
ಬೆಂಗಳೂರು(ಅ.8): ಪೇಟಿಎಂ ಇ-ಕಾಮರ್ಸ್ ಮಾಲೀಕತ್ವದ ಪೇಟಿಎಂ ಮಾಲ್, ಅಕ್ಟೋಬರ್ 9-15 ರವರೆಗೆ `ಮಹಾ ಕ್ಯಾಶ್ ಬ್ಯಾಕ್ ಸೇಲ್' ನಡೆಸಲಿದೆ. ಈಗಾಗಲೇ ಅಗ್ರಗಣ್ಯ ಬ್ರ್ಯಾಂಡ್ ಗಳೊಂದಿಗೆ ಸಹಭಾಗಿತ್ವ ಮಾಡಿಕೊಳ್ಳಲಾಗಿದ್ದು, ವಿವಿಧ ಆಕರ್ಷಕ ಬಹುಮಾನಗಳಿಗಾಗಿ ಬರೋಬ್ಬರಿ 500 ಕೋಟಿ ರೂ.ಗಳಿಗೂ ಹೆಚ್ಚು ಹಣ ಹೂಡಿಕೆ ಮಾಡಿದೆ.
ಮಹಾ ಕ್ಯಾಶ್ ಬ್ಯಾಕ್ ಸೇಲ್' ಹೆಸರಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಫ್ಯಾಷನ್ ವಸ್ತ್ರಗಳ ವಹಿವಾಟನ್ನು ಹೆಚ್ಚಿಸುವ ಗುರಿಯನ್ನು ಪೇಟಿಎಂ ಹೊಂದಿದೆ. ಗ್ರಾಹಕರು ಕೊಳ್ಳುವ ವಸ್ತುಗಳಿಗೆ ಬ್ರ್ಯಾಂಡ್ ವಾರಂಟಿ ಜೊತೆಗೆ ಉಚಿತ ಹೋಂ ಡಿಲೆವರಿ ಆಯ್ಕೆ ಕೂಡ ನೀಡಿದೆ. ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ `ಪೇಟಿಎಂ ಮಾಲ್' ಇಡುತ್ತಿರುವ ರಚನಾತ್ಮಕ ಹೆಜ್ಜೆ ಎಂದೇ ಹೇಳಲಾಗುತ್ತಿದೆ.
ಸುಲಭ ಮಾಸಿಕ ಕಂತು:
ಗ್ರಾಹಕರ ಅನುಕೂಲಕ್ಕಾಗಿ ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿರುವ ಪೇಟಿಎಂ, ಯಾವುದೇ ಹೊರೆಯಿಲ್ಲದ ಸುಲಭ ಮಾಸಿಕ ಕಂತು ಪಾವತಿ ಸೌಲಭ್ಯವನ್ನು ಒದಗಿಸಿದೆ. ಮೊಬೈಲ್, ಲ್ಯಾಪ್‌ಟಾಪ್ ಮತ್ತಿತರ ಉತ್ಪನ್ನಗಳ ಖರೀದಿಯ ಮೇಲೆ ಶೇ.10ರಷ್ಟು ರಿಯಾಯಿತಿಯನ್ನೂ ಕೊಡಲಾಗುತ್ತಿದೆ.
ಕ್ಯಾಶ್‌ಬ್ಯಾಕ್ ವೋಚರ್:
ಪೇಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲ್' ಅವಧಿಯಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹೆಚ್ಚಿನ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಸಿಗಲಿವೆ. ಅಲ್ಲದೇ ಗ್ರಾಹಕರಿಗಾಗಿ 'ಟ್ರೆಷರ್ ಹಂಟ್' ಮತ್ತು `ಗೆಸ್ ದಿ ಪ್ರೈಸ್' ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳಲ್ಲಿ ಗೆಲ್ಲಲಿರುವ ಅದೃಷ್ಟಶಾಲಿ ಗ್ರಾಹಕರಿಗೆ ಸ್ಥಳದಲ್ಲೇ ಕ್ಯಾಶ್-ಬ್ಯಾಕ್ ವೋಚರ್ ಗಳನ್ನು ಕೊಡಲಾಗುವುದು. ಪೇಟಿಎಂ ಮಾಲ್ ಈ ಸಂದರ್ಭದಲ್ಲಿ 7 ರೆನಾಲ್ಟ್ ಕ್ವಿಡ್ ಕಾರುಗಳನ್ನು ತನ್ನ ಗ್ರಾಹಕರಿಗೆ ಬಹುಮಾನವಾಗಿ ನೀಡಲಿದೆ.
ಜೊತೆಗೆ, 999ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಖರೀದಿ ಮಾಡುವವರಿಗೆ ಪ್ರತೀ ಗಂಟೆಗೊಮ್ಮೆ `ಪೇಟಿಎಂ ಚಿನ್ನ' ಗೆಲ್ಲುವ ಅವಕಾಶವಿದೆ. ಅಲ್ಲದೆ, 10 ಸ್ಯಾಮಸಂಗ್ ಎಲ್ಇಡಿ ಟಿವಿ, 5 ಅಸೂಸ್ ಲ್ಯಾಪ್‌ಟಾಪ್ ಮತ್ತು ಐಫೋನ್ ಎಕ್ಸ್ಎಸ್ ಗಳು ಕೂಡ ಅದೃಷ್ಟವಂತ ಗ್ರಾಹಕರ ಪಾಲಾಗಲಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.