದು ವರ್ಗಾವಣೆ ವ್ಯವಸ್ಥೆಯಾಗಿದ್ದು, ಯಾವುದೇ ಮಧ್ಯವರ್ತಿಗಳ ಗೋಳಿಲ್ಲ, ಕಚೇರಿ ಅಧಿಕಾರಿಗಳನ್ನು ಅಂಗಲಾಚುವಂತಿಲ್ಲ, ದಿನನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಸರಕಾರಿ ಕಚೇರಿ ಅಲೆಯಬೇಕಾಗಿಲ್ಲ.
ಇದನ್ನು Direct Benefit Transfer(DBT) ಎಂದು ಹೆಸರಿಸಲಾಗಿದ್ದು, ಈ ಯೋಜನೆ ಬಗ್ಗೆ ಪ್ರತಿಪಕ್ಷಗಳು ಪಸ್ವರ ಎತ್ತಿವೆ. ಸರ್ಕಾರದ ಅಂಕಿ ಅಂಶಗಳಿಗೂ ಸಿಎಜಿ ವರದಿಗೂ ತಾಳೆಯೇ ಆಗುತ್ತಿಲ್ಲವಾದ್ದರಿಂದ ಡಿಬಿಟಿ ಯೋಜನೆ ಬಗ್ಗೆ ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.