ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ, ಭಾರತದ ಕ್ರಮದಿಂದ ಕರಾಚಿ ಷೇರುಮಾರುಕಟ್ಟೆ ಭಾರಿ ಕುಸಿತ

Published : Apr 24, 2025, 11:55 AM ISTUpdated : Apr 24, 2025, 11:57 AM IST
ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ, ಭಾರತದ ಕ್ರಮದಿಂದ ಕರಾಚಿ ಷೇರುಮಾರುಕಟ್ಟೆ ಭಾರಿ ಕುಸಿತ

ಸಾರಾಂಶ

ಪಹಲ್ಗಾಮ್ ದಾಳಿಗೆ ಪ್ರತೀಕಾರ ಶುರುವಾಗಿದೆ. ಭಾರತದ ಒಂದೊಂದೇ ಕ್ರಮ ಪಾಕಿಸ್ತಾನವನ್ನು ಬುಡಮೇಲು ಮಾಡುತ್ತಿದೆ. ಸಿಂಧೂ ನದಿ ಒಪ್ಪಂದ ರದ್ದು, ವಾಘಾ ಗಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ ಬೆನ್ನಲ್ಲೇ ಇದೀಗ ಪಾಕಿಸ್ತಾನ ಷೇರುಮಾರುಕಟ್ಟೆ ಕುಸಿತಗೊಂಡಿದೆ.  

ಕರಾಚಿ(ಏ.24) ಅಮಾಯಕ ಹಿಂದೂಗಳ ಗುರಿಯಾಗಿಸಿ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸಿಂಧೂ ನದಿ ಒಪ್ಪಂದ, ವಾಘಾ ಬಾರ್ಡರ್ ಸ್ಥಗಿತ ಸೇರಿದಂತೆ ಹಲವು ಕ್ರಮ ಕೈಗೊಂಡಿದೆ. ಅಟ್ಟಾರಿ ವಾಘಾ ಬಾರ್ಡರ್ ಬಂದ್ ಮಾಡಿದ ಕಾರಣದಿಂದ ಪಾಕಿಸ್ತಾನಕ್ಕೆ ತೀವ್ರ ಹೊಡೆತ ಬಿದ್ದಿದೆ. ಕಾರಣ ಪಾಕಿಸ್ತಾನದ ವ್ಯಾಪಾರ  ವಹಿವಾಟು ಸ್ಥಗಿತಗೊಂಡಿದೆ. ಇರುವ ಆದಾಯವೂ ನಷ್ಟವಾಗಿದೆ. ಭಾರತದ ದಿಟ್ಟ ನಿರ್ಧಾರದಿಂದ ಪಾಕಿಸ್ತಾನದ ಷೇರುಮಾರುಕಟ್ಟೆ ಭಾರಿ ಕುಸಿತಗೊಂಡಿದೆ. ಕರಾಚಿ ಷೇರುಮಾರುಕಟ್ಟೆ  1,303.29 ಅಂಕ ಕುಸಿತಗೊಂಡಿದೆ. ಈ ಮೂಲರ ಹೂಡಿಕೆದಾರರ ಭಾರಿ ನಷ್ಟ ಅನುಭವಿಸಿದ್ದಾರೆ.

ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ
ಕರಾಚಿ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋವಾಗಿದೆ. ಭಾರತದ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗುತ್ತಿದದಂತೆ ಹಲವು ಹೂಡಿಕೆದಾರರು ಷೇರುಮಾರುಕಟ್ಟೆಯಿಂದ ಕ್ಯಾಪಿಟಲ್ ಹಿಂತೆಗೆದಿದ್ದಾರೆ. ಇದರಿಂದ ಕುಸಿತ ಆರಂಭಗೊಂಡಿದೆ. ಇದರ ಬೆನ್ನಲ್ಲೇ ವಾಘಾ ಗಡಿ ಮೂಲಕ ನಡೆಯುತ್ತಿದ್ದ ಭಾರತ ಪಾಕಿಸ್ತಾನ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಇದು ಷೇರು ಮಾರುಕಟ್ಟೆ ಮೇಲೂ ಹೊಡೆತ ನೀಡಿದೆ.

ಈಕ್ವಿಟಿ ಹೂಡಿಕೆದಾರರ ಭಾರಿ ನಷ್ಟ ಅನುಭವಿಸಿದ್ದರೆ. ಯುನೈಟೆಡ್ ಬ್ಯಾಂಕ್ ಲಿಮಿಟೆಡ್ (UBL), ಹಬ್ ಪವರ್ ಕಂಪನಿ (HUBCO)   ಹಬೀಬ್ ಮೆಟ್ರೋ ಬ್ಯಾಂಕ್, ಮಾರಿ ಪೆಟ್ರೊಲಿಯಂ, ಎನರ್ಗೋ ಕಾರ್ಪೋರೇಶನ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಷೇರುಗಳ ಮೌಲ್ಯ ಕುಸಿತಗೊಂಡಿದೆ. 

ಈ ಬೆಳವಣಿಗೆ ನಡುವೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತೊಂದು ಹೊಡೆತೆ ನೀಡಿದೆ. ಪಾಕಿಸ್ತಾನ ಜಿಡಿಪಿ ಬೆಳವಣಿಗೆ ಶೇಕಡಾ 2.6 ರಷ್ಟು ಕುಂಠಿತವಾಗಲಿದೆ ಎಂದು ಅಂದಾಜಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಪ್ರಮುಖವಾಗಿ ಪಾಕಿಸ್ತಾನದಲ್ಲಿನ ರಾಜಕೀಯ ಅಸ್ತಿರತೆ ಕಾರಣದಿಂದ ಜಿಡಿಪಿ ಬೆಳವಣಿಗೆ ಕುಸಿತವಾಗಲಿದೆ ಎಂದಿದೆ. 

ಪಹಲ್ಗಾಮ್ ದಾಳಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ ಪ್ರವಾಸಿ ತಾಣದಲ್ಲಿ ನಡೆದ ಅತೀ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಹಿಂದೂಗಳ ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ. ಈ ದಾಳಿಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಕರ್ನಾಟಕ ಸೇರದಂತೆ ಹಲವು ರಾಜ್ಯಗಳಿಂದ ಪ್ರವಾಸಕ್ಕೆ ತೆರಳಿದ್ದವರ ಮೇಲೆ ದಾಳಿ ನಡೆದಿದೆ. ಅಮಾಯಕರ ಮೇಲೆ ನಡೆದ ಪೂರ್ವ ನಿಯೋಜಿತ ದಾಳಿ ನಡೆದಿದೆ. 

ಪಹಲ್ಗಾಮ್ ದಾಳಿ ಬೆನ್ನಲ್ಲೇ ISIS ಕಾಶ್ಮೀರ್ ಉಗ್ರರಿಂದ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!