ನಮ್ ರೂಪಾಯಿ ಸದೃಢ: ಊರ್ಜಿತ್ ಹೇಳೊದು ನಿಜಾನಾ?

Published : Oct 07, 2018, 02:52 PM IST
ನಮ್ ರೂಪಾಯಿ ಸದೃಢ: ಊರ್ಜಿತ್ ಹೇಳೊದು ನಿಜಾನಾ?

ಸಾರಾಂಶ

ರೂಪಾಯಿ ಅತ್ಯಂತ ಸದೃಢವಾಗಿದೆ ಎಂದ ಆರ್​ಬಿಐ ಗವರ್ನರ್! ನಾಲ್ಕನೇ ತ್ರೈಮಾಸಿಕ ನೀತಿ ಪ್ರಕಟಿಸಿದ ಆರ್​ಬಿಐ! ಬಾಹ್ಯ ಅಂಶಗಳ ಹರಡುವಿಕೆ ನಿಯಂತ್ರಿಸಲು ಸಾಧ್ಯವಿಲ್ಲ! ಉದ್ಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ರೂಪಾಯಿ ಸದೃಢ  

ಮುಂಬೈ(ಅ.7): ಇತರ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಅತ್ಯಂತ ಸದೃಢವಾಗಿದೆ ಎಂದು ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್​ ಸಮರ್ಥಿಸಿಕೊಂಡಿದ್ದಾರೆ.

ನಾಲ್ಕನೇ ತ್ರೈಮಾಸಿಕ ನೀತಿ ಪ್ರಕಟಿಸಿದ ಆರ್​ಬಿಐ , ಯಾವುದೇ ಬದಲಾವಣೆ ಮಾಡದೇ ಹಳೆಯ ಕ್ರಮಗಳನ್ನ ಮುಂದುವರೆಸಿತು.   ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್​ ವಿರುದ್ಧ ರೂಪಾಯಿ,  73.52 ರಿಂದ 74.10ಕ್ಕೆ ಜಿಗಿತ ಕಂಡಿತ್ತು.
 
ಈ ಕುರಿತು ಮಾತನಾಡಿದ ಊರ್ಜಿತ್ ಪಟೇಲ್, ಸದ್ಯದ ಪರಿಸ್ಥಿತಿಯಲ್ಲಿ  ಅಂತರಾಷ್ಟ್ರೀಯ ಮಟ್ಟದಲ್ಲಿ ಅಂದರೆ ಬಾಹ್ಯ ಅಂಶಗಳ ಹರಡುವಿಕೆಯನ್ನು ನಿಯಂತ್ರಿಸುವ ಹಕ್ಕು ನಮಗಿಲ್ಲ. ಆದರೆ, ಇತರ ಉದ್ಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ರೂಪಾಯಿ ಸದೃಢವಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು.   

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!