ಶುಕ್ರವಾರವೇ ‘ಲಕ್ಷ್ಮೀ’ಕಸಿದ ಕೇಂದ್ರ: ಎಲ್‌ಪಿಜಿ ಬೆಲೆ ಏರಿಕೆ!

By Web DeskFirst Published Nov 9, 2018, 5:17 PM IST
Highlights

ಸಬ್ಸಿಡಿ ಸಹಿತ ಅಡುಗೆ ಅನಿಲ ಬೆಲೆಯಲ್ಲಿ ಹೆಚ್ಚಳ! ಪ್ರತಿ ಸಿಲಿಂಡರ್‌ಗೆ 2 ರೂ. ಏರಿಕೆ! 505.34 ರೂ. ಇದ್ದ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ 507.42 ರೂ.! ಕಳೆದ ಜೂನ್‌ನಿಂದ ಸತತ ಆರು ತಿಂಗಳಿನಿಂದಲೂ ಲಿಂಡರ್ ಬೆಲೆಯಲ್ಲಿ ಹೆಚ್ಚಳ! ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ

ನವದೆಹಲಿ(ನ.9): ಕೇಂದ್ರ ಸರ್ಕಾರ ಎಲ್‌ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಹೆಚ್ಚಳ ಮಾಡಿದ್ದು, ದೇಶೀಯ ಅಡುಗೆ ಅನಿಲ ಎಲ್ ಪಿಜಿ ಸಿಲೆಂಡರ್‌ಗಳ ಬೆಲೆಯಲ್ಲಿ 2 ರೂ. ಹೆಚ್ಚಳ ಮಾಡಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14.2 ಕೆ.ಜಿ. ಸಬ್ಸಿಡಿ ಸಹಿತ ಸಿಲೆಂಡರ್ ಬೆಲೆ  505.34 ರೂ. ದಿಂದ 507.42 ರೂ. ಆಗಿದೆ. ಕೇಂದ್ರ ಇಂಧನ ಸಚಿವಾಲಯದ ಆದೇಶ ಅನುಸರಿಸಿ ಈ ಹೆಚ್ಚಳ ಮಾಡಲಾಗಿದೆ.

2017 ರ ಸೆಪ್ಟೆಂಬರ್‌ನಲ್ಲಿ 14.2 ಕೆ.ಜಿ ಸಿಲಿಂಡರ್ ಮತ್ತು 5 ಕೆಜಿ ಸಿಲಿಂಡರ್ ಗಳಿಗೆ ಗೆ ಸ್ಥಳೀಯ ಎಲ್‌ಪಿಜಿ ವಿತರಕರು ಕ್ರಮವಾಗಿ 48.89 ರೂ. ಮತ್ತು 24.20 ರೂ. ಕಮಿಷನ್ ಪಡೆಯಲಿದ್ದಾರೆ.

ಇದು ಈ ತಿಂಗಳಲ್ಲಿ ಎಲ್‌ಪಿಜಿ ಗ್ಯಾಸ್ ದರದಲ್ಲಿ ಆಗುತ್ತಿರುವ ಎರಡನೇ ಬಾರಿಯ ಏರಿಕೆಯಾಗಿದೆ. ಇದಕ್ಕೆ ಹಿಂದೆ ಮೂಲ ಬೆಲೆಗೆ ತೆರಿಗೆ ಹೆಚ್ಚಳವಾಗಿದ್ದ ಕಾರಣ ನವೆಂಬರ್ 1ರಂದು ಸಿಲೆಂಡರ್ ಒಂದಕ್ಕೆ 2.94 ರೂ. ಹೆಚ್ಚಳ ಮಾಡಲಾಗಿತ್ತು.

ಜಿಎಸ್ಟಿ ತೆರಿಗೆ ದರ ಹೆಚ್ಚಳವಾಗಿರುವ ಕಾರಣ ಜೂನ್ ನಿಂದ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಪ್ರತಿ ತಿಂಗಳೂ ಏರಿಕೆಯಾಗಿದೆ. ಇದುವರೆಗೆ  ಒಟ್ಟು ಬೆಲೆ 16.21 ರೂ.ಏರಿಕೆ ದಾಖಲಾಗಿದೆ.

ಇನ್ನು ಮುಂಬೈನಲ್ಲಿ 14.2 ಕೆ.ಜಿ. ಅಡಿಗೆ ಅನಿಲ ಸಿಲೆಂಡರ್ ಬೆಲೆ  505.05 ರೂ. ಆಗಿದ್ದರೆ, ಕೋಲ್ಕತಾದಲ್ಲಿ  510.70 ರೂ. ಚೆನ್ನೈನಲ್ಲಿ 495.39 ರೂ. ಇದೆ. ತೆರಿಗೆಗಳು ಹಾಗೂ ಸಾರಿಗೆ ವೆಚ್ಚದ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸವಿದೆ.

click me!