ಪೆಟ್ರೋಲ್ 8, ಡೀಸೆಲ್ 3 ತಿಂಗಳ ಕನಿಷ್ಟ ಮಟ್ಟಕ್ಕೆ: ಚಿಲ್ರೆ ಯಾವ ಲೆಕ್ಕಕ್ಕೆ?

By Web Desk  |  First Published Nov 30, 2018, 3:12 PM IST

ದೇಶದ ಮಹಾನಗರಗಳಲ್ಲಿ ಮತ್ತೆ ಇಳಿಕೆಯತ್ತ ಮುಖ ಮಾಡಿದ ತೈಲದರ! ಪೆಟ್ರೋಲ್ 8, ಡೀಸೆಲ್ 3 ತಿಂಗಳ ಕನಿಷ್ಟ ಮಟ್ಟಕ್ಕೆ ಬಂದು ತಲುಪಿದ ದರ! ಕಳೆದ 40 ದಿನಗಳಿಂದ ನಿರಂತರವಾಗಿ ಇಳಿಯುತ್ತಿರುವ ತೈಲದರ! ಜನತೆಯಲ್ಲಿ ಸಂತಸ ಮೂಡಿಸಿದ ನಿರಂತರ ತೈಲ ಬೆಲೆ ಇಳಿಕೆ


ನವದೆಹಲಿ(ನ.30): ಮಹತ್ವದ ಬೆಳವಣಿಗೆಯೊಂದರಲ್ಲಿ ತೈಲಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಪೆಟ್ರೋಲ್ 8 ತಿಂಗಳು ಮತ್ತು ಡೀಸೆಲ್ 3 ತಿಂಗಳ ಕನಿಷ್ಟ ಬೆಲೆಗೆ ಬಂದು ತಲುಪಿದೆ.

ಕಳೆದ 40 ದಿನಗಳಿಂದ ನಿರಂತರವಾಗಿ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದ್ದು, ಅದರಂತೆ ಇಂದೂ ಕೂಡ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.

Tap to resize

Latest Videos

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ನೋಡುವುದಾದರೆ..

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್ ದರ: 73.24 ರೂ.

ಡೀಸೆಲ್ ದರ: 68.13 ರೂ.

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್ ದರ: 78.80 ರೂ.

ಡೀಸೆಲ್ ದರ: 71.33 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್ ದರ: 75.24 ರೂ.

ಡೀಸೆಲ್ ದರ: 69.98 ರೂ.

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್ ದರ: 76.01 ರೂ.

ಡೀಸೆಲ್ ದರ: 71.95 ರೂ.

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್ ದರ: 73.81 ರೂ.

ಡೀಸೆಲ್ ದರ: 68.48 ರೂ.

ತೈಲೋತ್ಪನ್ನಗಳ ದರ ತಿಳಿಯಲು ಉಚಿತ ಎಸ್ಎಂಎಸ್ ಸೇವೆ:

ಇನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗೆ ಗ್ರಾಹಕರು ಎಸ್ಎಂಎಸ್ ಕಳುಹಿಸುವ ಮೂಲಕ ಆಯಾ ನಗರದಲ್ಲಿನ ದರಗಳ ಮಾಹಿತಿ ಪಡೆಯಬಹುದು. ಈ ಬಗ್ಗೆ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ

ಗ್ರಾಹಕರು https://www.iocl.com/Products/PetrolDieselPrices.aspx ಗೆ ಭೇಟಿ ಅಥವಾ 92249-92249 ನಂಬರ್ ಗೆ ಆಯಾ ಜಿಲ್ಲೆಯ ಕೋಡ್ ಅನ್ನು ಎಸ್ಎಂಎಸ್ ಮಾಡಿ ದರಗಳ ಮಾಹಿತಿ ಪಡೆಯಬಹುದು.

click me!