ಹುಬ್ಬಳ್ಳಿ ಪ್ರಾಪರ್ಟಿ ಮತ್ತು ಲೈಫ್‌ಸ್ಟೈಲ್‌ ಎಕ್ಸ್‌ಪೋ: ಎಲ್ಲೆಲ್ಲಿ ಸೈಟ್‌ ಅದಾವ್ರಿ.. ಹ್ಯಾಂಗದಾವು ರೇಟು..!

Published : Jan 22, 2023, 07:30 PM IST
ಹುಬ್ಬಳ್ಳಿ ಪ್ರಾಪರ್ಟಿ ಮತ್ತು ಲೈಫ್‌ಸ್ಟೈಲ್‌ ಎಕ್ಸ್‌ಪೋ: ಎಲ್ಲೆಲ್ಲಿ ಸೈಟ್‌ ಅದಾವ್ರಿ.. ಹ್ಯಾಂಗದಾವು ರೇಟು..!

ಸಾರಾಂಶ

ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಡ್ರೀಮ್‌ ಹೋಮ್‌ ಮೆಗಾ ಪ್ರಾಪರ್ಟಿ ಮತ್ತು ಲೈಫ್‌ಸ್ಟೈಲ್‌ ಎಕ್ಸ್‌ಪೋ ಎರಡೇ ದಿನದಲ್ಲಿ ರಶೋ ರಶ್‌

ಹುಬ್ಬಳ್ಳಿ(ಜ.22):  ‘ಇನ್‌ಸ್ಟಾಲ್‌ಮೆಂಟ್‌ನ್ಯಾಗ್‌ ಸೈಟ್‌ ಸಿಕ್ತಾವ್‌ ಏನ್ರಿ.., ಎಲ್ಲೆಲ್ಲಿ ಸೈಟ್‌ ಅದಾವ್ರಿ.., ಅಪಾರ್ಟ್‌ಮೆಂಟ್‌ ಅಂದರೆ ಯಾವಾಗ ರೆಡಿ ಕೊಡ್ತಿರಿ.., ಹೋಮ್‌ ಲೋನ್‌ಗೆ ಎಷ್ಟು ಪರ್ಸಂಟೇಸ್‌ ಬಡ್ಡಿ ಬೀಲ್ತೈತಿ’..!. ಇಲ್ಲಿನ ರಾಯ್ಕರ್‌ ಮೈದಾನದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿರುವ ‘ಡ್ರೀಮ್‌ ಹೋಮ್‌ ಮೆಗಾ ಪ್ರಾಪರ್ಟಿ ಮತ್ತು ಲೈಫ್‌ಸ್ಟೈಲ್‌ ಎಕ್ಸ್‌ಪೋ’ದಲ್ಲಿ ಶನಿವಾರ ಆಗಮಿಸಿದ್ದ ಜನರಿಂದ ಮಳಿಗೆಗಳಲ್ಲಿ ಕೇಳಿ ಬಂದ ಪ್ರಶ್ನೆಗಳಿವು.

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಎಕ್ಸ್‌ಪೋ ವಾರಂತ್ಯದ ದಿನವಾದ ಶನಿವಾರ ಅತ್ಯಾದ್ಭುತ ಸ್ಪಂದನೆ ಸಿಕ್ಕಿತು. ಬೆಳಿಗ್ಗೆಯಿಂದಲೇ ಜನತೆ ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಪ್ರತಿ ಮಳಿಗೆಗೂ ಭೇಟಿ ನೀಡಿ ಸಮಗ್ರವಾಗಿ ವಿಚಾರಿಸುತ್ತಿದ್ದರು. ಸೈಟ್‌, ಅಪಾರ್ಟ್‌ಮೆಂಟ್‌, ಫಾಮ್‌ರ್‍ಲ್ಯಾಂಡ್‌, ವಾರದಲ್ಲೇ ನಿರ್ಮಿಸುವ ಔಟ್‌ ಹೌಸಿಂಗ್‌, ಟಿಎಂಟಿ ಬಾರ್‌, ಇಂಟಿರಿಯರ್‌ ಹೀಗೆ ಪ್ರತಿಯೊಂದು ಮಳಿಗೆಯೂ ರಶ್ಶೋ ರಶ್‌.

