
ನವದೆಹಲಿ(ಅ.7): ಮೂರು ದಿನಗಳ ಹಿಂದೆಯಷ್ಟೆ ಪ್ರತಿ ಲೀಟರ್ ಡಿಸೇಲ್ ಮತ್ತು ಪೆಟ್ರೋಲ್ ದರವನ್ನು, ತಲಾ 2.50 ರೂಪಾಯಿ ಕಡಿತಗೊಳಿಸಿದ ಕೇಂದ್ರ ಸರ್ಕಾರ ಮತ್ತೆ ಬೆಲೆ ಏರಿಸಿದೆ.
ಡಿಸೇಲ್ ಹಾಗೂ ಪೆಟ್ರೋಲ್ ದರ ಕ್ರಮವಾಗಿ 20 ಪೈಸೆ ಹಾಗೂ 7 ಪೈಸೆ ಹೆಚ್ಚಳವಾಗಲಿದೆ. ಮೂರು ದಿನಗಳ ಹಿಂದೆ ಕೇಂದ್ರ ಸರ್ಕಾರ ಇಂಧನ ಮೇಲಿನ ಸೆಸ್ ಕಡಿತಗೊಳ್ಳಿಸುತ್ತಿದ್ದಂತೆ ಹಲವು ರಾಜ್ಯಗಳು ಸಹ ಬೆಲೆ ಇಳಿಕೆ ಮಾಡಿದ್ದವು. ಬಿಜೆಪಿ ಆಡಳಿತ ಇರುವ ರಾಜ್ಯಗಳು ಉಳಿದ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟು ಲೀಟರ್ಗೆ 2.50 ರೂಪಾಯಿ ಬೆಲೆ ತಗ್ಗಿಸಿದ್ದವು.
ಸಾರ್ವಜನಿಕರು ತೈಲ ಬೆಲೆ ಇಳಿಕೆಯ ಸಂತಸ ಕಳೆಯುವ ಮುನ್ನವೇ ಮತ್ತೆ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗ ಮಾಡಿದಂತಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ಹಾಗೂ ಮತ್ತಿತ್ತರ ಸಂಕಿರ್ಣ ಸಂದಿಗ್ಧ ಸ್ಥಿತಿಯಲ್ಲಿಯು ಆರ್ಬಿಐ ದಿನದ ಹಿಂದೆಯಷ್ಟೆ ಬಡ್ಡಿದರವನ್ನು ಯಥಾಸ್ಥಿತಿ ಕಾಪಾಡಿಕೊಂಡು ಆರ್ಥಿಕತೆಯನ್ನು ಸರಿದೂಗಿಸುವ ಪ್ರಯತ್ನ ಮಾಡಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.