ಕೆಜಿಎಫ್ ನೋಡೊ ಮುನ್ನ ಪೆಟ್ರೋಲ್ ಬೆಲೆ ನೋಡೊದು ಚೆನ್ನ!

Published : Dec 21, 2018, 11:20 AM IST
ಕೆಜಿಎಫ್ ನೋಡೊ ಮುನ್ನ ಪೆಟ್ರೋಲ್ ಬೆಲೆ ನೋಡೊದು ಚೆನ್ನ!

ಸಾರಾಂಶ

ನಾಲ್ಕು ದಿನಗಳ ಕಾಲ ನಿರಂತರ ಏರಿಕೆ ಕಂಡಿದ್ದ ತೈಲದರ| ಎರಡು ದಿನಗಳಿಂದ ತಟಸ್ಥವಾಗಿದ್ದ ಪೆಟ್ರೋಲ್, ಡೀಸೆಲ್ ದರ| ಇಂದು ಇಳಿಕೆಯತ್ತ ಮುಖ ಮಾಡಿದ ತೈಲ ದರಗಳು| ದೇಶದ ಮಹಾನಗರಗಳಲ್ಲಿ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

ನವದೆಹಲಿ(ಡಿ.21): ನಾಲ್ಕು ದಿನಗಳ ಕಾಲ ನಿರಂತರವಾಗಿ ಏರಿಕೆಯತ್ತ ಮುಖ ಮಾಡಿ, ಕಳೆದ ಎರಡು ದಿನಗಳಿಂದ ಯಾವುದೇ ಬದಲಾವಣೆ ಕಾಣದಿದ್ದ ತೈಲ ದರಗಳಲ್ಲಿ ಇಂದು ಕೊಂಚ ಇಳಿಕೆ ಕಂಡಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ, ಡಾಲರ್ ಎದುರು ರೂಪಾಯಿ ಮೌಲ್ಯದ ಬಲವರ್ಧನೆ, ಪೆಟ್ರೋಲ್ ಮತ್ತು ಡೀಸೆಲ್ ಇಳಿಕೆಗೆ ಕಾರಣ ಎನ್ನಲಾಗಿದೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನ ಹರಿಸುವುದಾದರೆ..

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್- 70.46 ರೂ. (17 ಪೈಸೆ ಇಳಿಕೆ)

ಡೀಸೆಲ್- 64.39 ರೂ. (15 ಪೈಸೆ ಇಳಿಕೆ)

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್- 76.04 ರೂ. (17 ಪೈಸೆ ಇಳಿಕೆ)

ಡೀಸೆಲ್- 67.36 ರೂ. (16 ಪೈಸೆ ಇಳಿಕೆ)

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್- 72.51 ರೂ. (17 ಪೈಸೆ ಇಳಿಕೆ)

ಡೀಸೆಲ್- 66.12 ರೂ. (15 ಪೈಸೆ ಇಳಿಕೆ)

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್- 73.08 ರೂ.(18 ಪೈಸೆ ಇಳಿಕೆ)

ಡೀಸೆಲ್- 67.95 ರೂ.(16 ಪೈಸೆ ಇಳಿಕೆ)

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್- 71.00 ರೂ. (17 ಪೈಸೆ ಇಳಿಕೆ)

ಡೀಸೆಲ್- 64.71 ರೂ. (16 ಪೈಸೆ ಇಳಿಕೆ)

 

ಪೆಟ್ರೋಲ್ ರೇಟ್ ಏರಿಕೆ: ಎಲ್ಲಿ, ಎಷ್ಟು ದರ ತಿಳಿಯಬೇಕೆ?

ತುಂಬಾ ಸಿಂಪಲ್: ಇಳಿದ ಡೀಸೆಲ್, ಏರದ ಪೆಟ್ರೋಲ್!

ಅಯ್ಯೋ ರಾಮ: ಪೆಟ್ರೋಲ್ ದರ ಏರಿಕೆಗೆ ಮರುಜನ್ಮ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?