ಚೀನಾ ಆರ್ಥಿಕ ಬಿಕ್ಕಟ್ಟು: ಶೇ.93 ಸಂಪತ್ತು ಕಳೆದುಕೊಂಡ ಚೀನಾದ ಶ್ರೀಮಂತ ವ್ಯಕ್ತಿ

‘ನಮ್‌ ಜಾಗ ಇದ್ದರೆ ಮನಿ ಕಟ್ಟಿಕೊಡ್ತೀರಾ? ವಿಲ್ಲಾ ಮಾದರಿ ಮನೆಗಳು ಯಾವಾಗ ರೆಡಿ ಮಾಡಿಕೊಡಬಹುದು? ಎಂಬ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಸಾಗುತ್ತಿದ್ದರು. ಕೆಲವರು ತಮ್ಮ ಕನಸಿನ ಮನೆ ನಿರ್ಮಾಣಕ್ಕೆ ಏನೇನು ತಯಾರಿ ಮಾಡಿಕೊಳ್ಳಬೇಕು. ಎಷ್ಟುಬಂಡವಾಳ ಬೇಕಾಗುತ್ತದೆ ಎಂಬುದನ್ನು ಅಲ್ಲಿದ್ದ ಸಿಬ್ಬಂದಿಗಳಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು. ಬೆಳಿಗ್ಗೆ 10ರಿಂದ ಬರಲು ಶುರುವಾಗಿದ್ದ ಜನತೆ ರಾತ್ರಿ 9 ಆದರೂ ಮುಗಿಯುತ್ತಿರಲಿಲ್ಲ.

ಸಮಾಧಾನದ ಉತ್ತರ:

ಇನ್ನು ಎಕ್ಸ್‌ಪೋದಲ್ಲಿ ಮಳಿಗೆ ಹಾಕಿರುವ ಸಂಸ್ಥೆಗಳ ಸಿಬ್ಬಂದಿಗಳು ಕೂಡ ಅಷ್ಟೇ ಸಮಾಧಾನದಿಂದ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಇನ್ನು ಎಕ್ಸ್‌ಪೋ ವೀಕ್ಷಿಸಲು ಆಗಮಿಸಿದ್ದ ಸಚಿವರು, ಶಾಸಕರು, ಮಾಜಿ ಶಾಸಕರು, ಮುಖಂಡರೊಂದಿಗೆ ಸಿಬ್ಬಂದಿಯಷ್ಟೇ ಅಲ್ಲ. ವೀಕ್ಷಣೆಗೆ ಬಂದಿದ್ದ ಜನರು ಕೂಡ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಕೂಡ ಕಂಡು ಬಂತು. ಎರಡು ದಿನದಲ್ಲಿ ಹತ್ತಾರು ಪ್ಲಾಟ್‌, ನಾಲ್ಕಾರು ಅಪಾರ್ಚ್‌ಮೆಂಟ್‌ಗಳು ಬುಕ್‌ ಆಗಿದ್ದು ವಿಶೇಷ.

ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಸ್ವರ್ಣಾ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್‌.ವಿ. ಪ್ರಸಾದ ಹಾಗೂ ಪಾಲಿಕೆಯ ಕೆಲ ಸದಸ್ಯರು ಸೇರಿದಂತೆ ಹಲವು ಗಣ್ಯರು ಎಕ್ಸ್‌ಪೋಗೆ ಭೇಟಿ ನೀಡಿ ಶುಭ ಹಾರೈಸಿದರು.
ಬೆಂಗಳೂರು ನಂತರ ಅತಿವೇಗವಾಗಿ ಬೆಳೆಯುತ್ತಿರುವ, ಎರಡನೆಯ ದೊಡ್ಡ ನಗರವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಇಂತಹದೊಂದು ಎಕ್ಸ್‌ಪೋ ಏರ್ಪಡಿಸಿರುವುದು ಸಂತಸಕರ. ಒಂದೇ ಸೂರಿನಲ್ಲಿ ಮನೆ ನಿರ್ಮಾಣಕ್ಕೆ ಬೇಕಾದ ಅಗತ್ಯಗಳನ್ನೆಲ್ಲ ಪೂರೈಸುತ್ತಿರುವುದು ಶ್ಲಾಘನೀಯ. ಇದಕ್ಕಾಗಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಕಾರ್ಯ ಅಭಿನಂದನೀಯ ಎಂದು ಎಲ್ಲ ಮುಖಂಡರು ಶ್ಲಾಘಿಸಿದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!