ಇನ್ಮೇಲೆ ಈ ವಸ್ತುಗಳ ಆಮದು ಆಗದು: ಕಾರಣ ರೂಪಾಯಿ ಮೌಲ್ಯ!

Published : Sep 24, 2018, 09:32 AM IST
ಇನ್ಮೇಲೆ ಈ ವಸ್ತುಗಳ ಆಮದು ಆಗದು: ಕಾರಣ ರೂಪಾಯಿ ಮೌಲ್ಯ!

ಸಾರಾಂಶ

ರೂಪಾಯಿ ಮೌಲ್ಯ ಕುಸಿತ ತಡೆಯಲು ಕೇಂದ್ರದ ಕ್ರಮ! ಅನಗತ್ಯ ವಸ್ತುಗಳ ಆಮದು ತಡೆಗೆ ಮುಂದಾದ ಕೇಂದ್ರ! ಡಾಲರ್ ಎದುರು ಶೇ.12ರಷ್ಟು ಕುಸಿದ ರೂಪಾಯಿ ಮೌಲ್ಯ!ರೂಪಾಯಿ ಮೌಲ್ಯವರ್ಧನೆ ಕ್ರಮ ಹಂತ ಹಂತವಾಗಿ ಜಾರಿ  

ನವದೆಹಲಿ(ಸೆ.24): ಡಾಲರ್ ಎದುರು ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯ, ಕೇಂದ್ರ ಸರ್ಕಾರದ ನಿದ್ದೆಗೆಡೆಸಿದೆ. ರೂಪಾಯಿ ಕುಸಿತ ತಡೆಯಲು ಸದ್ಯದಲ್ಲಿಯೇ ಎರಡನೇ ಹಂತದ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ. 

ಅನಗತ್ಯ ವಸ್ತುಗಳ ಆಮದು ತಡೆಯುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವುದರಿಂದ ರೂಪಾಯಿ ದರವನ್ನು ಮತ್ತೆ 68ರಿಂದ 70ರ ಮಟ್ಟದಲ್ಲಿರಲು ಸಾಧ್ಯವಾಗುತ್ತದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗಾರ್ಗ್‌ ಹೇಳಿದ್ದಾರೆ. 

ಸದ್ಯಕ್ಕೆ ರೂಪಾಯಿ ಮೌಲ್ಯ ಶೇ.12ರಷ್ಟು ಕುಸಿದಿದ್ದು, ಇದೆಲ್ಲವೂ ತಾತ್ಕಾಲಿಕ ಮಾತ್ರ. ರೂಪಾಯಿ ಮೌಲ್ಯ ಕುಸಿತವನ್ನು ನಿಯಂತ್ರಿಸುವಲ್ಲಿ ಸರ್ಕಾರ ಸೋತಿದೆ ಎಂದು ಭಾವಿಸುವ ಅಗತ್ಯವಿಲ್ಲ. ರೂಪಾಯಿ ಮೌಲ್ಯವರ್ಧನೆ ಕ್ರಮಗಳು ಹಂತಹಂತವಾಗಿ ಜಾರಿಗೆ ಬರುತ್ತಿವೆ ಎಂದು ಗಾರ್ಗ್ ಹೇಳಿದ್ದಾರೆ. 

ದೇಶದ ಚಾಲ್ತಿ ಖಾತೆ ಕೊರತೆಗೆ ಇಡೀ ವರ್ಷದ ಗುರಿ 6.24 ಲಕ್ಷ ಕೋಟಿ. ಆದರೆ, ಈ ವರ್ಷ ಈಗಾಗಲೇ ಅದರ 86.5 ಶೇಕಡಾ ಭಾಗವನ್ನು ಅದು ದಾಟಿದೆ. ಏಪ್ರಿಲ್‌ನಿಂದ ಜುಲೈ ಅವಧಿಯಲ್ಲೇ ಅದು 5.40 ಲಕ್ಷ ಕೋಟಿ ಆಗಿತ್ತು. ಹೀಗಾಗಿ ಚಾಲ್ತಿ ಖಾತೆ ಕೊರತೆಯ ಮಟ್ಟ ಕಾಯ್ದುಕೊಳ್ಳುವ ಸವಾಲು ಸರ್ಕಾರದ ಮುಂದಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಕೆನರಾ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ; ನಮ್ಮ ಬದ್ಧತೆ ಎಂದ ಬ್ಯಾಂಕ್
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