ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ; ಇಂದಿನಿಂದಲೆ ಪರಿಷ್ಕೃತ ದರ ಜಾರಿ!

By Suvarna NewsFirst Published Aug 22, 2021, 6:31 PM IST
Highlights
  • ಗಗನಕ್ಕೇರಿರುವ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ
  • ಇಂದಿನಿಂದಲೇ ನೂತನ ದರ ಜಾರಿ
  • ಈ ವಾರದಲ್ಲಿ 2ನೇ ಬಾರಿಗೆ ದರ ಇಳಿಕೆ

ನವದೆಹಲಿ(ಆ.22):  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಆದರೆ ಈ ವಾರ ಕೊಂಚ ನಿರಾಳ. ಕಾರಣ ಈ ವಾರದಲ್ಲಿ 2ನೇ ಬಾರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿದೆ. ದೇಶದೆಲ್ಲೆಡೆ ತೈಲ ಬೆಲೆಯಲ್ಲಿ 20 ಪೈಸಿ ಇಳಿಕೆಯಾಗಿದೆ. ಈ ವಾರದಲ್ಲಿ ಒಟ್ಟು 60 ಪೈಸೆ ಇಳಿಕೆಯಾಗಿದೆ.

"

ಎಲ್‌ಪಿಜಿ ಕನೆಕ್ಷನ್‌: ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟ ಐಒಸಿ!

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು 20 ಪೈಸೆ ವರೆಗೆ ಇಳಿಸಲಾಗಿದೆ. ಈ ಬೆಲೆ ಇಳಿಕೆ 20 ಪೈಸೆಯಾಗಿದ್ದರೂ ಒಂದು ಹಂತದ ಸಮಾಧಾನ ತಂದಿದೆ. ಏರಿಕೆಯಾಗುತ್ತಿದ್ದ ಬೆಲೆ ಇದೀಗ ಇಳಿಮುಖವಾಗಿರುವುದೇ ಸಮಾಧಾನ.

ಬೆಲೆ ಇಳಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.13 ರೂಪಾಯಿಯಾಗಿದ್ದು, ಡೀಸೆಲ್ ಬೆಲೆ 94.49 ರೂಪಾಯಿ ಆಗಿದೆ. ಏರಿಕೆ ರಾಕೆಟ್ ವೇಗದಲ್ಲಿ ಆಗಿದ್ದರೆ, ಇಳಿಕೆ ಸಿಟಿ ಬಸ್ ರೀತಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ದಿನದಿನಕ್ಕೂ ಏರುತ್ತಿದೆ ಪೆಟ್ರೋಲ್ ಬೆಲೆ : ಬೆಂಗಳೂರಲ್ಲೆಷ್ಟು..?

ದೆಹಲಿಯಲ್ಲಿ ಪರಿಷ್ಕೃತ ಪೆಟ್ರೋಲ್ ದರ 101.64 ರೂಪಾಯಿ ಆಗಿದ್ದರೆ ಡೀಸೆಲ್ ಬೆಲೆ 89.07 ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ಬೆಲೆ 107.66 ರೂಪಾಯಿ ಹಾಗೂ ಡೀಸೆಲ್ ಬೆಲೆ 96.64 ರೂಪಾಯಿ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 99.32 ರೂಪಾಯಿ ಹಾಗೂ ಡೀಸೆಲ್ ಬೆಲೆ 93.66 ರೂಪಾಯಿ ಆಗಿದೆ. ಇನ್ನು ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 101.93 ರೂಪಾಯಿ ಹಾಗೂ ಡೀಸೆಲ್ ಬೆಲೆ 94.49 ರೂಪಾಯಿ ಆಗಿದೆ. ಇನ್ನು ಹೈದಾರಾಬಾದ್‌ನಲ್ಲಿ ಪೆಟ್ರೋಲ್ ಬೆಲೆ 105.69 ರೂಪಾಯಿ ಹಾಗೂ ಡೀಸೆಲ್ ಬೆಲೆ 97.15 ರೂಪಾಯಿ ಆಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ. 

click me!