ತಿಂಡಿ ಪ್ರೀಯರಿಗೆ ಪೇಟಿಎಂನಿಂದ ಒಂದೊಳ್ಳೆ ಸುದ್ದಿ: ರಿಲ್ಯಾಕ್ಸ್ ಆಗಿ ಓದಿ!

Published : Jan 19, 2019, 04:17 PM IST
ತಿಂಡಿ ಪ್ರೀಯರಿಗೆ ಪೇಟಿಎಂನಿಂದ ಒಂದೊಳ್ಳೆ ಸುದ್ದಿ: ರಿಲ್ಯಾಕ್ಸ್ ಆಗಿ ಓದಿ!

ಸಾರಾಂಶ

ನೀವು ಪೇಟಿಎಂ ಗ್ರಾಹಕರಾಗಿದ್ದರೆ ಇಲ್ಲಿದೆ ಸಿಹಿ ಸುದ್ದಿ| ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗುವತ್ತ ಪೇಟಿಎಂ ದಾಪುಗಾಲು| ಆನ್‌ಲೈನ್​ ಫುಡ್​ ಆರ್ಡರ್​ ಸೇವೆಗೆ ಮುಂದಾದ ಪೇಟಿಎಂ| ಜೊಮ್ಯಾಟೋ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡ ಪೇಟಿಎಂ| ಶೀಘ್ರದಲ್ಲೇ ದೇಶದ ಎಲ್ಲಾ ಮಹಾನಗರಗಳಲ್ಲಿ ಆನ್‌ಲೈನ್ ಫುಡ್ ಡಿಲೆವರಿ ಸೇವೆ

ನವದೆಹಲಿ(ಜ.19): ಡಿಜಿಟಲ್ ಮನಿ​ ವಾಲೆಟ್​​ ಅಗ್ರಗಣ್ಯ ಪೇಟಿಎಂ ಹೊಸ ಹೊಸ ಯೋಜನೆಗಳೊಂದಿಗೆ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗುವತ್ತ ದಾಪುಗಾಲಿಟ್ಟಿದೆ. ತನ್ನ ಬಳಕೆದಾರರಿಗೆ ಮತ್ತೊಂದು ಸೇವೆ ನೀಡಲು ಮುಂದಾಗಿರುವ ಪೇಟಿಎಂ, ಇದಕ್ಕಾಗಿ ಜೊಮ್ಯಾಟೋ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 

ಹೌದು, ಜೊಮ್ಯಾಟೋ ಜೊತೆ ಆನ್‌ಲೈನ್​ ಫುಡ್​ ಆರ್ಡರ್​ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಪೇಟಿಎಂ, ಸದ್ಯಕ್ಕೆ ಈ ಸೇವೆಯನ್ನು ಸದ್ಯಕ್ಕೆ ನವದೆಹಲಿ ಗ್ರಾಹಕರಿಗೆ ಪರಿಚಯಿಸಿದೆ. ಅಲ್ಲದೇ ಕೆಲವೇ ದಿನಗಳಲ್ಲಿ ದೇಶದ ಇತರ ನಗರಗಳಿಗೂ ಈ ಸೇವೆ ವಿಸ್ತರಿಸುವುದಾಗಿ ಸಂಸ್ಥೆ ತಿಳಿಸಿದೆ.

ಜೊಮ್ಯಾಟೋ ಕಂಪನಿ ಈಗಾಗಲೇ 80 ಸಾವಿರ ರೆಸ್ಟೋರೆಂಟ್​ಗಳ ಮೂಲಕ ಆನ್‌ಲೈನ್ ಆಹಾರ ಸೇವೆಯನ್ನು ಒದಗಿಸುತ್ತಿದೆ. ಸದ್ಯ 100 ನಗರಗಳಲ್ಲಿ ಫುಡ್​ ಡೆಲಿವರಿ ಸೇವೆಯನ್ನು ವಿಸ್ತರಿಸಿರುವ ಕಂಪನಿ, ಕಳೆದ ಡಿಸೆಂಬರ್​ ವೇಳೆಗೆ 28 ದಶಲಕ್ಷ ಆನ್‌ಲೈನ್ ಆರ್ಡರ್​ಗಳನ್ನು ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಪೇಟಿಎಂನಿಂದ ಬಳಕೆದಾರರಿಗೆ ಹೊಸ ಸೌಲಭ್ಯ

ಪೇಟಿಎಂ ಬ್ಯಾಂಕ್ ಮೇಲೆ ಆರ್‌ಬಿಐ ಮುನಿಸು: ಅದರಲ್ಲಿರೋ ನಿಮ್ಮ ಹಣ ಬಾಸು?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!