ಗಣರಾಜ್ಯೋತ್ಸವ ದಿನದಂದು ಪೆಟ್ರೋಲ್ ಬೆಲೆ ಇಳಿಕೆ| ದೇಶದ ಮಹಾನಗರಗಳಲ್ಲಿ ಇಳಿಕೆಯತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ|
ಬೆಂಗಳೂರು(ಜ.26): ಗಣರಾಜ್ಯೋತ್ಸವ ದಿನದಂದು ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿದಿದ್ದು, ವಾಹನ ಸವಾರರಲ್ಲಿ ಸಂತಸ ಮೂಡಿಸಿದೆ.
ಬೆಂಗಳೂರು ಸೇರಿ ದೇಶದ ಇತರೆ ಮಹಾ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಪೆಟ್ರೋಲ್ ಬೆಲೆಯಲ್ಲಿ 27 - 28 ಪೈಸೆ ಇಳಿಕೆ ಕಂಡುಬಂದಿದೆ. ಅಲ್ಲದೇ ಡೀಸೆಲ್ ಬೆಲೆಯಲ್ಲಿ 30-40 ಪೈಸೆ ಇಳಿಕೆ ಕಂಡುಬಂದಿದೆ.
undefined
ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಯತ್ತ ಗಮನಹರಿಸುವುದಾದರೆ...
ರಾಷ್ಟ್ರ ರಾಜಧಾನಿ ನವದೆಹಲಿ:
ಪೆಟ್ರೋಲ್-74.16 ರೂ.
ಡೀಸೆಲ್-67.31 ರೂ.
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:
ಪೆಟ್ರೋಲ್-76.77 ರೂ.
ಡೀಸೆಲ್-69.67 ರೂ.
ವಾಣಿಜ್ಯ ರಾಜಧಾನಿ ಮುಂಬೈ:
ಪೆಟ್ರೋಲ್- 79.76 ರೂ.
ಡೀಸೆಲ್-70.56 ರೂ.
ತಮಿಳುನಾಡು ರಾಜಧಾನಿ ಚೆನ್ನೈ:
ಪೆಟ್ರೋಲ್-77.03 ರೂ.
ಡೀಸೆಲ್-71.11 ರೂ.
ರಾಜ್ಯ ರಾಜಧಾನಿ ಬೆಂಗಳೂರು:
ಪೆಟ್ರೋಲ್-76.64ರೂ.
ಡೀಸೆಲ್-69.55 ರೂ.
ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್’ಗೆ 3,876 ರೂ. ಇದೆ.