ಬಿಟ್ಬಿಡಿ 90: ಪೆಟ್ರೋಲ್ ಬೆಲೆ ಕ್ರಾಸ್ಡ್ 90!

Published : Sep 24, 2018, 12:43 PM IST
ಬಿಟ್ಬಿಡಿ 90: ಪೆಟ್ರೋಲ್ ಬೆಲೆ ಕ್ರಾಸ್ಡ್ 90!

ಸಾರಾಂಶ

90 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ! ವಾಣಿಜ್ಯ ನಗರಿಯಲ್ಲಿ ಮುಂಬೈನಲ್ಲಿ ಗಗನಕ್ಕೇರಿದ ತೈಲದರ! ಅತೀ ಹೆಚ್ಚು ವ್ಯಾಟ್ ವಿಧಿಸುವ ನಗರ ಮುಂಬೈ! ಡೀಸೆಲ್ ಬೆಲೆಯಲ್ಲೂ ಭಾರೀ ಹೆಚ್ಚಳ

ಮುಂಬೈ(ಸೆ.24): ವಾಣಿಜ್ಯ ನಗರಿ ಮುಂಬೈಯಲ್ಲಿ ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ. ಗಡಿ ದಾಟಿದೆ. 

ಪೆಟ್ರೋಲ್ ಬೆಲೆ ಇಂದು 11 ಪೈಸೆಯಷ್ಟು ಏರಿಕೆಯಾಗಿದ್ದು, ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ದೇಶದಲ್ಲಿಯೇ ಅತೀ ಹೆಚ್ಚು ವ್ಯಾಟ್ ವಿಧಿಸುವ ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ 90 ರೂ ಆಗಿದೆ. 

ಇದೇ ವೇಳೆ  ಡೀಸೆಲ್ ದರ ಕೂಡ  78.58 ರೂ. ಮುಟ್ಟಿದೆ. ಶನಿವಾರ ಮುಂಬೈ ನಲ್ಲಿ ಪೆಟ್ರೋಲ್ ದರ ರೂ.89.97 ಹಾಗೂ ಡೀಸೆಲ್ ದರ ರೂ.78.53 ಇತ್ತು. ಇನ್ನು ರಾಜಧಾನಿ ದೆಹಲಿಯಲ್ಲಿಯೂ ಕೂಡ ಪೆಟ್ರೋಲ್ ದರ 11 ಪೈಸೆ ಏರಿಕೆಯಾಗಿದೆ. ಇದೀಗ ದೆಹಲಿಯಲ್ಲಿ ಪೆಟ್ರೋಲ್ ದರ 82.72 ರೂ. ರಷ್ಟಿದೆ. ಡೀಸೆಲ್ ದರ 5 ಪೈಸೆ ಹೆಚ್ಚಳವಾಗಿದೆ. ಪ್ರಸ್ತುತ ಡೀಸೆಲ್ ದರ 74.02 ರೂ. ತಲುಪಿದೆ.

ಇನ್ನು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 83.37ರೂ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 74.40 ರೂ. ರಷ್ಟಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

​ಗ್ರಾಂ ಚಿನ್ನಕ್ಕೆ ಕೇವಲ ₹181! ಈ ದೇಶದಲ್ಲಿ ಬಂಗಾರಕ್ಕಿಂತ ಬ್ರೆಡ್ ಬೆಲೆಯೇ ಹೆಚ್ಚು!
ಇದ್ದೊಬ್ಬ ಮಗನನ್ನು ಕಳೆದುಕೊಂಡ ಅನಿಲ್‌ ಅಗರ್ವಾಲ್‌, ದಿಕ್ಕಿಲ್ಲದಂತಾದ 35 ಸಾವಿರ ಕೋಟಿ ಸಂಪತ್ತು..