ಪಾಪ ಪಾಕಿಸ್ತಾನ: ಹೀನಾಯ ಸ್ಥಿತಿ ತಲುಪಿದ ಆರ್ಥಿಕ ಸ್ಥಿತಿ!

By Web DeskFirst Published May 16, 2019, 7:48 PM IST
Highlights

ಹೀನಾಯ ಸ್ಥಿತಿ ತಲುಪಿದ ಪಾಕಿಸ್ತಾನದ ಆರ್ಥಿಕ ಸ್ಥಿತಿ| ಜಾಗತಿಕ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಕುಸಿತ ಕಂಡ ಪಾಕ್ ರೂಪಾಯಿ ಮೌಲ್ಯ| ಡಾಲರ್ ಎದುರು 146.25 ರೂ.ಗೆ ಬಂದು ತಲುಪಿದ ಪಾಕ್ ರೂಪಾಯಿ ಮೌಲ್ಯ| ಪಾಕಿಸ್ತಾನಕ್ಕೆ ಮುಳುವಾದ ಐಎಂಎಫ್ ಜೊತೆಗಿನ ಆರ್ಥಿಕ ನೆರವು ಒಪ್ಪಂದ|

ನ್ಯೂಯಾರ್ಕ್(ಮೇ.16): ಪಾಕಿಸ್ತಾನದ ಆರ್ಥಿಕ ಸ್ಥಿತಿ ಹೀನಾಯ ಸ್ಥಿತಿ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಏನು ಸಾಕ್ಷಿ ಬೇಕು ಹೇಳಿ. ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇ ಪಾಕಿಸ್ತಾನಕ್ಕೆ ಮುಳುವಾಗಿದೆ.

ಐಎಂಎಫ್ ಜೊತೆ 6 ಬಿಲಿಯನ್ ಡಾಲರ್ ನೆರವಿಗಾಗಿ ಪ್ರಾಥಮಿಕ ಒಪ್ಪಂದ ಮಾಡಿಕೊಂಡ ನಂತರ, ಪಾಕ್ ರೂಪಾಯಿ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಕುಸಿತ ದಾಖಲಿಸಿದೆ.

ಪಾಕಿಸ್ತಾನ ರೂಪಾಯಿ ಮೌಲ್ಯ ಇದೀಗ ಅಮೆರಿಕ ಡಾಲರ್ ಎದುರು 146.25 ರೂ.ಗೆ ಬಂದು ತಲುಪಿದೆ. ಕಳೆದ ವಾರ ಡಾಲರ್ ಎದುರು ಪಾಕ್ ರೂಪಾಯಿ ವಹಿವಾಟು 141 ರೂ. ಇತ್ತು. 

ಸದ್ಯ ಪಾಕ್ ಕೇಂದ್ರ ಬ್ಯಾಂಕ್ ನಿಂದಲೇ ರುಪಾಯಿ ವಿನಿಮಯ ದರ ನಿಯಂತ್ರಣ ಮಾಡಲಾಗುತ್ತಿದ್ದು, ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಕರೆನ್ಸಿ ವಿತರಕರೊಡನೆ ಸಭೆ ನಡೆಸಿದ್ದಾರೆ.

ಒಟ್ಟಿನಲ್ಲಿ ಅಭಿವೃದ್ದಿ ಕುಸಿತ, ವಿತ್ತೀಯ ಕೊರತೆ ಸೇರಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನ ಇದೀಗ ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿ ಬೇಯುತ್ತಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!