ಇದಪ್ಪ ಲಕ್ ಅಂದ್ರೆ: ಈ ಕಂಪನಿ ಎಂಪ್ಲಾಯ್ಸ್ ಈಗ ಲಕ್ಷಾಧೀಶ್ವರರು!

By Web DeskFirst Published Sep 20, 2018, 3:33 PM IST
Highlights

ಫ್ಲಿಪ್ ಕಾರ್ಟ್ ಸಿಬ್ಬಂದಿ ಶೀಘ್ರದಲ್ಲೇ ಲಕ್ಷಾಧೀಶ್ವರರು! ಉದ್ಯೋಗಿಯ ಷೇರು ಮಾಲೀಕತ್ವ ಯೋಜನೆ! ಷೇರುಗಳನ್ನು ನಗದಾಗಿ ಪರಿವರ್ತಿಸಲು ಅನುಮತಿ! ಫ್ಲಿಪ್ ಕಾರ್ಟ್ ಷೇರುಗಳನ್ನು ಖರೀದಿಸಿದ್ದ ವಾಲ್‌ಮಾರ್ಟ್

ಬೆಂಗಳೂರು(ಸೆ.20): ದೇಶದ ಪ್ರಖ್ಯಾತ ಇ - ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ನ ಕೆಲ ಸಿಬ್ಬಂದಿ ಶೀಘ್ರದಲ್ಲೇ ಲಕ್ಷಾಧೀಶ್ವರರಾಗಲಿದ್ದಾರೆ. ಕಂಪನಿಯನ್ನು ವಾಲ್‌ಮಾರ್ಟ್ ಸ್ವಾಧೀನಪಡಿಸಿಕೊಂಡ ಫಲವಾಗಿ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಕಂಪನಿಯ ಸಿಬ್ಬಂದಿ ಶ್ರೀಮಂತರಾಗುತ್ತಿದ್ದಾರೆ. 

ದೇಶದ ದೈತ್ಯ ಇ - ಕಾಮರ್ಸ್ ಸಂಸ್ಥೆಯಾಗಿದ್ದ ಫ್ಲಿಪ್ ಕಾರ್ಟ್ ನಲ್ಲಿ ವಾಲ್‌ಮಾರ್ಟ್ 1600 ಕೋಟಿ ಡಾಲರ್‌ನಷ್ಟು ಬಂಡವಾಳ ಹೂಡಿಕೆ ಮಾಡಿದೆ. ಇದಾದ ಕೆಲವೇ ವಾರಗಳ ಬಳಿಕ ಫ್ಲಿಪ್ ಕಾರ್ಟ್ ತಮ್ಮ ಸಿಬ್ಬಂದಿಗೆ ಪತ್ರ ಬರೆದಿದ್ದು, ಉದ್ಯೋಗಿಯ ಷೇರು ಮಾಲೀಕತ್ವ ಯೋಜನೆ( ಇಎಸ್ಓಪಿ)ಗಳನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಅನುಮತಿ ನೀಡಿರುವುದಾಗಿ ತಿಳಿಸಿದೆ.

ಒಂದು ಯೂನಿಟ್‌ಗೆ 126 ಡಾಲರ್‌ನಿಂದ 128 ಡಾಲರ್‌ವರೆಗೆ ( 9,074 ರೂ. -9,218 ರೂ.) ಬೆಲೆಯಲ್ಲಿ ತಮ್ಮ ಷೇರನ್ನು ನಗದನ್ನಾಗಿ ಪರಿವರ್ತಿಸಿಕೊಳ್ಳಲು ಅನುಮತಿ ನೀಡಿದೆ.  ಫ್ಲಿಪ್ ಕಾರ್ಟ್ ನ 1 ಕೋಟಿಗೂ ಅಧಿಕ ಷೇರುಗಳ ಪೈಕಿ 62 ಲಕ್ಷಕ್ಕೂ ಅಧಿಕ ಷೇರುಗಳನ್ನು ವಾಲ್‌ಮಾರ್ಟ್ ಕೊಂಡುಕೊಳ್ಳಲಿದೆ ಎಂದು ಸಂಸ್ಥೆ ಇತ್ತೀಚಿಗಷ್ಟೇ ಘೋಷಣೆ ಮಾಡಿತ್ತು.

ಹೀಗಾಗಿ, ಅಂದಾಜು 80 ಕೋಟಿ ರೂ. ಮೌಲ್ಯದ ಉದ್ಯೋಗಿಯ ಷೇರು ಮಾಲೀಕತ್ವ ಯೋಜನೆಗಳನ್ನು ಫ್ಲಿಪ್ ಕಾರ್ಟ್ ಸಿಬ್ಬಂದಿಯಿಂದ ಕೊಂಡುಕೊಳ್ಳಲಿದೆ.  ಇನ್ನು, ಈ ಕುರಿತು ಮಾಹಿತಿ ನೀಡಿರುವ ಫ್ಲಿಪ್ ಕಾರ್ಟ್‌ನ ವಕ್ತಾರ, ಇದು ನಮ್ಮ ಸಿಬ್ಬಂದಿಯ ಸೇವೆಗೆ ಸಿಕ್ಕ ಪ್ರತಿಫಲ ಹಾಗೂ ಬಹುಮಾನ ಎಂದು ತಿಳಿಸಿದೆ.

ಆದರೆ, ಈಗಿನ ಸಿಬ್ಬಂದಿಯ ಶೇ. 50 ರಷ್ಟು ಷೇರುಗಳ ಮೌಲ್ಯವನ್ನು ಸದ್ಯ ನಗದೀಕರಣಗೊಳಿಸಲಿದ್ದು, ಉಳಿದ ಶೇ. 25ರಷ್ಟು ಹಣವನ್ನು ಒಂದು ವರ್ಷದ ಬಳಿಕ ಹಾಗೂ ನಂತರದ ಶೇ. 25ರಷ್ಟು ಷೇರುಗಳ ಮೌಲ್ಯದ ಹಣವನ್ನು 2 ವರ್ಷಗಳ ಬಳಿಕ ನೀಡಲಾಗುವುದು.

click me!