ಲಾಭ ಇದೆ, ಷೇರು ಮೌಲ್ಯ ಇಲ್ಲ: ಇನ್ಫೋಸಿಸ್ ಹೂಡಿಕೆದಾರನಿಗೆ ಬೇವು ಬೆಲ್ಲ!

By Web DeskFirst Published Oct 23, 2018, 10:46 AM IST
Highlights

ಇನ್ಫೋಸಿಸ್ ಎರಡನೇ ತ್ರೈಮಾಸಿಕ ವರದಿ ಪ್ರಕಟ! ಗಮನಾರ್ಹ ನಿವ್ವಳ ಲಾಭ ದಾಖಲಿಸಿದ ದಿಗ್ಗಜ ಐಟಿ ಸಂಸ್ಥೆ! ಇನ್ಫೋಸಿಸ್ ಕಂಪನಿ ಷೇರು ಮೌಲ್ಯದಲ್ಲಿ ಕುಸಿತ! ಉಪ-ಗುತ್ತಿಗೆ ವೆಚ್ಚ ಮತ್ತು ಉದ್ಯೋಗಿ ವೇತನ ಹೆಚ್ಚಳ! ಷೇರು ಕುಸಿತದ ಹಿನ್ನೆಲೆಯಲ್ಲಿ ಆತಂಕದಲ್ಲಿ ಇನ್ಫೋಸಿಸ್ ಹೂಡಿಕೆದಾರ

ಬೆಂಗಳೂರು(ಅ.23): ಭಾರತದ ಅತ್ಯಂತ ಪ್ರತಿಷ್ಠಿತ ಐಟಿ ಸಂಸ್ಥೆ ಇನ್ಫೋಸಿಸ್, ಕಳೆದ ವಾರವಷ್ಟೇ ಎರಡನೇ ತ್ರೈಮಾಸಿಕದ ಫಲಿತಾಂಶವನ್ನು ಇನ್ಫೋಸಿಸ್ ಪ್ರಕಟಿಸಿದೆ. ತ್ರೈಮಾಸಿಕ ವರದಿಯಲ್ಲಿ ನಿವ್ವಳ ಲಾಭ ದಾಖಲಿಸಿರುವ ಇನ್ಫೋಸಿಸ್, ಅದಾಗ್ಯೂ ತನ್ನ ಷೇರು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.

ಇನ್ಫೋಸಿಸ್ ನ ಉಪ-ಗುತ್ತಿಗೆ ವೆಚ್ಚಗಳು ಏರುತ್ತಿರುವುದು ಮತ್ತು ಸಿಬ್ಬಂದಿಯ ವೇತನ ಹೆಚ್ಚಳವಾಗುತ್ತಿರುವುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಉದ್ಯೋಗಿಗಳ ಸರಬರಾಜು ಸಂಬಂಧ ಕಂಪನಿಗಳಿಗೆ ಸಲ್ಲಿಸಬೇಕಾದ ಮೊತ್ತ ಸೆಪ್ಟೆಂಬರ್‌ನಲ್ಲಿ 1,523 ಕೋಟಿ ರೂ.ಗೆ ಏರಿಕೆಯಾಗಿದೆ. ಅದು ಮೊದಲು 1,291 ಕೋಟಿ ರೂ. ಇತ್ತು. 

ಕಂಪನಿಯ ಸಬ್‌ ಕಾಂಟ್ರ್ಯಾಕ್ಟರ್ ವೆಚ್ಚಗಳು ಶೇ.7.4ರಷ್ಟು ಏರಿಕೆಯಾಗಿದೆ. ವರ್ಷದ ಹಿಂದೆ ಅದು ಶೇ.6.2ರಷ್ಟಿತ್ತು. ಅಲ್ಲದೇ, ಇತ್ತೀಚೆಗಷ್ಟೇ 700 ದಶಲಕ್ಷ ಡಾಲರ್‌ ಮೌಲ್ಯದ ವೆರಿಝೋನ್ ಒಪ್ಪಂದವನ್ನು ಇನ್ಫೋಸಿಸ್ ಮಾಡಿಕೊಂಡಿದ್ದು, ಇದರಿಂದ ಉದ್ಯೋಗಿಗಳಿಗೆ ಸಂಬಂಧಿಸಿದ ವೆಚ್ಚ ಏರಿಕೆಯಾಗಿದೆ.

ಅಲ್ಲದೇ ಇವರಿಗೆ ಮುಂದಿನ ಎರಡು ವರ್ಷಗಳ ಕಾಲ ಇನ್ಫೋಸಿಸ್ ದುಬಾರಿ ವೇತನ ನೀಡುವುದಾಗಿ ಭರವಸೆ ನೀಡಲಾಗಿದೆ. ಒಪ್ಪಂದದ ಪರಿಣಾಮ ಇನ್ಫೋಸಿಸ್ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಇದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

click me!